ಮತಗಟ್ಟೆಯಲ್ಲಿ ವೋಟ್ ಮಾಡಿ, ಸೀದಾ ಆಸ್ಪತ್ರೆಗೆ ತೆರಳಿದ ಗರ್ಭಿಣಿ
ಚಿಕ್ಕಬಳ್ಳಾಫುರ: ಇಂದು ಚಿಕ್ಕಬಳ್ಳಾಫುರ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಹಿನ್ನೆಲೆ ತುಂಬು ಗರ್ಭಿಣಿ ದ್ವಾರಗಾನಹಳ್ಳಿ ಗ್ರಾಮದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ತುಂಬು ಗರ್ಭಿಣಿ ಆರ್.ವಿ. ಝಾನ್ಸಿ ಪ್ರಸವ ನೋವಿನಲ್ಲೆ ಮತಗಟ್ಟೆ ಸಂಖ್ಯೆ 95ರಲ್ಲಿ ಮತದಾನ ಮಾಡಿದ್ದು, ಮತದಾನ ಮಾಡಿ ತಕ್ಷಣ ಆಸ್ಪತ್ರೆಗೆ ಹೊರಟು ಹೋಗಿದ್ದಾರೆ. ಈ ರೀತಿ ನೋವಿನಲ್ಲಿದ್ದೇ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. 3 ತಿಂಗಳ ಮಗುವಿನೊಂದಿಗೆ ಬಂದು ಮತಚಲಾವಣೆ: ಹಾವೇರಿ: ಮೂರು ತಿಂಗಳ ಹಸುಗೂಸುನೊಂದಿಗೆ ಮತಗಟ್ಟೆಗೆ ಆಗಮಿಸಿ ಬಾಣಂತಿ ವೋಟ್ ಹಾಕಿದ್ದಾರೆ. ರಾಣೆಬೆನ್ನೂರು […]
ಚಿಕ್ಕಬಳ್ಳಾಫುರ: ಇಂದು ಚಿಕ್ಕಬಳ್ಳಾಫುರ ವಿಧಾನಸಭಾ ಕ್ಷೇತ್ರದ ಬೈಎಲೆಕ್ಷನ್ ಹಿನ್ನೆಲೆ ತುಂಬು ಗರ್ಭಿಣಿ ದ್ವಾರಗಾನಹಳ್ಳಿ ಗ್ರಾಮದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ತುಂಬು ಗರ್ಭಿಣಿ ಆರ್.ವಿ. ಝಾನ್ಸಿ ಪ್ರಸವ ನೋವಿನಲ್ಲೆ ಮತಗಟ್ಟೆ ಸಂಖ್ಯೆ 95ರಲ್ಲಿ ಮತದಾನ ಮಾಡಿದ್ದು, ಮತದಾನ ಮಾಡಿ ತಕ್ಷಣ ಆಸ್ಪತ್ರೆಗೆ ಹೊರಟು ಹೋಗಿದ್ದಾರೆ. ಈ ರೀತಿ ನೋವಿನಲ್ಲಿದ್ದೇ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
3 ತಿಂಗಳ ಮಗುವಿನೊಂದಿಗೆ ಬಂದು ಮತಚಲಾವಣೆ: ಹಾವೇರಿ: ಮೂರು ತಿಂಗಳ ಹಸುಗೂಸುನೊಂದಿಗೆ ಮತಗಟ್ಟೆಗೆ ಆಗಮಿಸಿ ಬಾಣಂತಿ ವೋಟ್ ಹಾಕಿದ್ದಾರೆ. ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ಮತಗಟ್ಟೆ 38ರಲ್ಲಿ ವೀಣಾ ಮತ ಚಲಾಯಿಸಿದ್ದಾರೆ.
Published On - 8:47 am, Thu, 5 December 19