AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹಿಣಿ ಸಾವು: ಫೋನ್​ ಮಾಡಿ ಕರೆದ್ರೂ ಪ್ರಿಯಕರ ಮನೆಗೆ ಬರದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳೇ?

ಈಕೆ ವಿವಾಹಿತೆ. ಮದುವೆಯಾಗಿ ಗಂಡ-ಮಕ್ಕಳಿದ್ದಾರೆ. ಆದರೂ ಆಕೆಯ ಮೇಲೆ ಗ್ರಾಮದ ಯುವಕನೋರ್ವನ ಜೊತೆ ಅನೈತಿಕ ಸಂಬಂಧದ ಆರೋಪ ಕೇಳಿಬಂದಿತ್ತು. ಇನ್ನು ಗಂಡ ಮನೆಯಲ್ಲಿ ಇಲ್ಲ ಬಾ ಎಂದು ತನ್ನ ಪ್ರಿಯಕರನಿಗೆ ಕರೆ ಮಾಡಿ ಪೀಡಿಸಿದ್ದಳು. ಆದರೆ ಸಕಾಲಕ್ಕೆ ಆತ ಬರಲಿಲ್ಲ. ಇದರಿಂದ ಮನನೊಂದ ಆಕೆ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಗೃಹಿಣಿ ಸಾವು: ಫೋನ್​ ಮಾಡಿ ಕರೆದ್ರೂ ಪ್ರಿಯಕರ ಮನೆಗೆ ಬರದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಳೇ?
Chikkaballapur Vinuta
Follow us
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Updated By: ರಮೇಶ್ ಬಿ. ಜವಳಗೇರಾ

Updated on: Mar 05, 2025 | 4:45 PM

ಚಿಕ್ಕಬಳ್ಳಾಪುರ, (ಮಾರ್ಚ್​ 05): ಈಕೆಯ ಹೆಸರು ವಿನುತ. ಇನ್ನು ಈಗ ತಾನೇ 24 ವರ್ಷ ವಯಸ್ಸು. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ಮೂಲದ ಈಕೆಯನ್ನು ಚಿಕ್ಕಬಳ್ಳಾಪುರ ತಾಲ್ಲೂಕಿನ ಗಂಗರೇಕಾಲುವೆ ನಿವಾಸಿ ಅಡುಗೆಭಟ್ಟ ಸತೀಶ್ ಎನ್ನುವವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ದಂಪತಿಗೆ ಒಂದು ಗಂಡು ಮಗುವಿದೆ. ಆದರೆ ಫೆಬ್ರವರಿ-28 ರಂದು ರಾತ್ರಿ ಮನೆಯಲ್ಲಿ ಗಂಡ ಇಲ್ಲದೆ ಸಮಯದಲ್ಲಿ ವಿನುತ ಮನೆಯ ಬೆಡ್ ರೂಂನಲ್ಲಿ ಶವವಾಗಿದ್ದಾಳೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಂತೆ ಕಂಡುಬಂದಿದೆ. ಇದರಿಂದ ಮೃತಳ ತಂದೆ-ತಾಯಿ, ಗಂಡ ಸತೀಶ್ ಆಕೆಯ ಪ್ರಿಯಕರ ಬಾಲರಾಜು ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ವಿನುತಾಗೆ ಈಗಾಗಲೇ ಮದುವೆಯಾಗಿದ್ದು ಮಗು ಸಹ ಇದೆ. ಆದರೂ ಸಹ ವಿನುತಾ ಗ್ರಾಮದ ಯುವಕನೋರ್ವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಹೀಗಾಗಿ ಫೆಬ್ರವರಿ 28 ರಂದು ರಾತ್ರಿ ವಿನುತ ತನ್ನ ಪ್ರಿಯಕರ ಬಾಲರಾಜುಗೆ ಹಲವು ಬಾರಿ ಕರೆ ಮಾಡಿ, ಮನೆಗೆ ಬರುವಂತೆ ಹೇಳಿದ್ದಾಳಂತೆ. ಆದರೆ ಬಾಲರಾಜು ಎಲ್ಲಿ ಇದ್ದನೋ ಗೊತ್ತಿಲ್ಲ. ಸಕಾಲಕ್ಕೆ ವಿನುತಾಳ ಮನೆಗೆ ಹೋಗಿಲ್ಲ. ಇದರಿಂದ ಮನನೊಂದ ವಿನುತಾ ಆತ್ಮಹತ್ಯೆಗೆ ಶರಣಾಗಿರಬಹದು ಎನ್ನುವ ಶಂಕೆ ವ್ಯಕ್ತವಾಗಿದೆ. ಇನ್ನು ಸ್ವತಃ ಮೃತಳ ಮಗ ಪೊಲೀಸರಿಗೆ ತನ್ನ ತಾಯಿ ನೇಣು ಬಿಗಿದುಕೊಂಡಿರುವ ಬಗ್ಗೆ ತಿಳಿಸಿದ್ದಾನೆ.

ಇದನ್ನೂ ಓದಿ: ಪ್ರೇಯಸಿಯ ಕತ್ತು ಸೀಳಿ ಬಳಿಕ ಅದೇ ಚಾಕುವಿನಿಂದ ಕತ್ತು ಕೊಯ್ದುಕೊಂಡು ಪ್ರಾಣಬಿಟ್ಟ ಪ್ರಿಯಕರ

ಇತ್ತ ಗಂಡ-ಮಗುವಿದ್ದರೆ, ಬೇರೊಬ್ಬನ ಸಹವಾಸ ಮಾಡಿ ಗೃಹಿಣಿ ಸಾವಿನ ಮನೆ ಸೇರಿದ್ದಾಳೆ. ಅತ್ತ ಆಕೆಯ ಪೋಷಕರು, ಆಕೆಯ ಗಂಡ ಹಾಗೂ ಪ್ರಿಯಕರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ
Image
ಪ್ರೇಯಸಿಯ ಕತ್ತು ಸೀಳಿ ಬಳಿಕ ಅದೇ ಚಾಕುವಿನಿಂದ ಕತ್ತು ಕೊಯ್ದುಕೊಂಡ ಪ್ರಿಯಕರ
Image
ಲೈಂಗಿಕವಾಗಿ ಬಳಸಿಕೊಂಡು ಮಹಿಳಾ ಅಧಿಕಾರಿ ಮೋಸ: ಯುವಕ ಆತ್ಮಹತ್ಯೆ
Image
ಕಾಮದ ತೀಟೆಗೆ ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪತಿ
Image
ಪ್ರೀತ್ಸೆ...ಪ್ರೀತ್ಸೆ ಎಂದು ವಿವಾಹಿತೆ ಮಹಿಳೆ ಬಲಿ ಪಡೆದ ಕಾಮಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.