ರಸ್ತೆ ಕ್ರಾಸ್ ಮಾಡುವಾಗ ಬೈಕ್ಗೆ ಬಸ್ ಡಿಕ್ಕಿ; ಚಿಕ್ಕಬಳ್ಳಾಪುರದ ಹೊನ್ನೇನಹಳ್ಳಿ ಗೇಟ್ ಬಳಿ ಬೆಂಗಳೂರು ಮೂಲದ ಮೂವರ ಸಾವು
ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೊನ್ನೇನಹಳ್ಳಿ ಗೇಟ್ ಬಳಿ ಬೆಂಗಳೂರು ಮೂಲದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಚಿಕ್ಕಬಳ್ಳಾಪುರ: ರಸ್ತೆ ಕ್ರಾಸ್ ಮಾಡುವಾಗ ಬೈಕ್ಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ಮಹಿಳೆ ಸೇರಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 44ರ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ. ಬೆಂಗಳೂರು ಮೂಲದ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ನಾಯಿಮರಿಗೆ ಸ್ನಾನ ಮಾಡಿಸಲು ಹೋಗಿ ಸಂಪ್ಗೆ ಬಿದ್ದು 7 ವರ್ಷದ ಬಾಲಕಿ ಕೊನೆಯುಸಿರು 7 ವರ್ಷ ವಯಸ್ಸಿನ ಪ್ರಾರ್ಥನಾ ನಾಯಿಮರಿಗೆ ಸ್ನಾನ ಮಾಡಿಸಲು ಹೋಗಿ ಸಂಪ್ಗೆ ಬಿದ್ದು ಸಾವನ್ನಪ್ಪಿದ್ದಾಳೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆ ಗ್ರಾಮದ ಬಳಿಯ ಇಂದ್ರಾವತಿ ಕಾಫಿ ಎಸ್ಟೇಟ್ನಲ್ಲಿ ಈಕೆ ಪೋಷಕರು ಕೆಲ್ಸ ಮಾಡ್ತಿದ್ರು. ಗೀತಾ ಹಾಗೂ ಶೇಷಪ್ಪ ದಂಪತಿ ತಮ್ಮ ಮಗಳಾದ ಪ್ರಾರ್ಥನಾಳನ್ನ ಮನೆ ಬಳಿ ಬಿಟ್ಟು ನಿನ್ನೆ ಕೆಲಸಕ್ಕೆ ತೆರಳಿದ್ರು. ಆಗ ಮನೆ ಪಕ್ಕದ ಮತ್ತೊಂದು ಮಗು ಆಟವಾಡಲು ಬಂದಿದೆ. ಇಬ್ಬರು ಸೇರಿ ಅಲ್ಲೇ ಇದ್ದ ನಾಯಿ ಮರಿಗೆ ಸ್ನಾನ ಮಾಡಿಸಲು ನೀರಿನ ಸಂಪ್ಗೆ ತೆರಳಿದ್ದಾರೆ. ಈ ವೇಳೆ ಪ್ರಾರ್ಥನಾ ಕಾಲು ಜಾರಿ ಸಂಪ್ಗೆ ಬಿದ್ದಿದ್ದಾಳೆ. ಅಷ್ಟ್ರಲ್ಲಿ ಮತ್ತೊಂದು ಮಗು ಓಡಿಬಂದು ಪೋಷಕರಿಗೆ ಹೇಳಿದೆ. ಕೂಡಲೇ ಪೋಷಕರು ಸಂಪ್ ಬಳಿ ಬಂದು ನೋಡುವಷ್ಟ್ರಲ್ಲಿ ಪ್ರಾರ್ಥನಾ ಸಾವನ್ನಪ್ಪಿದ್ದಾಳೆ.
2 ವಾರಗಳ ಹಿಂದಷ್ಟೇ ಅಜ್ಜಿ ಮನೆಯಿಂದ ಬಂದಿದ್ದಳು ಬಾಲಕಿ ಗೀತಾ ಹಾಗೂ ಶೇಷಪ್ಪ ದಂಪತಿಗೆ ಮೂವರು ಮಕ್ಕಳಿದ್ದು, ಇಬ್ಬರು ಗಂಡು ಮಕ್ಕಳು ಈಗಾಗ್ಲೇ ಕಾಲೇಜಿಗೆ ಹೋಗ್ತಿದ್ದಾರೆ. ಹೆಣ್ಣು ಮಗು ಬೇಕೆನ್ನೋ ಕಾರಣಕ್ಕೆ ಇಬ್ಬರು ಮಕ್ಕಳಾಗಿ 10 ವರ್ಷಗಳ ಬಳಿಕ ಪ್ರಾರ್ಥನಾ ಜನಿಸಿದ್ದಳು. ಆದ್ರೆ ದಂಪತಿ ಕೆಲ್ಸಕ್ಕೆ ಹೋಗ್ತಿದ್ರಿಂದ ಪ್ರಾರ್ಥನಾಳನ್ನ ಅಜ್ಜಿ ಮನೆಯಲ್ಲಿಯೇ ಬಿಟ್ಟಿದ್ರು. ಬಾಲಕಿ ಆರೋಗ್ಯದಲ್ಲಿ ಏರುಪೇರಾಗಿದೆ ಅಂತಾ 2 ವಾರಗಳ ಹಿಂದಷ್ಟೇ ಪೋಷಕರು ತಮ್ಮ ಮನೆಗೆ ಕರೆ ತಂದಿದ್ರು. ಆದ್ರೆ ಕ್ರೂರ ವಿಧಿ ಬಾಲಕಿ ಉಸಿರನ್ನೇ ನಿಲ್ಲಿಸಿದೆ. ಸದ್ಯ ಸಂಪ್ 15 ಅಡಿ ಆಳವಿದ್ರೂ ಮುಚ್ಚದೆ ನಿರ್ಲಕ್ಷ್ಯ ತೋರಿದ್ದೇ ಇದಕ್ಕೆಲ್ಲಾ ಕಾರಣ ಎನ್ನಲಾಗ್ತಿದೆ.
Maha Shivaratri 2022: ಶಿವರಾತ್ರಿ ಉಪವಾಸಕ್ಕೆ ಕೊಪ್ಪಳದಲ್ಲಿ ಹಣ್ಣಿನ ಮೇಳ! ರೈತರಿಗೂ ಸಂಭ್ರಮ, ಶಿವ ಭಕ್ತರಿಗೂ ಆನಂದ!
Published On - 9:45 am, Mon, 28 February 22