ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ: ಕುಮಾರಸ್ವಾಮಿ ಏನಂತಾರೆ?
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಇಲ್ಲಿನ ಜನಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಉಪಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಹಿನ್ನೆಲೆ ನಂದಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಱಲಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಮಾತನಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜಿನಿಂದ ಉಪಯೋಗವಿಲ್ಲ, ಇಲ್ಲಿನ ಯುವಕರಿಗೆ ಯಾವುದೇ ರೀತಿಯ ಕೆಲಸ ಸಿಗೋಲ್ಲ. ಬೇರೆ ರಾಜ್ಯದ ಜನರಿಗೆ ಇದರ ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಕುಕ್ಕರ್, ಸೀರೆಯಿಂದ ಗೆಲವು ಸಾಧಿಸಿದ್ದಾರೆ: ಇದೇ ವೇಳೆ ಬಿಜೆಪಿ […]
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಇಲ್ಲಿನ ಜನಕ್ಕೆ ಯಾವುದೇ ಉಪಯೋಗವಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಉಪಚುನಾವಣಾ ಪ್ರಚಾರದ ವೇಳೆ ಹೇಳಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಹಿನ್ನೆಲೆ ನಂದಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಱಲಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಕುರಿತು ಮಾತನಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜಿನಿಂದ ಉಪಯೋಗವಿಲ್ಲ, ಇಲ್ಲಿನ ಯುವಕರಿಗೆ ಯಾವುದೇ ರೀತಿಯ ಕೆಲಸ ಸಿಗೋಲ್ಲ. ಬೇರೆ ರಾಜ್ಯದ ಜನರಿಗೆ ಇದರ ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕುಕ್ಕರ್, ಸೀರೆಯಿಂದ ಗೆಲವು ಸಾಧಿಸಿದ್ದಾರೆ: ಇದೇ ವೇಳೆ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದು ಕುಕ್ಕರ್, ಸೀರೆಯಿಂದ ಇಲ್ಲಿನ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ. ಚಿಕ್ಕಬಳ್ಳಾಪುರ ಅಭ್ಯರ್ಥಿ ಗೆದ್ದಿರುವುದು ಕುಕ್ಕರ್ ಸೀರೆ ಹಂಚಿಕೆಯಿಂದ ಎಂದು ಕಟಕಿಯಾಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಅನೇಕ ಸಮಸ್ಯೆಗಳಿವೆ. ಒಂದು ಅವಕಾಶ ಕೊಡಿ ನಿಮ್ಮ ಸಮಸ್ಯೆಗಳನ್ನ ಬಗೆಹರಿಸುತ್ತೇವೆ. ಹಣ ಮಾಡುವ ಹುಚ್ಚು ನನಗಿಲ್ಲ ನಿಮ್ಮ ಪ್ರೀತಿ ಬೇಕು. ನೀವು ನಮಗೆ ಮತ ಹಾಕಿ. ಈ ರಾಜ್ಯದ ಸಿಎಂ ಅನರ್ಹರಿಗೆ ಪ್ರಾಣ ಕೊಡ್ತೀನಿ ಅಂತಾರೆ, ನಿಜವಾಗಲೂ ಉತ್ತರ ಕರ್ನಾಟಕ ಜನರಿಗಾಗಿ ಪ್ರಾಣ ಕೊಡಬೇಕು. ಅವರ ಸಮಸ್ಯೆಗಳನ್ನ ಬಗೆಹರಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
Published On - 2:38 pm, Tue, 26 November 19