AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಬೆಟ್ಟ, ಸ್ಕಂದಗಿರಿ ಸೇರಿ ಈ ಜಾಗಗಳಿಗೆ ಪಿಕ್​ನಿಕ್ ಹೋಗುವವರೇ ಎಚ್ಚರ: ಚಿಕ್ಕಬಳ್ಳಾಪುರದಲ್ಲಿ ಹೆಚ್ಚಿದೆ ಚಿರತೆ ಕಾಟ

ಮೈಸೂರು, ಚಿಕ್ಕಮಗಳೂರು ಜಿಲ್ಲೆಗಳು ಸೇರಿದಂತೆ ಕೆಲ ದಿನಗಳಿಂದ ಚಿಕ್ಕಬಳ್ಳಾಪುರದಲ್ಲಿ ಚಿರತೆಗಳ ಹಾವಳಿ ಹೆಚ್ಚಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ. ನಂದಿ ಬೆಟ್ಟದಂತಹ ಪ್ರವಾಸಿ ತಾಣಗಳಲ್ಲಿಯೂ ಚಿರತೆಗಳ ಹಿಂಡು ಬೀಡುಬಿಟ್ಟಿದ್ದು, ಪ್ರವಾಸಿಗರಲ್ಲಿ ಭೀತಿ ಮನೆಮಾಡಿದೆ. ಇದರಿಂದ ರೈತರು ತೋಟಗಳಿಗೆ ಹೋಗಲು ಹಿಂಜರಿಯುತ್ತಿದ್ದು, ಚಿರತೆಗಳಿಂದ ಹೆದರುವ ಅಗತ್ಯವಿಲ್ಲವೆಂದೂ, ಚಿರತೆ ಕಾಣಿಸಿದಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ನಂದಿಬೆಟ್ಟ, ಸ್ಕಂದಗಿರಿ ಸೇರಿ ಈ ಜಾಗಗಳಿಗೆ ಪಿಕ್​ನಿಕ್ ಹೋಗುವವರೇ ಎಚ್ಚರ: ಚಿಕ್ಕಬಳ್ಳಾಪುರದಲ್ಲಿ ಹೆಚ್ಚಿದೆ ಚಿರತೆ ಕಾಟ
ಮೈಸೂರಲ್ಲಿ ಹುಲಿ ಕಾಟ ಆಯ್ತು, ಈಗ ಚಿಕ್ಕಬಳ್ಳಾಪುರದಲ್ಲಿ ಚಿರತೆ ಕಾಟ
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Dec 01, 2025 | 8:59 AM

Share

ಚಿಕ್ಕಬಳ್ಳಾಪುರ, ಡಿಸೆಂಬರ್ 1: ಕಳೆದ ಹಲವು ದಿನಗಳಿಂದ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹುಲಿ, ಚಿರತೆ (Cheetah) ದಾಳಿಗಳು ಹೆಚ್ಚಿವೆ. ಅದರಂತೆಯೇ ಚಿಕ್ಕಬಳ್ಳಾಪುರ ನಗರ ಹೊರವಲಯದ ಬಳಿ ಚಿರತೆಗಳ ಹಿಂಡೇ ಕಾಣಿಸಿಕೊಂಡಿದೆ. ಈ ಚಿರತೆಗಳು ಗ್ರಾಮದಲ್ಲಿನ ಹಸು, ನಾಯಿಗಳನ್ನು ಬೇಟೆಯಾಡುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಸಾಕು ಪ್ರಾಣಿಗಳನ್ನು ತಿಂದು ತೇಗುತ್ತಿರುವ ಚಿರತೆಗಳು

ನಂದಿಬೆಟ್ಟ, ಸ್ಕಂದಗಿರಿ ಸೇರಿ ಹಲವು ಬೆಟ್ಟಗುಡ್ಡಗಳಿಂದ ಕೂಡಿರುವ ಈ ಜಿಲ್ಲೆಯಯಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ವಿರಳ. ಹೀಗಿರುವಾಗ ಭಾನುವಾರ (ನ.30) ತಿಪ್ಪೇನಹಳ್ಳಿ ಗ್ರಾಮದ ಕಲ್ಲು ಬಂಡೆಗಳ ಮೇಲೆ ಚಿರತೆಗಳು ಕಾಣಿಸಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸುಮಾರು ದಿನಗಳಿಂದ ಚಿರತೆಗಳ ಹಿಂಡು ಬೀಡುಬಿಟ್ಟಿದ್ದು, ಪ್ರತಿದಿನ ಒಂದೊಂದು ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ.

ಕಳೆದ ಕೆಲವು ದಿನಗಳ ಹಿಂದೆ ಮುದ್ದೇನಹಳ್ಳಿಯ ವಿಟಿಯು ಕಾಲೇಜು ಕ್ಯಾಂಪಸ್, ಮುದ್ದೇನಹಳ್ಳಿಯ ಸತ್ಯಸಾಯಿ ಆಶ್ರಮ ಸೇರಿದಂತೆ ಹಲವು ಕಡೆಗಳಲ್ಲಿ ಚಿರತೆಗಳು ಕಾಣಿಸಿವೆ ಎಂದು ತಿಳಿದು ಬಂದಿದೆ. ಚಿರತೆಗಳು ನಗರದ ಹಲವೆಡೆ ನಾಯಿಗಳು, ಹಸು, ನವಿಲುಗಳನ್ನು ಬೇಟೆಯಾಡಿದ್ದು, ಇದರಿಂದ ರೈತರು ತಮ್ಮ ತೋಟಗಳಿಗೆ ಹೋಗಲೂ ಹಿಂದೇಟು ಹಾಕುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆಗಳು ಮನುಷ್ಯರನ್ನು ಕಂಡರೆ ಭಯ ಬೀಳುತ್ತವೆ. ಯಾರೂ ಹೆದರುವ ಅವಶ್ಯಕತೆಯಿಲ್ಲ. ಚಿರತೆಗಳು ಕಾಣಿಸಿದರೆ ಏನು ಮಾಡಬೇಡಿ, ನಮಗೆ ತಿಳಿಸಿ ಎಂದಿದ್ದಾರೆ.

ಇದನ್ನೂ ಓದಿ ಚಿಕ್ಕಮಗಳೂರು: ಮಕ್ಕಳ ಮೇಲೆ ‌ದಾಳಿ ಮಾಡಿದ್ದ ಚಿರತೆ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿ 

ಮಕ್ಕಳ ಮೇಲೆ ಚಿರತೆ ದಾಳಿ

ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಸೇರಿದಂತೆ ಇತ್ತೀಚೆಗೆ ಹಲವು ಜಾಗಗಳಲ್ಲಿ ಚಿರತೆಗಳು ಕಾಣಸಿಗುತ್ತಿವೆ. ಚಿಕ್ಕಮಗಳೂರಿನ ತರೀಕೆರೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಕಂಡುಬಂದ ಚಿರತೆ ಮಕ್ಕಳ ಮೇಲೆ ‌ದಾಳಿ ಮಾಡಿತ್ತು. ಓರ್ವ ಬಾಲಕಿಯನ್ನು ಬಲಿ ಪಡೆದು ಮತ್ತೊಬ್ಬ ಬಾಲಕನ ಮೇಲೆ ‌ದಾಳಿ ಮಾಡಿದ್ದ ಚಿರತೆಯನ್ನು ಜೀವಂತ ಅಥವಾ ಜೀವ ರಹಿತವಾಗಿ ಹಿಡಿಯಲು ಅರಣ್ಯ ಇಲಾಖೆಗೆ ಮುಂದಾಗಿತ್ತು. ಈ ವೇಳೆ  ಸೆರೆ ಹಿಡಿಯಲು ತೆರಳಿದ್ದ ಸಿಬ್ಬಂದಿ ಮೇಲೆ ಚಿರತೆ ದಾಳಿಗೆ ಯತ್ನಿಸಿದ್ದು, ಗುಂಡು ಹಾರಿಸಿ‌ ಚಿರತೆಯನ್ನು ಹತ್ಯೆ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:44 am, Mon, 1 December 25

ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ಸಾಯಿ ಕುಮಾರ್ ಎದುರು ನಿಂತು ಸೈಲೆಂಟ್ ಆದ ಹೊಸ ಹೀರೋ; ಆಮೇಲೆ ಏನಾಯ್ತು?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ನಿವೃತ್ತಿ ಘೋಷಿಸಿದ ಬಳಿಕ ಅರಿಜಿತ್ ಸಿಂಗ್ ಮನವೊಲಿಸಲು ಆಮಿರ್ ಖಾನ್ ಪ್ರಯತ್ನ?
ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ
ಈಗ ಕಾಲ ಬದಲಾಗಿದೆ: ‘ಜೋಗಿ’ ನಿರ್ಮಾಪಕರ ‘ಘಾರ್ಗಾ’ ಚಿತ್ರ ಬಿಡುಗಡೆಗೆ ರೆಡಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ರೋಹಿತ್, ಕೊಹ್ಲಿ ಏಕದಿನ ವಿಶ್ವಕಪ್ ಆಡುವ ಬಗ್ಗೆ ಮೌನ ಮುರಿದ ಧೋನಿ
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಬೆಂಗಳೂರಿನಲ್ಲಿ ದಿಢೀರ್ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್!
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಘಾರ್ಗ ಸಿನಿಮಾನಲ್ಲಿ ದರ್ಶನ್ ಸಿನಿಮಾದ ಹಾಡು ಏಕೆ: ಉತ್ತರ ಇಲ್ಲಿದೆ
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಮುಳುಗುತ್ತಿದ್ದ ಇಬ್ಬರು ಯುವಕರನ್ನು ಕಾಪಾಡಿದ ಮಹಿಳಾ ಟ್ರಾಫಿಕ್ ಪೊಲೀಸ್
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ಆ ಮಾತಿಗೆ ರೊಚ್ಚಿಗೆದ್ದು ವಿಪಕ್ಷ ಶಾಸಕರಿಗೆ ಏಕವಚನದಲ್ಲಿ ಬೈದ ಕೈ ಶಾಸಕ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ತಮ್ಮ‌ ರಕ್ಷಣೆಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣ, ಮೀನುಗಾರರ ಮಾದರಿ ಹೆಜ್ಜೆ
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು
ಸಿಖ್ಖರನ್ನು ಕೊಂದ ಕುಟುಂಬದ ಕುಡಿಯೊಂದಿಗೆ ಕೈಕುಲುಕುವುದಿಲ್ಲ;ರವನೀತ್ ಬಿಟ್ಟು