ಚಿಕ್ಕಬಳ್ಳಾಪುರ: ಪೊಲೀಸರಿಗೆ ಪ್ರಾಣ ಬೆದರಿಕೆ; ಆರೋಪಿ ಬಂಧನ!, ಏನಿದು ಕಥೆ ಅಂತೀರಾ?
ಪೊಲೀಸರ ತನಿಖೆಗೆ ಸಹಕರಿಸದೇ ಪೊಲೀಸರ ನೋಟಿಸನ್ನು ಸ್ವೀಕರಿಸದೇ ಭೇಟಿಗೆ ಬಂದ ಪೊಲೀಸರನ್ನು ತಳ್ಳಿ ಪ್ರಾಣ ಬೆದರಿಕೆ ಹಾಕಿದ ಆರೋಪದ ಹಿನ್ನಲೆ ಚಿಕ್ಕಬಳ್ಳಾಪುರ (Chikkaballapur) ನಗರಠಾಣೆ ಪೊಲೀಸರು ಆರೋಪಿ ಸೂರ್ಯನಾರಾಯಣಾಚಾರಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ, ನ.22: ಐಪಿಸಿ ಕಲಂ 420 ವಂಚನೆ ಪ್ರಕರಣವೊಂದರಲ್ಲಿ ತನಿಖೆ ನಡೆಸುತ್ತಿದ್ದ ಪೊಲೀಸರ ತನಿಖೆಗೆ ಸಹಕರಿಸದೇ ಪೊಲೀಸರ ನೋಟಿಸನ್ನು ಸ್ವೀಕರಿಸದೇ ಭೇಟಿಗೆ ಬಂದ ಪೊಲೀಸರನ್ನು ತಳ್ಳಿ ಪ್ರಾಣ ಬೆದರಿಕೆ ಹಾಕಿದ ಆರೋಪದ ಹಿನ್ನಲೆ ಚಿಕ್ಕಬಳ್ಳಾಪುರ (Chikkaballapur) ನಗರಠಾಣೆ ಪೊಲೀಸರು ಆರೋಪಿ ಸೂರ್ಯನಾರಾಯಣಾಚಾರಿ ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ನಿವಾಸಿ ಸೂರ್ಯನಾರಾಯಣಾಚಾರಿ ಮೇಲೆ ಐಪಿಸಿ ಕಲಂ 420ರಂತೆ ಪ್ರಕರಣ ಸಂಖ್ಯೆ : 103/2023 ಹಾಗೂ 104/2023 ಮೊಕದ್ದಮೆಗಳು ದಾಖಲಾಗಿವೆ. ಇದೇ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಚಿಕ್ಕಬಳ್ಳಾಪುರ ನಗರಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣದ ಆರೋಪಿಯಾಗಿರುವ ಸೂರ್ಯನಾರಾಯಣಚಾರಿ ಪೊಲೀಸರ ತನಿಖೆಗೆ ಸಹಕರಿಸದ ಕಾರಣ ನಗರಠಾಣೆ ಪೊಲೀಸರು ಆರೋಪಿ ಸೂರ್ಯನಾರಾಯಣಚಾರಿಗೆ ನೋಟೀಸ್ ಜಾರಿ ಮಾಡಿ, ಸ್ವೀಕೃತಿ ಪಡೆಯಲು ಮುಂದಾಗಿದ್ದಾರೆ. ಆಗ ಆರೋಪಿ ರಂಪಾಟ ಮಾಡಿ, ಗೂಂಡಾವರ್ತನೆ ತೋರಿದ್ದಾನೆ.
ಪೊಲೀಸರನ್ನು ತಳ್ಳಿ ಪ್ರಾಣ ಬೆದರಿಕೆ ಆರೋಪ
ಪ್ರಕರಣದ ಎ1 ಆರೋಪಿಯಾಗಿರುವ ಸೂರ್ಯನಾರಾಯಣಚಾರಿಗೆ ನೋಟೀಸ್ ನೀಡಲು ಚಿಕ್ಕಬಳ್ಳಾಪುರ ನಗರಠಾಣೆ ಸಿಬ್ಬಂದಿ ಪಕ್ಕೀರಜ್ಜ ಗೊಂದಿ ಹಾಗೂ ಹರೀಶ್ ಎನ್ನುವವರು ನಿನ್ನೆ(ನ.21) ಚಿಕ್ಕಬಳ್ಳಾಪುರ ನಗರದ ಗಂಗಮ್ಮಗುಡಿ ರಸ್ತೆ ಬಳಿ ಸೂರ್ಯನಾರಾಯಣಚಾರಿಗೆ ನೋಟೀಸ್ ಕೊಡಲು ಮುಂದಾಗಿದ್ದಾರೆ. ಆಗ ಪೊಲೀಸರಿಗೆ ಆರೋಪಿ ಪರಿಚಿತನಾಗಿದ್ದರೂ, ಪೊಲೀಸ್ ಸಿಬ್ಬಂದಿಗಳನ್ನು ತಳ್ಳಿ, ತನ್ನನ್ನು ಮುಟ್ಟಿದರೆ ಪೊಲೀಸರನ್ನು ಸುಮ್ಮನೇ ಬಿಡುವುದಿಲ್ಲವೆಂದು ಪ್ರಾಣ ಬೆದರಿಕೆ ಹಾಕಿ, ಸರ್ಕಾರಿ ಕರ್ತವ್ಯಕ್ಕೆ ಅಡಚಣೆ ಉಂಟು ಮಾಡಿದ್ದಾನೆ. ಇದರಿಂದ ಚಿಕ್ಕಬಳ್ಳಾಪುರ ನಗರಠಾಣಾ ಪೊಲೀಸರು ಆರೋಪಿಯ ವಿರುದ್ಧ ಐಪಿಸಿ 353 ಸೆಕ್ಷನ್‍ಯಡಿ ಮೊಕದ್ದಮೆ ದಾಖಲಿಸಿದ್ದಾರೆ.
ಆರೋಪಿ ಬಂಧಿಸಿ ವಿಚಾರಣೆ
ಇನ್ನು ಪ್ರಕರಣದ ಆರೋಪಿ ಸೂರ್ಯನಾರಾಯಣಚಾರಿ ಪೊಲೀಸರ ತನಿಖೆಗೆ ಸಹಕರಿಸದೇ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಗೂಂಡಾ ವರ್ತನೆ ಮಾಡಿದ ಹಿನ್ನಲೆ ಚಿಕ್ಕಬಳ್ಳಾಪುರ ನಗರಠಾಣೆಯ ಹೆಚ್ಚುವರಿ ಸಿಬ್ಬಂದಿಗಳು ಆಗಮಿಸಿ ಸೂರ್ಯನಾರಾಯಣಚಾರಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ