ಮದುವೆಯಾದ ಬಾಲ್ಯದ ಜೋಡಿ ಠಾಣೆ ಮೆಟ್ಟಿಲು ಹತ್ತದಂತೆ ಹೈಡ್ರಾಮಾ: ವಧು ಕಿಡ್ನಾಪ್ -ಪೊಲೀಸರೇ ಸಲಹೆ ನೀಡಿದ್ದರಂತೆ!
Chikkaballapur Police: ಇದ್ರಿಂದ ಇಬ್ಬರು ಮನೆಯಿಂದ ಆಚೆ ಬಂದು ದೇವಸ್ಥಾನವೊಂದರಲ್ಲಿ ಇಂದು ಬೆಳಿಗ್ಗೆ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಆದ್ರೆ ನಯನಾ ತಂದೆ ಶ್ರೀನಿವಾಸ್ ಅವರು ತಮ್ಮ ಮಗಳು ಕಾಣೆಯಾದ ಬಗ್ಗೆ ಚಿಕ್ಕಬಳ್ಳಾಪುರ ಮಹಿಳಾ ಠಾಣೆಗೆ ದೂರು ನೀಡಿದ್ರು. ಇದ್ರಿಂದ ನವ ವಿವಾಹಿತರು ಕಾರಿನಲ್ಲಿ ಪೊಲೀಸ್ ಠಾಣೆಗೆ ಬರುತ್ತಿದ್ದರು.
ಅವರಿಬ್ಬರು ಬಾಲ್ಯದ ಸ್ನೇಹಿತರು. ಜೀವನದಲ್ಲಿ ಬೆಳೆಯುತ್ತಾ… ಪ್ರೀತಿ ಪ್ರೇಮ ಪ್ರಣಯ ಅಂತ ಒಬ್ಬರಿಗೊಬ್ಬರು ಗಾಢವಾಗಿ ಪ್ರೀತಿಸಿ, ಹುಡುಗಿ ಪೋಷಕರ ವಿರೋಧದ ಮಧ್ಯೆ ಇಂದು ಶುಕ್ರವಾರ ಬೆಳಗಿನ ಜಾವ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು. ಮದುವೆಯಾಗಿ ಇನ್ನೇನು ರಕ್ಷಣೆ ಕೋರಿ, ಪೊಲೀಸ್ ಠಾಣೆ ಮೆಟ್ಟಿಲು ಹತ್ತಬೇಕು ಅಷ್ಟರಲ್ಲೆ… ನವ ವಿವಾಹಿತೆಯ ಕಡೆಯವರು, ಪೊಲೀಸ್ ಠಾಣೆ ಗೇಟ್ ಗೆ ಬ್ಯಾರಿಕೇಡ್ ಹಾಕಿ, ಕಾರಿನಲ್ಲಿದ್ದ ನವ ವಿವಾಹಿತಳನ್ನು ಎಳೆದುಕೊಂಡು ಹೋಗಿರುವ ಘಟನೆ ನಡೆದಿದೆ. ಅದೆಲ್ಲಿ ಇದೆಲ್ಲಾ ನಡೆದಿದ್ದು ಅಂತೀರಾ ಈ ವರದಿ ನೋಡಿ
ಆಕೆಯ ಹೆಸರು ನಯನಾ, 20 ವರ್ಷ ವಯಸ್ಸು. ಬಿಎಸ್ಸಿ ಪದವೀಧರೆ. ಚಿಕ್ಕಬಳ್ಳಾಪುರ ನಗರದ ವಾಪಸಂದ್ರ ನಿವಾಸಿ. ಇನ್ನು ವರನ ಹೆಸರು ರಾಮು – ವಯಸ್ಸು ಜಸ್ಟ್ 22 ವರ್ಷ. ಚಿಕ್ಕಬಳ್ಳಾಪುರ ನಗರದ ಟೌನ್ ಹಾಲಗ್ ನಿವಾಸಿ. ಇಬ್ಬರೂ ಪ್ರೌಢ ಶಾಲೆಯಿಂದಲೆ ಸ್ನೇಹಿತರು. ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಇಬ್ಬರ ಮಧ್ಯೆ ಪ್ರೀತಿ ಪ್ರೇಮ ಪ್ರಣಯ ಅಂತ ಒಬ್ಬರಿಗೊಬ್ಬರು ಗಾಢವಾಗಿ ಪ್ರೀತಿಸಿದ್ರು. ಇಬ್ಬರದೂ ಒಂದೆ ಜಾತಿ ಆಗಿದ್ದರೂ ಇವರಿಬ್ಬರ ಪ್ರೀತಿಯ ಮದುವೆಗೆ ನಯನಾ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು.
ಇದ್ರಿಂದ ಇಬ್ಬರು ಮನೆಯಿಂದ ಆಚೆ ಬಂದು ದೇವಸ್ಥಾನವೊಂದರಲ್ಲಿ ಇಂದು ಬೆಳಿಗ್ಗೆ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಆದ್ರೆ ನಯನಾ ತಂದೆ ಶ್ರೀನಿವಾಸ್ ಅವರು ತಮ್ಮ ಮಗಳು ಕಾಣೆಯಾದ ಬಗ್ಗೆ ಚಿಕ್ಕಬಳ್ಳಾಪುರ ಮಹಿಳಾ ಠಾಣೆಗೆ ದೂರು ನೀಡಿದ್ರು. ಇದ್ರಿಂದ ನವ ವಿವಾಹಿತರು ಕಾರಿನಲ್ಲಿ ಪೊಲೀಸ್ ಠಾಣೆಗೆ ಬರುತ್ತಿದ್ದರು. ಇನ್ನೇನು ಠಾಣೆ ಮೆಟ್ಟಿಲು ಹತ್ತಬೇಕು ಎನ್ನುವಷ್ಟರಲ್ಲಿ ನಯನಾ ಸಂಬಂಧಿಕರು ಪೊಲೀಸ್ ಠಾಣೆಯ ಗೇಟ್ ಗೆ ಬ್ಯಾರಿಕೇಡ್ ಹಾಕಿ, ಕಾರಿನಲ್ಲಿದ್ದ ನವ ವಿವಾಹಿತಳನ್ನು ಎಳೆದುಕೊಂಡು ಹೋದ ಘಟನೆ ನಡೆಯಿತು.
ಇನ್ನು ನಯನಾ ಅಣ್ಣ, ನಯನಾಳನ್ನು ನೋಡ್ತಿದ್ದಂತೆ ಬಲವಂತವಾಗಿ ತಂಗಿಯನ್ನು ಕರೆದಿದ್ದಾನೆ. ಆದರೂ ಬಾರದ ಕಾರಣ ಆಕೆಯ ಪ್ರಿಯಕರನ ಮೇಲೆ ಗಲಾಟೆ ಮಾಡಿ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಮತ್ತೊಂದೆಡೆ ರಾಮು ಪುಂಡ ಪೋಕ್ರಿಯಂತೆ. ನಯನಾ ವಿದ್ಯಾವಂತೆ. ಇಬ್ಬರಿಗೂ ಸರಿ ಬರಲ್ಲ, ನಯನಾಳ ತಲೆಯನ್ನು ಕೆಡಿಸಿರುವ ರಾಮು, ಅವಳನ್ನು ಕರೆದುಕೊಂದು ಹೋಗಿದ್ದಾನೆ. ತಮಗೆ ನ್ಯಾಯ ಕೊಡಿಸಿ ಅಂತ ನಯನಾ ಸಂಬಂಧಿಗಳು ಅಂಗಲಾಚಿದ್ದಾರೆ.
ನವ ವಿವಾಹಿತ ಜೋಡಿ ಇಬ್ಬರೂ ಮೇಜರ್ಸ್. ಕಾನೂನು ಪ್ರಕಾರ ತಮಗಿಷ್ಟ ಬಂದಂತೆ ಬೇಕಾದವರನ್ನು ಮದುವೆ ಮಾಡಿಕೊಂಡು, ಬದುಕಬಹುದು. ಹೀಗಿರುವಾಗ ರಕ್ಷಣೆ ಕೋರಿ ನವ ಜೋಡಿ ಮಹಿಳಾ ಠಾಣೆಗೆ ಬರುತ್ತಿದ್ದಾಗ ಪೊಲೀಸ್ ಠಾಣೆ ಗೇಟ್ ನಲ್ಲಿ ದೊಡ್ಡ ಡ್ರಾಮಾ ನಡೆದಿದೆ. ಗಲಾಟೆ ಗದ್ದಲ ಎಳೆದಾಡುವುದು ನಡೆದರೂ… ಚಿಕ್ಕಬಳ್ಳಾಪುರ ಪೊಲೀಸರು ತಮಗೂ ಅದಕ್ಕೂ ಸಂಬಂಧವೆ ಇಲ್ಲ ಎನ್ನುವಂತೆ ವರ್ತಿಸಿರುವ ಆರೋಪ ಕೇಳಿ ಬಂದಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳಾ ಠಾಣೆಯ ಹಿರಿಯ ಸಿಬ್ಬಂದಿಯೊಬ್ಬರು ವಿವಾಹಿತೆಯ ಪೋಷಕರಿಗೆ ಸಲಹೆ ನೀಡಿ ಠಾಣೆ ಮೆಟ್ಟಿಲು ಹತ್ತಲು ಬಿಡದಂತೆ ಬಿಟ್ಟಿ ಸಲಹೆಯನ್ನೂ ನೀಡಿದ್ದರಂತೆ. (ವರದಿ: ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ)
Published On - 5:49 pm, Fri, 21 October 22