AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chikkamagaluru News:ಲಾರಿ ಬೈಕ್​ ನಡುವೆ ಮುಖಾಮುಖಿ ಡಿಕ್ಕಿ; ಸವಾರರಿಬ್ಬರು ಸ್ಥಳದಲ್ಲೇ ಸಾವು

ಜಿಲ್ಲೆಯ ತರೀಕೆರೆ ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ಲಾರಿ ಹಾಗೂ ಬೈಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕ್​ನಲ್ಲಿದ್ದ ವಿಶ್ವಾಸ್(24), ದೀಪಿಕಾ(22) ಮೃತ ರ್ದುದೈವಿಗಳು.

Chikkamagaluru News:ಲಾರಿ ಬೈಕ್​ ನಡುವೆ ಮುಖಾಮುಖಿ ಡಿಕ್ಕಿ; ಸವಾರರಿಬ್ಬರು ಸ್ಥಳದಲ್ಲೇ ಸಾವು
ಮೃತ ರ್ದುದೈವಿ
ಕಿರಣ್ ಹನುಮಂತ್​ ಮಾದಾರ್
|

Updated on: Jun 21, 2023 | 9:09 AM

Share

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ(Tarikere)ತಾಲೂಕಿನ ಕಟ್ಟೆಹೊಳೆ ಗೇಟ್ ಬಳಿ ಲಾರಿ ಹಾಗೂ ಬೈಕ್​ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೈಕ್​ನಲ್ಲಿದ್ದ ವಿಶ್ವಾಸ್(24), ದೀಪಿಕಾ(22) ಮೃತ ರ್ದುದೈವಿಗಳು. ತರೀಕೆರೆ ತಾಲೂಕಿನ ಬೇಲೇನಹಳ್ಳಿಯ ನಿವಾಸಿಯಾದ ವಿಶ್ವಾಸ್ ಮತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ದೀಪಿಕಾ ಇಬ್ಬರು ಬೈಕ್​ನಲ್ಲಿ ಹೋಗುವಾಗ ಈ ಅಪಘಾತವಾಗಿದೆ. ಇನ್ನು ಈ ಘಟನೆ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಪರಿಚಿತ ವಾಹನಕ್ಕೆ ಬೈಕ್​ ಡಿಕ್ಕಿ, ಸವಾರ ಸಾವು

ಚಿತ್ರದುರ್ಗ: ಅಪರಿಚಿತ ವಾಹನಕ್ಕೆ ಬೈಕ್​ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಬಳಿ ನಡೆದಿದೆ. ಸವಾರ ಮಹಾಂತೇಶ್​(30)ಮೃತ ವ್ಯಕ್ತಿ. ಇತ ಚಿಕ್ಕಮ್ಮನಹಳ್ಳಿಯಿಂದ ಗಂಜಿಗಟ್ಟೆ ಗ್ರಾಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಈ ಕುರಿತು ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:Viral Video: ಭೀಕರ ರಸ್ತೆ ಅಪಘಾತ, ಸೀಟ್​​ ಬೆಲ್ಟ್​ ಹಾಕದೇ ಇದ್ದಿದ್ದಕ್ಕೆ ಚಾಲಕನ ಸ್ಥಿತಿ ಏನಾಯ್ತು ನೋಡಿ

ಬೆಂಗಳೂರು ಮೈಸೂರು ಎಸ್ಸ್ ಪ್ರೆಸ್ ಹೈವೆಯಲ್ಲಿ ಭೀಕರ ಅಪಘಾತ; ಮೂವರು ಸಾವು

ಮಂಡ್ಯ: ಜಿಲ್ಲೆಯ ಮದ್ದೂರು ತಾಲೂಕಿನ ಕಿಟ್ಟಿ ಡಾಬಾ ಬಳಿ ಸ್ವಿಪ್ಟ್ ಡಿಸೈರ್ ಕಾರು ಎದುರುಗಡೆಯಿದ್ದ ಟಾಟ ಹೆಕ್ಸಾ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತ ಘಟನೆ ನಿನ್ನೆ(ಜೂ.20) ನಡೆದಿತ್ತು. ನೀರಜ್ ಕುಮಾರ್, ಶೈಲಿ ಹಾಗೂ ನಿರಂಜನ್ ಮೃತ ರ್ದುದೈವಿಗಳು. ನೀರಜ್ ಕುಮಾರ್ ಉತ್ತರ ಪ್ರದೇಶ ರಾಜ್ಯ ಸರ್ಕಾರದ ನೇಮಕಾತಿ ಹಾಗೂ ತರಭೇತಿ ವಿಭಾಗದ ಹೆಚ್ಚುವರಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ರು. ನಿನ್ನೆ ಬೆಂಗಳೂರಿನಿಂದ ಕುಟುಂಬ ಸಮೇತರಾಗಿ ಮಡಿಕೇರಿಗೆ ಹೋಗುವ ಪ್ಲಾನ್ ಮಾಡಿದ್ರು, ಅದರಂತೆ ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ನಿಂದ ನೀರಜ್ ಪತಿ ಶೈಲಿ ಹಾಗೂ ಪುತ್ರ ಶ್ರೀ ವಾತ್ಸವರನ್ನ ಕರೆದು ಕೊಂಡು ಮಡಿಕೇರಿಗೆ ಹೋಗಲಾಗುತ್ತಿತ್ತು. ಆದ್ರೆ, ಸುರಿಯುತ್ತಿದ್ದ ಜಿಟಿ ಜಿಟಿ ಮಳೆಯಿಂದ ವೆಗವಾಗಿ ಹೋಗುತ್ತಿದ್ದ ಸ್ವಿಪ್ಟ್ ಡಿಸೈರ್ ಕಾರು ಎದುರುಗಡೆಯಿದ್ದ ಟಾಟ ಹೆಕ್ಸಾ ಕಾರಿಗೆ ಡಿಕ್ಕಿ ಹೊಡೆದಿತ್ತು, ಇದರ ಪರಿಣಾಮ ಮೂವರು ಸ್ಥಳದಲ್ಲೇ ಮೃತ ಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯದೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಇನ್ನಷ್ಟು ಅಪಘಾತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ