AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heavy Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರ: ಕೆರೆಕೋಡಿ ಬಿದ್ದು ಕೊಚ್ಚಿಹೋದ 15 ಸಾವಿರ ಕೋಳಿಗಳು, ಲಕ್ಷಾಂತರ ರೂಪಾಯಿ ನಷ್ಟ

ಕೆರೆಕೋಡಿ ಬಿದ್ದು ಕೋಳಿಫಾರಂಗೆ ಕೆರೆ ನೀರು ನುಗ್ಗಿ 15 ಸಾವಿರ ಕೋಳಿಗಳು ನೀರಿನಲ್ಲಿ ಕೊಚ್ಚಿಹೋಗಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ.

Heavy Rain: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಅವಾಂತರ: ಕೆರೆಕೋಡಿ ಬಿದ್ದು ಕೊಚ್ಚಿಹೋದ 15 ಸಾವಿರ ಕೋಳಿಗಳು, ಲಕ್ಷಾಂತರ ರೂಪಾಯಿ ನಷ್ಟ
ಕೆರೆಕೋಡಿ ಬಿದ್ದು ಕೋಳಿಫಾರಂಗೆ ಕೆರೆ ನೀರು ನುಗ್ಗಿರುವುದು.
TV9 Web
| Edited By: |

Updated on:Aug 26, 2022 | 10:37 AM

Share

ಚಿಕ್ಕಬಳ್ಳಾಪುರ: ನಿನ್ನೆ ರಾತ್ರಿ ಸುರಿದ ಭಾರಿ ಮಳೆ (Rain)ಯಿಂದಾಗಿ ಕೆರೆಕೋಡಿ ಬಿದ್ದು ಕೋಳಿಫಾರಂಗೆ ಕೆರೆ ನೀರು ನುಗ್ಗಿ 15 ಸಾವಿರ ಕೋಳಿಗಳು ನೀರಿನಲ್ಲಿ ಕೊಚ್ಚಿಹೋಗಿರುವಂತಹ ಘಟನೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಗ್ರಾಮದಲ್ಲಿ ನಡೆದಿದೆ. ರಾತ್ರಿ ಸುರಿದ ಧಾರಾಕರ ಮಳೆಗೆ ಚೋಳಶೆಟ್ಟಿಹಳ್ಳಿಯ ನಾಯನಕೆರೆ ಕೋಡಿ ಬಿದ್ದಿದೆ. ಎನ್.ಲಕ್ಷ್ಮೀನಾರಾಯಣರೆಡ್ಡಿ ಎಂಬುವವರಿಗೆ ಕೋಳಿಫಾರಂ ಸೇರಿದ್ದು, ನೀರಿನಲ್ಲಿ ಕೋಳಿಗಳು ಕೊಚ್ಚಿಕೊಂಡು ಹೋಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ರಾಜಕಾಲುವೆಗಳು ಒತ್ತುವರಿಯಾಗಿ ರೈತರ ಜಮೀನುಗಳಿಗೂ ನೀರು ನುಗ್ಗಿದೆ.

ಕೋಡಿ ತುಂಬಿ ಹರಿದ ಸಂಪಂಗೆರೆ ಕೆರೆ

ಕೋಲಾರ: ಜಿಲ್ಲೆಯಲ್ಲಿ ಕಳೆದ ರಾತ್ರಿ ಹಲವೆಡೆ ಭರ್ಜರಿ ಮಳೆ ಹಿನ್ನೆಲೆ, ಕೋಡಿ ತುಂಬಿ ಸಂಪಂಗೆರೆ ಕೆರೆ ಹರಿದಿದೆ. ಜಿಲ್ಲೆಯ ಮಾಲೂರು ತಾಲ್ಲೂಕು ಸಂಪಂಗೆರೆ ಕೆರೆ. ಮಳೆಯಿಂದಾಗಿ ರಾಜಕಾಲುವೆ ಹಾಗೂ ಕೆರೆ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಹರಿಯುತ್ತಿರುವ ಹಿನ್ನೆಲೆ ಅಕ್ಕಪಕ್ಕದ ಜಮೀನಿಗೆ ನೀರು ನುಗ್ಗಿದ್ದು, ಲಕ್ಷಾಂತರ ರೂಪಾಯಿ ರಾಗಿ, ಟೊಮ್ಯಾಟೊ ಸೇರಿದಂತೆ ಹಲವು ಬೆಳೆ ನಾಶವಾಗಿದೆ. ಒಂದೇ ಮಳೆಯಿಂದ ರೈತರು ಕಂಗಾಲಾಗಿದ್ದಾರೆ.

ಇದನ್ನೂ ಓದಿ: Karnataka Rain: ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಆ. 31ರವರೆಗೂ ಭಾರೀ ಮಳೆ

ಧಾರಾಕಾರ ಮಳೆಗೆ ಕಂಗಾಲಾದ ರೈತ ಸಮೂಹ

ಗದಗ: ಜಿಲ್ಲೆಯ ಹಲವಡೆ ರಾತ್ರಿಯಿಡೀ ಭಾರಿ ಮಳೆಯಾಗಿದ್ದು, ಧಾರಾಕಾರ ಮಳೆಗೆ ರೈತ ಸಮೂಹ ಕಂಗಾಲಾಗಿದೆ. ಗದಗ ತಾಲೂಕಿನ ಹುಯಿಲಗೋಳ ಗ್ರಾಮದ ಸುತ್ತಲೂ ಧಾರಾಕಾರ ಮಳೆಯಾಗಿದ್ದರಿಂದ ಜಮೀನುಗಳು ಕೆರೆಯಂತಾಗಿವೆ. ಗೋವಿನ ಜೋಳ, ಶೇಂಗಾ, ಈರುಳ್ಳಿ ಬೆಳೆ ಜಲಾವೃತವಾಗಿದ್ದು, ಬೆಳೆ ಹಾನಿಯಿಂದ ರೈತರು ಆತಂಕಗೊಂಡಿದ್ದಾರೆ.

ನಗರದ ಹಲವೆಡೆ ಬೆಳ್ಳಂಬೆಳಗ್ಗೆ ಮಳೆರಾಯನ ದರ್ಶನ

ಬೆಂಗಳೂರು: ಮಳೆರಾಯ ಬೆಳ್ಳಂಬೆಳಗ್ಗೆ ನಗರದ ಜನತೆಗೆ ದರ್ಶನ ನೀಡಿದ್ದು, ಉದ್ಯಾನ ನಗರಿಯಲ್ಲಿ ಸತತ ಜಿಟಿ ಜಿಟಿ ಮಳೆಯಾಗುತ್ತಿದೆ. ಕೆ.ಆರ್​ ಮಾರ್ಕೇಟ್, ಕಾರ್ಪೊರೇಷನ್, ಶಾಂತಿನಗರ, ಜಯ ನಗರ, ವಿಜಯನಗರ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿ ನಗರ, ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಮಳೆ ಶುರುವಾಗಿದೆ. ಹೀಗಾಗಿ ಮಳೆಯಿಂದಾಗಿ ಜನರು, ಬೈಕ್​ ಸವಾರರು ಪರದಾಡುವಂತ್ತಾಗಿದ್ದು, ಮಳೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಇಂದು ಬೆಳ್ಳಗೆಯಿಂದಲೇ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಆರಂಭವಾಗಿದ್ದು, ಸತತ ಸುರಿಯುತ್ತಿರುವ ಮಳೆಯಿಂದಾಗಿ ಆಫೀಸು, ಅಂಗಡಿಗಳಿಗೆ ಹೋಗುವ ಬೈಕ್ ಸವಾರರು ಪರದಾಡುವಂತ್ತಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:28 am, Fri, 26 August 22

ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರತದ ಸ್ಫೋಟಕ ದಾಂಡಿಗ ನಾಯಕ
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಕನ್ಯಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹಾಶಿವರಾತ್ರಿ ಎಫೆಕ್ಟ್​​: ಹೂ, ಹಣ್ಣುಗಳ ದರ ಗಗನಕ್ಕೆ; ಗ್ರಾಹಕರು ಕಂಗಾಲು
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
ಮಹದೇಶ್ವರ ಬೆಟ್ಟದ ಜಾತ್ರೆ ಹೊತ್ತಲೇ ಭೀಕರ ಅಪಘಾತ
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕಡಿದ ದುಷ್ಕರ್ಮಿಗಳು
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಹಂಪಿ ಉತ್ಸವಕ್ಕೆ ಸಜ್ಜಾದ ಭವ್ಯ ವೇದಿಕೆ: 50 ಸಾವಿರ ಜನರಿಗೆ ಆಸನದ ವ್ಯವಸ್ಥೆ
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸಿಂಹ ರಾಶಿಯವರ ಮೇಲೆ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸೇವಾ ತೀರ್ಥ; ಪ್ರಧಾನಮಂತ್ರಿ ಕಚೇರಿಯ ನೂತನ ಹೆಸರು ಅನಾವರಣಗೊಳಿಸಿದ ಮೋದಿ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ಸರಣಿ ಅಪಘಾತದಲ್ಲಿ 7 ಜನ ದುರ್ಮರಣ: ಘಟನೆಯ ಭೀಕರತೆ ಬಿಚ್ಚಿಟ್ಟ ಚಾಲಕ
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?
ವರ್ಷದ ಮೊದಲ ಸೂರ್ಯಗ್ರಹಣ ಕರ್ಕಾಟಕ ರಾಶಿಯವರಿಗೆ ಹೇಗಿರಲಿದೆ?