AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾಗಕ್ಕಾಗಿ ಮಠ ಮಸೀದಿ ನಡುವೆ ವಿವಾದ: ಸರ್ವೆಗೆ ಮುಂದಾದ ಚಿಕ್ಕಮಗಳೂರು ನಗರಸಭೆ

ಈ ಜಾಗ ಯಾರಿಗೆ ಸೇರಬೇಕು ಎನ್ನುವ ಬಗ್ಗೆ 40 ವರ್ಷಗಳಿಂದ ವಿವಾದವಿದೆ. ಚಿಕ್ಕಮಗಳೂರು ನಗರದ ಹೃದಯಭಾಗದಲ್ಲಿರುವ ಈ ಜಾಗದ ವಿಸ್ತೀರ್ಣ ಸುಮಾರು 2 ಎಕರೆ.

ಜಾಗಕ್ಕಾಗಿ ಮಠ ಮಸೀದಿ ನಡುವೆ ವಿವಾದ: ಸರ್ವೆಗೆ ಮುಂದಾದ ಚಿಕ್ಕಮಗಳೂರು ನಗರಸಭೆ
ಚಿಕ್ಕಮಗಳೂರಿನ ಬಡಾ ಮಖಾನ್ ಪ್ರದೇಶದಲ್ಲಿ ನಗರಸಭೆ ಸಮೀಕ್ಷೆಗೆ ವಿರೋಧ ವ್ಯಕ್ತವಾಯಿತು.
TV9 Web
| Edited By: |

Updated on: Mar 29, 2022 | 12:42 PM

Share

ಚಿಕ್ಕಮಗಳೂರು: ನಗರದ ಹೃದಯಭಾಗದಲ್ಲಿರುವ ಜಾಗಕ್ಕಾಗಿ ಮಠ ಮತ್ತು ಮಸೀದಿ ಆಡಳಿತ ಮಂಡಳಿಗಳ ನಡುವೆ ವಿವಾದ ತಲೆದೋರಿದೆ. ಈ ಸಂಬಂಧ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ನಾಟಕೀಯ ಬೆಳವಣಿಗೆಗಳು ನಡೆದು, ಮುಖಂಡರು ಪರಸ್ಪರ ಕೈಕೈ ಮಿಲಾಯಿಸುವ ಹಂತದಷ್ಟು ಗಲಾಟೆ ನಡೆಯಿತು. ಈ ಜಾಗ ಯಾರಿಗೆ ಸೇರಬೇಕು ಎನ್ನುವ ಬಗ್ಗೆ 40 ವರ್ಷಗಳಿಂದ ವಿವಾದವಿದೆ. ಚಿಕ್ಕಮಗಳೂರು ನಗರದ ಹೃದಯಭಾಗದಲ್ಲಿರುವ ಈ ಜಾಗದ ವಿಸ್ತೀರ್ಣ ಸುಮಾರು 2 ಎಕರೆ. ಈ ಜಾಗ ತಮ್ಮದೆಂದು ನಲ್ಲೂರು ಮಠ ಹಾಗೂ ಬಡಾಮಕಾನ್ ಮಸೀದಿಗಳು ವಾದಿಸುತ್ತಿವೆ. ಪ್ರಸ್ತುತ ಈ ಸ್ಥಳವು ಮಸೀದಿ ಆಡಳಿತ ಮಂಡಳಿಯ ಒಡೆತನದಲ್ಲಿದೆ. ಆದರೆ ಈ ಜಾಗ ನಮಗೆ ಸೇರಬೇಕು ಎಂದು ನಲ್ಲೂರು ಮಠದವರು ಒತ್ತಾಯಿಸುತ್ತಿದ್ದಾರೆ. ಮಠದ ಮನೆಯ ನಂಜಪ್ಪ ಎನ್ನುವವರು ಈ ವಿಚಾರದಲ್ಲಿ ಮತ್ತೊಮ್ಮೆ ಸರ್ವೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಆದರೆ ನಗರಸಭೆ ಸಿಬ್ಬಂದಿ ಸರ್ವೆ ಪ್ರಯತ್ನ ಆರಂಭಿಸಿದಾಗಿ ಮುಸ್ಲಿಂ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಗುಂಪಿನ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಪರ ಕೈಕೈ ಮಿಲಾಯಿಸುವ ಹಂತಕ್ಕೆ ಗಲಾಟೆಯಾಯಿತು.. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ನಂತರ ಮುಸ್ಲಿಂ ಮುಖಂಡರ ವಿರುದ್ಧ ನಡುವೆಯೂ ನಗರಸಭೆಯಿಂದ ಸರ್ವೇ ಕಾರ್ಯ ಮುಂದುವರಿಯಿತು. ಈ ಜಾಗವು ಕಳೆದ ನಾಲ್ಕು ದಶಕಗಳಿಂದ ವಿವಾದದ ಕೇಂದ್ರಬಿಂದುವಾಗಿದೆ. ಸುಮಾರು ಒಂದು ಲಕ್ಷ ಚದರ ಅಡಿ ವಿಸ್ತೀರ್ಣದ ಈ ಆಸ್ತಿಯು ವಿವಾದದ ಕೇಂದ್ರಬಿಂದುವಾಗಿದೆ.

ಈ ಜಾಗವು ಒತ್ತುವರಿಯಾಗುವ ಮೊದಲು ನಲ್ಲೂರು ಮಠಕ್ಕೆ ಸೇರಿತ್ತು ಎನ್ನುವುದು ಮಠದವರ ವಾದವಾಗಿದೆ. ಜಾಗದ ಒಡೆತನವನ್ನು ಪ್ರಶ್ನಿಸಿ ಈ ಹಿಂದೆಯೇ ಮಠದವರು ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ನ್ಯಾಯಾಲಯದಲ್ಲಿ ತೀರ್ಪು ನಮ್ಮ ಪರ ಬಂದಿದೆ ಎಂದು ಮಠದ ಮನೆಯವರು ವಿವರಿಸುತ್ತಿದ್ದಾರೆ. ಆದರೆ ತೀರ್ಪನ್ನು ನಾವು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದೇವೆ. ಅಲ್ಲಿ ನಮ್ಮ ಪರ ತೀರ್ಪು ಬಂದಿದೆ ಎಂದು ಮಸೀದಿ ಆಡಳಿತ ಮಂಡಳಿ ಹೇಳಿದೆ. ಈ ಮಧ್ಯೆ ವಸ್ತುಸ್ಥಿತಿಯ ಸತ್ಯಾಸತ್ಯತೆ ತಿಳಿಯಲು ಚಿಕ್ಕಮಗಳೂರು ನಗರಸಭೆ ಸರ್ವೆ ನಡೆಸಲು ಮುಂದಾಗಿದೆ.

ಇದನ್ನೂ ಓದಿ: ಹಾಜರಾತಿ ಹಾಕಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಲು ಹೋದ ಚಿಕ್ಕಮಗಳೂರು ನಗರಸಭೆ ಸಿಬ್ಬಂದಿ, ಕಚೇರಿಗೆ ಬಂದು ಕಂಗಾಲಾದ ಸಾರ್ವಜನಿಕರು

ಇದನ್ನೂ ಓದಿ: ಚಿಕ್ಕಮಗಳೂರು: ಸಾವಿನಲ್ಲೂ ಸಾರ್ಥಕತೆ ಮೆರೆದ ನರ್ಸ್; ಮೆದುಳು ನಿಷ್ಕ್ರಿಯವಾಗಿರುವ ಯುವತಿಯಿಂದ ಅಂಗಾಗ ದಾನ

Follow Us
TV9 Web
TV9 Web

TV9 Kannada

Read More
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಶಿವರಾಜ್ ಕೆಆರ್ ಪೇಟೆ ಹೊಸ ಸಿನಿಮಾ ‘ಹವಾಮಾನ ವರದಿ’ ಶುರುವಾಗಿದ್ದು ಹೀಗೆ..
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ಸಚಿವರ ಭಾಷಣಕ್ಕೆ ಕೋಕ್​​: ಕೃಷ್ಣ ಭೈರೇಗೌಡ ಅಸಮಾಧಾನ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ನಾಳೆ ಪಿಎಂ ಮೋದಿ ಉದ್ಘಾಟಿಸಲಿರೋ ಟಿಲ್ಟೆಡ್ ಎಲ್​ಇಡಿ ಡೋಮ್ ತಾರಾಲಯ ಹೇಗಿದೆ
ಅರಣ್ಯ ಇಲಾಖೆಯಿಂದ 51 ಕಾವಾಡಿ ಹುದ್ದೆಗೆ ನೇಮಕಾತಿ ಸ್ಥಗಿತ
ಅರಣ್ಯ ಇಲಾಖೆಯಿಂದ 51 ಕಾವಾಡಿ ಹುದ್ದೆಗೆ ನೇಮಕಾತಿ ಸ್ಥಗಿತ