ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಚಿಕ್ಕಮಗಳೂರು ಜಿಲ್ಲೆ ಕಳಪೆ: ಹಿರಿಯ ನಾಯಕಿ ಮೋಟಮ್ಮಗೆ ಡಿಕೆ ಶಿವಕುಮಾರ್ ಅವಮಾನ?
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿಯಲ್ಲಿ ಭಾರಿ ಹಿನ್ನಡೆ ಹಿನ್ನೆಲೆ ಚಿಕ್ಕಮಗಳೂರಿನ ‘ಕೈ’ ನಾಯಕರು, ಮುಖಂಡರಿಗೆ ಡಿಕೆಶಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿಕ್ಕಮಗಳೂರು: ಕಾಂಗ್ರೆಸ್ ಹಿರಿಯ ನಾಯಕಿ ಮೋಟಮ್ಮಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವಮಾನ ಮಾಡಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿಯಲ್ಲಿ ಭಾರಿ ಹಿನ್ನಡೆ ಹಿನ್ನೆಲೆ ಚಿಕ್ಕಮಗಳೂರಿನ ‘ಕೈ’ ನಾಯಕರು, ಮುಖಂಡರಿಗೆ ಡಿಕೆಶಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮೂಡಿಗೆರೆಯಲ್ಲೂ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಕಳಪೆ ಸಾಧನೆ ಹಿನ್ನೆಲೆ ಸಭೆಯಲ್ಲೇ ಮೋಟಮ್ಮ ವಿರುದ್ಧ ಡಿಕೆಶಿ ಗರಂ ಆಗಿದ್ದಾರೆ.
ಬಳಿಕ ಹಿರಿಯ ನಾಯಕಿ ಮೋಟಮ್ಮ ಸಮಾಜಾಯಿಷಿ ನೀಡಲು ಕಾರು ಬಳಿ ಬಂದು ಕ್ಷಮೆ ಕೇಳಿದಾಗ ನೋ ನೋ ಸಾರಿ ಮಾತನಾಡಬೇಡಿ. ಮೊದಲು ಮೆಂಬರ್ ಶಿಪ್ ಎಂದು ಕಾರ್ ಹತ್ತಿ ಹೊರಟು ಹೋಗಿದ್ದಾರೆ. ನೂರಾರು ಜನರ ಮಧ್ಯೆಯೇ ಹಿರಿಯ ನಾಯಕಿಗೆ ಪ್ರತಿಕ್ರಿಯೆ ನೀಡದೆ ಡಿಕೆಶಿ ಹೊರಟು ಹೋಗಿದ್ದು ಅವಮಾನ ಮಾಡಿದಂತಾಗಿದೆ.
ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಲ್ಲಿ ಡಿಜಿಟಲ್ ಸದಸ್ಯತ್ವ ಅಭಿಯಾನದ ಪ್ರಗತಿ ಪರಿಶೀಲನೆ ಸಭೆ ನಡೆಸಲಾಗಿದೆ. ಸಭೆಯಲ್ಲಿ ಡಿಕೆ ಶಿವಕುಮಾರ್ ಚಿಕ್ಕಮಗಳೂರಿನ ‘ಕೈ’ ನಾಯಕರು, ಮುಖಂಡರ ವಿರುದ್ಧ ಗರಂ ಆಗಿದ್ದಾರೆ. ಈ ವೇಳೆ ನನಗೆ ಹೊಣೆ ವಹಿಸಿದ್ದರೆ ಸದಸ್ಯತ್ವ ನೋಂದಣಿ ಮಾಡುತ್ತಿದ್ದೆ ಎಂದು ನಯನಾ ಮೋಟಮ್ಮ ಹೇಳಿದ್ದಾರೆ. ಆಗ ಪ್ರತಿಕ್ರಿಯೆ ನೀಡಿದ ಡಿಕೆಶಿ ನಿಮ್ಮ ತಾಯಿಯನ್ನ MLA ಮಾಡಿದ್ದೇವೆ, ಎಂಎಲ್ಸಿ ಮಾಡಿದ್ದೇವೆ. ಹೀಗಿದ್ರೂ ಹಂಗೂ ಇಲ್ಲ ಹಿಂಗೂ ಇಲ್ಲ ಅಂದ್ರೆ ಯಾರು ಕೇಳ್ತಾರೆ? ಎಂದು ಮಾಜಿ ಸಚಿವೆ ಮೋಟಮ್ಮ ಪುತ್ರಿ ನಯನಾಗೆ ಡಿಕೆಶಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ನಮ್ಮ ಪಕ್ಷಕ್ಕೆ ಆಧಾರಸ್ತಂಭ ಸದಸ್ಯತ್ವ ನೋಂದಣಿ. ನಿಮ್ಮ ಕಳಪೆ ಸಾಧನೆಯಿಂದ ನನಗೆ ದುಃಖ ಆಗ್ತಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಿಗೂ ಡಿಕೆಶಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಿಮ್ಮ ಬಗ್ಗೆ ನಂಬಿಕೆ ಇತ್ತು, ಆದರೆ ನಂಬಿಕೆ ಕಳೆದುಕೊಂಡು ಬಿಟ್ರಿ. ಚಿಕ್ಕಮಗಳೂರಿನ ಜನರು ವಿದ್ಯಾವಂತರು, ಬುದ್ಧಿವಂತರಿದ್ದಾರೆ. ಆದ್ರೆ ನಿಮಗೆ ಏಕೆ ಸದಸ್ಯತ್ವ ನೋಂದಣಿ ಮಾಡಿಸೋಕೆ ಆಗ್ತಿಲ್ಲ ಎಂದು ಶೃಂಗೇರಿ ಶಾಸಕ ರಾಜೇಗೌಡ ವಿರುದ್ಧವೂ ಡಿಕೆಶಿ ಅಸಮಾಧಾನ ಹೊರ ಹಾಕಿದ್ದಾರೆ.
ಇನ್ನು ಪರಿಷತ್‍ನಲ್ಲಿ ಮತಾಂತರ ನಿಷೇಧ ಬಿಲ್ ಪಾಸ್‍ಗೆ BJP ಸಿದ್ಧತೆ ಸಂಬಂಧ ಮಾತನಾಡಿರುವ ಡಿಕೆಶಿ ನಾವು ವಿರೋಧಿಸ್ತೇವೆ, ಅವರು ಏನು ಬೇಕಾದ್ರೂ ಮಾಡಿಕೊಳ್ಳಲಿ. ಬಿಜೆಪಿಯವರು ಜನರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದೆ ನಮ್ಮ ಸರ್ಕಾರ ಬರುತ್ತೆ, ಆಗ ಎಲ್ಲಾ ರಿವರ್ಸ್ ಮಾಡುತ್ತೇವೆ. ಕಾಂಗ್ರೆಸ್ ಡಿಜಿಟಲ್ ಸದಸ್ಯತ್ವ ನೋಂದಣಿಯಲ್ಲಿ ಭಾರಿ ಹಿನ್ನಡೆಯಾಗಿದೆ. ಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದವರಿಗೆ ಪಕ್ಷದಲ್ಲಿ ಅವಕಾಶ. ಕಾಂಗ್ರೆಸ್ ಮೆಂಬರ್ ಮಾಡಿಸದಿದ್ರೆ ಮತ ಹೇಗೆ ಪಡೆಯುತ್ತಾರೆ? ಎಂದರು.
ಇದನ್ನೂ ಓದಿ: Ranji Trophy: 73 ವರ್ಷಗಳ ಹಳೆಯ ದಾಖಲೆ ಉಡೀಸ್! ಹೊಸ ಇತಿಹಾಸ ಬರೆದ ಜಾರ್ಖಂಡ್, ಕ್ವಾರ್ಟರ್ ಫೈನಲ್‌ಗೆ ಎಂಟ್ರಿ
Published On - 6:33 pm, Thu, 17 March 22