AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಫಿನಾಡಿನಲ್ಲಿ ಖೆಡ್ಡಾಕ್ಕೆ ಬಿದ್ದ ಮತ್ತೊಂದು ಕಾಡಾನೆ; ಎರಡು ಪುಂಡಾನೆ ಸೆರೆಯಿಂದ ಕೊಂಚ ನಿಟ್ಟುಸಿರು ಬಿಟ್ಟ ಜನರು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಪುಂಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಫಿನಾಡಿನಲ್ಲಿ ಖೆಡ್ಡಾಕ್ಕೆ ಬಿದ್ದ ಮತ್ತೊಂದು ಕಾಡಾನೆ; ಎರಡು ಪುಂಡಾನೆ ಸೆರೆಯಿಂದ ಕೊಂಚ ನಿಟ್ಟುಸಿರು ಬಿಟ್ಟ ಜನರು
ಖೆಡ್ಡಾಕ್ಕೆ ಬಿದ್ದ ಪುಂಡಾನೆಗಳು
TV9 Web
| Edited By: |

Updated on:Dec 03, 2022 | 8:39 PM

Share

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದಲ್ಲಿ ಪುಂಡಾನೆಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ಆರು ಸಾಕಾನೆಗಳೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದ ಅರಣ್ಯ ಇಲಾಖೆ, ಇಂದು ಪುಂಡಾನೆ (ಸಲಗ)ಯನ್ನ ಖೆಡ್ಡಾಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಆನೆ ಜೊತೆಗಿದ್ದ ಮತ್ತೊಂದು ಆನೆ ತಪ್ಪಿಸಿಕೊಂಡು ಗಾಬರಿಯಿಂದ ಓಡಾಡುತ್ತಿರುವ ಮಾಹಿತಿಯಿದ್ದು, ಜನರು ಎಚ್ಚರಿಕೆಯಿಂದ ಇರಬೇಕು ಅಂತ ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಈ ಕಾಡಾನೆ ಸೆರೆಯಿಂದಾಗಿ ಒಟ್ಟು ಎರಡು ಪುಂಡಾನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಂತಾಗಿದೆ.

5 ದಿನದ ಹಿಂದೆ ನಡೆದ ಕಾರ್ಯಾಚರಣೆಯಲ್ಲೂ ಪುಂಡಾನೆ ಸೆರೆ.!

ಮೂಡಿಗೆರೆ ತಾಲೂಕಿನ ಕುಂಡ್ರ ಗ್ರಾಮದಲ್ಲಿ 5 ದಿನದ ಹಿಂದೆಯೂ ಪುಂಡಾನೆಯೊಂದನ್ನು ಸೆರೆಹಿಡಿಯಲಾಗಿತ್ತು. ಭಾರೀ ಪುಂಡಾಡ ಮೆರೆಯುತ್ತಿದ್ದ ಸುಮಾರು 20 ವರ್ಷದ ಸಲಗವನ್ನು ಸೆರೆಹಿಡಿದು ಶಿವಮೊಗ್ಗದ ಸಕ್ರೆಬೈಲು ಸಾಕಾನೆ ಶಿಬಿರಕ್ಕೆ ಬಿಡಲಾಗಿತ್ತು. ಆ ಬಳಿಕ ಮತ್ತೆ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆಗೆ ಪುಂಡಾನೆಗಳು ಸೆರೆ ಸಿಕ್ಕಿರಲಿಲ್ಲ. ಡ್ರೋಣ್ ಬಳಸಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಹೀಗಾಗಿ ತಲೆಕೆಡಿಸಿಕೊಂಡು ಮತ್ತೆ ಹುಡುಕಾಟ ನಡೆಸುತ್ತಿದ್ದಾಗ ಮತ್ತೊಂದು ಪುಂಡಾನೆ ಇಂದು ಸೆರೆಯಾಗಿದೆ. ಉಪಟಳ ನೀಡುತ್ತಿರೋ ಮತ್ತೊಂದು ಪುಂಡಾನೆಗಾಗಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಮುಂದುವರೆಸಲಿದೆ.

ದಟ್ಟಾರಣ್ಯದಲ್ಲಿ ನಡೆಯಿತು ಕಾಡಾನೆ-ಸಾಕಾನೆ ಕಾದಾಟ..!

ತಳವಾರ ಗ್ರಾಮದ ಅಂಚಿನಲ್ಲಿರೋ ಅರಣ್ಯದಲ್ಲಿ ಪುಂಡಾನೆಯನ್ನ ಅರೆವಳಿಕೆ ಮದ್ದು ನೀಡಿ ಖೆಡ್ಡಾಗೆ ಕೆಡವಲಾಯ್ತು. ಆದರೆ ಪುಂಡಾನೆ ಎಚ್ಚರಗೊಂಡಾಗ ಸಾಕಾನೆ ಜೊತೆ ಕಾದಾಟಕ್ಕೆ ಮುಂದಾಯ್ತು. ಸುಮಾರು ಒಂದು ಗಂಟೆಗಳ ಕಾಲ ಸಾಕಾನೆಗಳ ಜೊತೆಗೆ ಕಾಡಾನೆ ಕಾದಾಟ ನಡೆಸಿತು. ಕೊನೆಗೆ ಮೊದಲೇ ಕಾಡಾನೆಯ ಕಾಲುಗಳಿಗೆ ಕಟ್ಟಿದ ಹಗ್ಗದ ಮೂಲಕ ಹಿಂದೆ-ಮುಂದೆ ಸಾಕಾನೆಗಳು, ಕಾಡಾನೆಯನ್ನು ಕಾಡಿನಿಂದ ಹೊರಕ್ಕೆ ತರಲು ಹರಸಾಹಸ ಮಾಡಿದ್ದವು. ಈ ವೇಳೆ ಸೆರೆಯಾದ ಕಾಡಾನೆಯನ್ನು ನೋಡಲು ಜನರು ಬರಬೇಡಿ ಅಂತ ಅರಣ್ಯ ಇಲಾಖೆ ಅಧಿಕಾರಿಗಳು ಮನವಿ ಮಾಡಿದರು. ಆದರೂ ಕೂಡ ನೂರಾರು ಸಂಖ್ಯೆಯಲ್ಲಿ ಜನರು ಕಾಡಿಗೆ ದೌಡಾಯಿಸಿದರು.

ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಅನುಮತಿ ನೀಡಿದ್ದ ಸರ್ಕಾರ.!

ಮೂಡಿಗೆರೆ ತಾಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ ಕಾಡಾನೆ ದಾಳಿಗೆ ಮೂವರು ಬಲಿಯಾಗಿದ್ದರು. ಕಳೆದ ನವೆಂಬರ್ 20ರಂದು ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಶೋಭಾ ಎಂಬ ಮಹಿಳೆ ಕಾಡಾನೆ ದಾಳಿಗೆ ಮೂರನೇ ಬಲಿಯಾಗಿದ್ದರು. ಈ ವೇಳೆ ಮೃತದೇಹವನ್ನಿಟ್ಟುಕೊಂಡು ಜನರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ತಡವಾಗಿ ಬಂದ ಶಾಸಕ ಎಂ.ಪಿ ಕುಮಾರಸ್ವಾಮಿಯವರನ್ನು ತರಾಟೆ ತೆಗೆದುಕೊಂಡಿದ್ದರು. ಈ ವೇಳೆ ಶಾಸಕರು-ಅಧಿಕಾರಿಗಳು-ಜನರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಪ್ರತಿಭಟನಾನಿರತರ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿದರು. ಶಾಸಕರ ಮೇಲೆ ಹಲ್ಲೆ ಆರೋಪ ಕೂಡ ಕೇಳಿಬಂದಿತ್ತು. ಹರಿದ ಬಟ್ಟೆಯಲ್ಲಿ ಸ್ವತಃ ಶಾಸಕರೇ ವಿಡಿಯೋ ಮಾಡಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ಆರೋಪಿಸಿದರು. ಘಟನೆ ಸಂಬಂಧ ಹಲವರನ್ನು ಬಂಧಿಸಿ ಜೈಲಿಗೂ ಹಾಕಲಾಯ್ತು. ಈ ಎಲ್ಲಾ ಬೆಳವಣಿಗೆ ಆದ ಬಳಿಕ ಎಚ್ಚೆತ್ತ ಸರ್ಕಾರ, ಉಪಟಳ ನೀಡುತ್ತಿರೋ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಅನುಮತಿ ನೀಡಿತು. ಜೊತೆಗೆ ಕಾಡಾನೆ ಹಾವಳಿ ನಿಯಂತ್ರಿಸಲು ಚಿಕ್ಕಮಗಳೂರು ಜಿಲ್ಲೆ ಒಳಗೊಂಡಂತೆ ಹಾಸನ, ಕೊಡಗು, ಮೈಸೂರು ಈ ನಾಲ್ಕು ಜಿಲ್ಲೆಗಳಿಗೆ ಎಲಿಫೆಂಟ್ ಟಾಸ್ಕ್ ಫೋರ್ಸ್ ಕೂಡ ರಚನೆ ಮಾಡಿ ಆದೇಶ ಹೊರಡಿಸಿತು.

ವರದಿ-ಪ್ರಶಾಂತ್ ಟವಿ9 ಚಿಕ್ಕಮಗಳೂರು

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:30 pm, Sat, 3 December 22

Follow Us
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಬಿಎಸ್​ವೈ ಅಭಿಮಾನೋತ್ಸವಕ್ಕೆ ಸಜ್ಜಾದ ಚಿತ್ರದುರ್ಗ: ಕೇಸರಿಮಯವಾದ ನಗರ
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಎರಡನೇ ಪತ್ನಿ ಬೇಕಾ ಎಂದು ನೇರವಾಗಿ ಕೇಳಿದ ಕವಿತಾ; ಚಂದನ್ ಉತ್ತರ ಏನು?
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಸರ್ಕಾರ ರಚನೆಗೆ ವಿಜಯ್​ ಕಸರತ್ತು: ತಮಿಳುನಾಡಿನಲ್ಲಿ ಏನೇನಾಗ್ತಿದೆ ನೋಡಿ!
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ತುಂಬಾ ಒಳ್ಳೇದು! ಯಾಕೆ ಗೊತ್ತಾ?
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ಇಂದು ಈ ರಾಶಿಯವರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗಿಯಾಗಬೇಕು
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ವೇಗದ ಶತಕ ಬಾರಿಸಿದ ಮಿಚೆಲ್ ಮಾರ್ಷ್
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಕಲಬುರಗಿ: 1.44 ಕೋಟಿ ರೂ ಮೌಲ್ಯದ ಫೋನ್‌ ಪತ್ತೆ ಮಾಡಿದ್ಹೇಗೆ ಗೊತ್ತಾ?
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಫೋನ್‌ ಕಳೆದುಕೊಂಡು ವ್ಯಕ್ತಿ ಮಾಡಿದ್ದೇನು? ಅನುಭವದ ಮಾತು ಕೇಳಿ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಮೇ 10ರವರೆಗೆ ಚೆನ್ನೈನಲ್ಲೇ ಇರಿ; ಡಿಎಂಕೆ ಶಾಸಕರಿಗೆ ಸ್ಟಾಲಿನ್ ಆದೇಶ
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್
ಡಾಲಿ ಧನಂಜಯ್ ಪುತ್ರನಿಗಾಗಿ ಕಲಘಟಗಿ ತೊಟ್ಟಿಲು: ವಿಶೇಷತೆ ತಿಳಿಸಿದ ಸಾಹುಕಾರ್