ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ತೊರೆದು ಚಿಕ್ಕಬಳ್ಳಾಪುರದಲ್ಲಿ ಸೀಬೆ ಬೆಳೆದು ಲಕ್ಷ ಲಕ್ಷ ಸಂಪಾದಿಸುತ್ತಿರುವ ಇಂಜಿನಿಯರಿಂಗ್ ಪದವೀಧರ
ಎಸ್ಜೆಸಿ ಐಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವೀಧರನಾಗಿದ್ದ ಪ್ರದೀಪ್, ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೈ ತುಂಬ ಸಂಬಳ ಬಂದರೂ ನೆಮ್ಮದಿ ಇಲ್ಲವಾಗಿತ್ತು.
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಾರಾಯಣದಾಸರಹಳ್ಳಿ ಗ್ರಾಮದ ನಿವಾಸಿ ಪ್ರದೀಪ್ ಎಂಬುವವರು ಇಂಜಿನಿಯರಿಂಗ್ ಪದವಿ ಪಡೆದು ನಂತರ ಸೀಬೆ ಬೆಳೆದು ಲಕ್ಷ ಲಕ್ಷ ಸಂಪಾದಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಇವರು ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಕೈ ತುಂಬಾ ಸಂಬಳವೂ ಇತ್ತು. ಆದರೆ ಲಾಕ್ಡೌನ್ನಲ್ಲಿ ಕಂಪನಿ ತೊರೆದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನಂತರ ನೆಮ್ಮದಿ ಬದುಕಿನ ಜೊತೆಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಎಸ್ಜೆಸಿ ಐಟಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿ ಪದವೀಧರನಾಗಿದ್ದ ಪ್ರದೀಪ್, ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕೈ ತುಂಬ ಸಂಬಳ ಬಂದರೂ ನೆಮ್ಮದಿ ಇಲ್ಲವಾಗಿತ್ತು. ಅಷ್ಟೊತ್ತಿಗೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿತ್ತು. ಆಗ ತವರೂರಿಗೆ ಬಂದ ಪ್ರದೀಪ್ ಕೈ ಕಟ್ಟಿ ಕುಳಿತುಕೊಳ್ಳದೆ, ತಂದೆಯ ಜಮೀನಿನಲ್ಲೆ ಥೈವಾನ್ ಅನ್ನೊ ತಳಿಯ ಸೀಬೆ ನಾಟಿ ಮಾಡಿ ಆರೈಕೆ ಮಾಡಲು ಆರಂಭಿಸಿದ್ದರು. ಈಗ ಸೀಬೆ ಫಲ ಬಂದಿದ್ದು ಕೆ.ಜಿ ಸೀಬೆಗೆ 75 ರೂಪಾಯಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ಒಂದು ಕಡೆ ನೆಮ್ಮದಿ ಸಿಗುತ್ತಿದೆ. ಜೊತೆಗೆ ಲಾಭ ಸಿಗುತ್ತಿದೆ ಅಂತ ಪ್ರದೀಪ್ ಸಂತಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ರೈತರ ತೋಟಗಳಲ್ಲಿ ಬೇರೆ ಬೇರೆ ತಳಿಯ ಸೀಬೆ ಸಿಗುತ್ತಿದೆ. ಆದರೆ ಅದೇ ತಳಿಗಳನ್ನು ಮತ್ತೆ ಹಾಕಿದರೆ ಉತ್ತಮ ಬೆಲೆ ಸಿಗಲ್ಲ ಅನ್ನೊ ಕಾರಣಕ್ಕೆ ದೇಶ ವಿದೇಶಗಳಲ್ಲಿ ಡಿಮ್ಯಾಂಡ್ ಇರುವ ಥೈವಾನ್ ತಳಿಯ ಸೀಬೆಯನ್ನು ತರಿಸಿ ಬೆಳೆಸಿದ್ದಾರೆ. ಗಾತ್ರದಲ್ಲಿ, ರುಚಿಯಲ್ಲೂ ಆರೋಗ್ಯದ ದೃಷ್ಟಿಯಿಂದ ಥೈವಾನ್ ತಳಿಯ ಸೀಬೆ ಹೆಸರುವಾಸಿ. ಇಂತಹ ಥೈವಾನ್ ತಳಿಯ ಸೀಬೆ ಬೆಳೆಯುವ ಸಾಧನೆ ಕೈ ಹಾಕಿ ಪ್ರದೀಪ್ ಸೈ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ
ಸಮಾಜವಾದಿ ಪಕ್ಷಕ್ಕೆ 3 ಬಿಎಸ್ಪಿ ನಾಯಕರು, ಪೂರ್ವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸೇರ್ಪಡೆ
Vijay Hazare Trophy: 18 ಎಸೆತಗಳಲ್ಲಿ 92 ರನ್! ಚಂಡೀಗಢ ವಿರುದ್ಧ 151 ರನ್ ಚಚ್ಚಿದ ವೆಂಕಟೇಶ್ ಅಯ್ಯರ್