ನಾಮಪತ್ರ ಸಲ್ಲಿಕೆಗೆ ಯೋಗೇಶ್ವರ್​ ಸಿದ್ಧತೆ: ಟ್ವಿಸ್ಟ್ ಕೊಟ್ಟ ಕುಮಾರಸ್ವಾಮಿಗೆ ಬಂದ ದೆಹಲಿ ಕರೆ

ಕ್ಷಣಕ್ಕೊಂದು ತಿರುವು.. ನಿಮಿಷಕ್ಕೊಂದು ತಂತ್ರಗಾರಿಕೆ. ಚನ್ನಪಟ್ಟಣ ಚದುರಂಗದಾಟದಲ್ಲಿ ಟಿಕೆಟ್ ಕದನ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಿಂತಲೂ ರೋಚಕವಾಗಿದೆ. ಬೈಎಲೆಕ್ಷನ್ ಅಖಾಡದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವ ಜಿದ್ದಿಗೆ ಬಿದ್ದ ಸಿಪಿ ಯೋಗೇಶ್ವರ್ ಹೆಜ್ಜೆಯೇ ಇನ್ನೂ ನಿಗೂಢವಾಗಿದೆ. ಎನ್​ಡಿಎ ಟಿಕೆಟ್​ ಸಿಗುತ್ತೆ ಎನ್ನುವ ಭರವಸೆಯಲ್ಲೇ ಇದ್ದಾರೆ. ಆದ್ರೆ, ಟಿಕೆಟ್​ ಘೋಷಣೆಗೂ ಮುನ್ನವೇ ನಾಮಪತ್ರ ಸಲ್ಲಿಕೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಯೋಗೇಶ್ವರ್​ ಸಿದ್ಧತೆ: ಟ್ವಿಸ್ಟ್ ಕೊಟ್ಟ ಕುಮಾರಸ್ವಾಮಿಗೆ ಬಂದ ದೆಹಲಿ ಕರೆ
ಯೋಗೇಶ್ವರ್- ಕುಮಾರಸ್ವಾಮಿ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 23, 2024 | 10:14 AM

ಬೆಂಗಳೂರು/ರಾಮನಗರ, (ಅಕ್ಟೋಬರ್ 23): ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದೇ ತಿವ್ರ ಕುತೂಹಲ ಮೂಡಿಸಿದೆ. ಸಿಪಿ ಯೋಗೇಶ್ವರ್ ಪಟ್ಟು ಬಿಡದ್ದಕ್ಕೆ ದೆಹಲಿ ಅಂಗಳಕ್ಕೆ ಟಿಕೆಟ್ ನಿರ್ಧಾರದ ಚೆಂಡು ಪುಟಿದಿದೆ. ಈ ಹೊತ್ತಿನಲ್ಲೇ ಸಿಪಿವೈ, ಸಮಾಜವಾದಿ ಪಕ್ಷದಿಂದ ಬಿ ಫಾರಂ ಪಡೆದಿದ್ದಾರೆ. ಇಂಡಿಯಾ ಮಿತ್ರಕೂಟ ಬೆಂಬಲಿತ ಪಕ್ಷವಾಗಿರುವ ಎಸ್​ಪಿ ಪಕ್ಷದ ನಾಯಕರ ಜತೆ ಕಾಣಿಸಿಕೊಂಡಿದ್ದುಮ ಅಖಾಡ ಮತ್ತಷ್ಟು ರಂಗೇರಿದೆ. ಇನ್ನು ನಾಳೆಯೇ (ಅಕ್ಟೋಬರ್ 24) ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಸಿಪಿಪೈ ಸಿದ್ಧತೆ

ನವೆಂಬರ್ 13ರಂದು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದ್ದು, ಅಕ್ಟೋಬರ್​ 25ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಹೀಗಾಗಿ ಸಿಪಿ ಯೋಗೇಶ್ವರ್​ ಅವರು ನಾಮಪತ್ರ ಸಲ್ಲಿಕೆಗೆ ಒಂದು ದಿನ ಬಾಕಿ ಇರುವಾಗಲೇ ಅಂದರೆ ನಾಳೆ(ಅಕ್ಟೋಬರ್ 23) ಉಮೇದುವಾರಿಕೆ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದು, ಟಿಕೆಟ್ ಏನಾದ್ರೂ ಇರಲಿ ನಾಮಪತ್ರ ಸಲ್ಲಿಕೆಗೆ ರೆಡಿ ಆಗಿ ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ. ಆದ್ರೆ, ಯಾವ ಪಾರ್ಟಿಯಿಂದ ಎನ್ನುವುದೇ ಸಸ್ಪೆನ್ಸ್ ಆಗಿಯೇ ಉಳಿದಿದೆ.

ಇದನ್ನೂ ಓದಿ: ಯೋಗೇಶ್ವರ್​​​ಗಾಗಿ ಕಾದು ಕುಳಿತ ಕಾಂಗ್ರೆಸ್, ಒಂದು ವೇಳೆ ಕೈಕೊಟ್ಟರೆ ಪ್ಲಾನ್ ಬಿ ರೆಡಿ

ಹೊಸ ಟ್ವಿಸ್ಟ್ ಕೊಟ್ಟ ದೆಹಲಿ ಫೋನ್

ಇನ್ನು ಚನ್ನಪಟ್ಟಣದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಬೇಡ ಎಂದು ಯೋಗೇಶ್ವರ್​ಗೆ ಬಿಜೆಪಿ ನಾಯಕರು ಸೂಚಿಸಿದ್ದಾರೆ. ಆದ್ರೆ, ಸಮಾಜವಾದಿ ಪಕ್ಷದಿಂದ ಸೈನಿಕ ಬಿ ಫಾರಂ ಪಡೆದು ಹೊಸ ಆಟ ಶುರು ಮಾಡಿದ್ದಾರೆ. ಹೀಗೆ ಅತ್ತ ಯೋಗೇಶ್ವರ್ ಹೆಜ್ಜೆ ಹೆಜ್ಜೆಗೊಂದು ದಾಳ ಉರುಳಿಸುತ್ತಿದ್ದರೆ, ಇತ್ತ ಕುಮಾರಸ್ವಾಮಿ ಕೊನೆ ಹಂತದಲ್ಲಿ ರಣತಂತ್ರ ರೂಪಿಸಿದ್ದಾರೆ. ಬೆಂಗಳೂರಿನಲ್ಲಿ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರ ಜೊತೆ ದಳಪತಿಗಳು ಸಭೆ ನಡೆಸಿದ್ದು, ನಿಖಿಲ್​ಗೆ ಟಿಕೆಟ್ ನೀಡುವಂತೆ ತೆನೆ ಕಾರ್ಯಕರ್ತರು ಮನವಿ ಮಾಡಿದ್ರೆ, ಅಭ್ಯರ್ಥಿ ಹೆಸರು ನಿನ್ನೆಯೇ ಘೋಷಿಸಲು ಸಜ್ಜಾಗಿದ್ದರು. ಆದರೆ ಸಭೆ ಮಧ್ಯೆ ಬಿಜೆಪಿ ದೆಹಲಿ ನಾಯಕರಿಂದ ಹೆಚ್​ಡಿಕೆಗೆ ಕರೆ ಬಂದಿತ್ತು. ಹೀಗಾಗಿ ಕುಮಾರಸ್ವಾಮಿ, ದೆಹಲಿಯಿಂದ ಯಾವ ಸಂದೇಶ ಬರುತ್ತೆ ಎಂದು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ..

ಚನ್ನಪಟ್ಟಣ ಅಭ್ಯರ್ಥಿ ಹೆಸರು ಘೋಷಿಸಲು ಮುಂದಾಗಿದ್ದ ಹೆಚ್​​ಡಿಕೆಗೆ ದೆಹಲಿ ಬಿಜೆಪಿ ನಾಯಕರಿಂದ ಬಂದಿದ್ದ ಕರೆ ಟ್ವಿಸ್ಟ್ ಕೊಟ್ಟಿದೆ. ಹೀಗಾಗಿ ಅಭ್ಯರ್ಥಿ ಆಯ್ಕೆ ಗುಟ್ಟನ್ನ ಇನ್ನೂ ಬಿಟ್ಟುಕೊಟ್ಟಿಲ್ಲ. ಬಿಜೆಪಿಯಿಂದ ಯಾವ ನಿರ್ಧಾರ ತೆಗೆದುಕೊಂಡರೂ ಬದ್ಧ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ದೆಹಲಿಯಲ್ಲಿ ಬೀಡು ಬಿಟ್ಟಿರುವ ಅಶೋಕ್ ಆ್ಯಂಡ್ ಟೀಮ್ ಸ್ವಲ್ಪ ಕಾಯಿರಿ ಅಂತಿದೆ. ಚನ್ನಪಟ್ಟಣದ ಟಿಕೆಟ್ ಚೆಂಡು ಹೈಕಮಾಂಡ್ ಅಂಗಳದಲ್ಲಿದ್ದು ಕೊನೆಯ ಕ್ಷಣದಲ್ಲಿ ಏನಾಗಲಿದೆ ಎನ್ನುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:37 am, Wed, 23 October 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ