ಚಿಕ್ಕಮಗಳೂರು ಕಾಫಿ ಎಸ್ಟೇಟ್​​ನಲ್ಲಿ ಅನಾಥ ಮಹಿಳೆಯ ಹತ್ಯೆ, ಮರ್ಡರ್​​​ ಪ್ರಕರಣ ಬಯಲಾಗಲು 7 ದಿನದ ನಂತರ ಜಿಲ್ಲಾ ಎಸ್​​ಪಿಗೆ ಬಂದಿತ್ತು ಫೋನ್ ಕರೆ

Chikkamagaluru SP: ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಗೆ ಏಳು ದಿನದ ಹಿಂದೆ ನಡೆದಿದ್ದ‌ ಮರ್ಡರ್ ಬಗ್ಗೆ ಬಂದ ಒಂದು ಫೋನ್ ಕಾಲ್ ಸುಳಿವು ನೀಡಿತ್ತು. ಮಲ್ಲಂದೂರು ಠಾಣಾ ವ್ಯಾಪ್ತಿಯ ಸಿದ್ದಾಪುರದ ಸುಪ್ರೀಂ ಕಾಫಿ ಎಸ್ಟೇಟ್ ನಲ್ಲಿ 7 ದಿನದ ಹಿಂದೆ ಮಹಿಳೆಯನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾರಂತೆ ಎಂದು ಕಾಲ್ ಮಾಡಿದ ವ್ಯಕ್ತಿ ಮಾಹಿತಿ ಹೇಳಿದ್ದ.

ಚಿಕ್ಕಮಗಳೂರು ಕಾಫಿ ಎಸ್ಟೇಟ್​​ನಲ್ಲಿ ಅನಾಥ ಮಹಿಳೆಯ ಹತ್ಯೆ, ಮರ್ಡರ್​​​ ಪ್ರಕರಣ ಬಯಲಾಗಲು 7 ದಿನದ ನಂತರ ಜಿಲ್ಲಾ ಎಸ್​​ಪಿಗೆ ಬಂದಿತ್ತು ಫೋನ್ ಕರೆ
ಚಿಕ್ಕಮಗಳೂರು ಕಾಫಿ ಎಸ್ಟೇಟ್​​ನಲ್ಲಿ ಅನಾಥ ಮಹಿಳೆಯ ಹತ್ಯೆ
Follow us
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Jun 20, 2023 | 11:21 AM

ಬಂದೂಕಿನಿಂದ ಗುಂಡಿಕ್ಕಿ ಕಾಫಿ ಎಸ್ಟೇಟ್ ಮನೆಯಲ್ಲಿ ದಲಿತ ಕೂಲಿ ಕಾರ್ಮಿಕ ಮಹಿಳೆಯ (woman) ಹತ್ಯೆ ಮಾಡಲಾಗಿತ್ತು. ಕಾಫಿ ತೋಟದ ಮಧ್ಯೆ ಶವ ಸುಟ್ಟು ಹಾಕಲಾಗಿತ್ತು. ಮರ್ಡರ್ ನಡೆದು ಏಳು ದಿನವಾದ್ರೂ ಹತ್ಯೆಯ ಬಗ್ಗೆ ಹಂತಕರು ಚಿಕ್ಕ ಸುಳಿವೂ ಬಿಟ್ಟಿರಲಿಲ್ಲ. ಇಲ್ಲೊಂದು ‌ಮಹಿಳೆಯ ಹತ್ಯೆಯಾಗಿದೆ ಎಂಬುದು ಅಕ್ಕಪಕ್ಕದ ಮನೆಯವರಿಗೂ ಗೊತ್ತಾಗಿರಲಿಲ್ಲ. ಕಾಫಿ ಎಸ್ಟೇಟ್ ನಲ್ಲಿ ನಡೆದಿದ್ದ ಮರ್ಡರ್ (murder) ಕಹಾನಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗೆ (chikkamagaluru SP) ಬಂದ ಒಂದು ಫೋನ್ ಕಾಲ್ ನಿಂದ ಹತ್ಯೆ ನಡೆದು 7 ದಿನದ ನಂತರ ಹೊರ ಬಂದಿದೆ.

ಏಳು ದಿನದ ಹಿಂದೆ ಕಾಫಿ ಎಸ್ಟೇಟ್ ಮನೆಯಲ್ಲಿ ನಡೆದಿದ್ದ‌ ಮರ್ಡರ್ ಕಹಾನಿಗೆ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಗೆ ಬಂದ ಒಂದು ಫೋನ್ ಕಾಲ್ ಸುಳಿವು ನೀಡಿತ್ತು. ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದ ಸುಪ್ರೀಂ ಕಾಫಿ ಎಸ್ಟೇಟ್ ನಲ್ಲಿ ದಲಿತ ಕೂಲಿ ‌ಕಾರ್ಮಿಕ ಮಹಿಳೆಯನ್ನ 7 ದಿನದ ಹಿಂದೆ ಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿ ಸುಟ್ಟು ಹಾಕಿದ್ದಾರಂತೆ ಎಂದು ಕಾಲ್ ಮಾಡಿದ ವ್ಯಕ್ತಿ ಮಾಹಿತಿ ಹೇಳಿದ್ದ.

ಮಾಹಿತಿಯ ಮೂಲ ಹುಡುಕಿದ್ದ ಪೊಲೀಸರಿಗೆ ನಿರ್ಜನ ಕಾಫಿ ತೋಟದ ಮಧ್ಯೆ ಮಹಿಳೆಯನ್ನ ಸಂಪೂರ್ಣ ಸುಟ್ಟು ಹಾಕಿರುವುದು ಕನ್ಫರ್ಮ್ ಆಗಿತ್ತು. ಹೌದು 7 ದಿನದ ಹಿಂದೆ ಚಿಕ್ಕ ಸುಳಿವು ಇಲ್ಲದೆ ಸಿದ್ದಾಪುರ ಗ್ರಾಮದ ಸುಪ್ರೀಂ ಕಾಫಿ ಎಸ್ಟೇಟ್ ನಲ್ಲಿ ದಲಿತ ಕೂಲಿ ಕಾರ್ಮಿಕ ಮಹಿಳೆ 55 ವರ್ಷದ ಜಯಮ್ಮ ಅವರನ್ನ ಬಂದೂಕಿನಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದ ಹಂತಕರು ಎಸ್ಟೇಟ್ ಮನೆಯಿಂದ 2 ಕಿಮೀ ದೂರದ ನಿರ್ಜನ ಕಾಫಿ ತೋಟದಲ್ಲಿ ಮಹಿಳೆಯ ಶವ ಸಂಪೂರ್ಣ ಸುಟ್ಟು ಬೂದಿ ಮಾಡಿದ್ದರು.

Also Read:   ಮುದ್ದಿನ ತಂಗಿ ಪ್ರೀತಿಯ ಬಲೆಗೆ ಬಿದ್ದಳು, ಅದರಿಂದ ಹೆಣ ಬಿದ್ದಿದ್ದು ಎಂಜಿನಿಯರಿಂಗ್ ಓದಿಸುತ್ತಿದ್ದ​​ ಅಣ್ಣನದು!

ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಸುಪ್ರೀಂ ಕಾಫಿ ಎಸ್ಟೇಟ್ ಮಾಲೀಕ ಹೆಗಡೆ ಗೌಡ ಅವರ ಕಾಫಿ ತೋಟದಲ್ಲಿ‌ ಎರಡು ವರ್ಷಗಳಿಂದ ಕೂಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆ ಜಯಮ್ಮ ಅನಾಥೆ ಎಂದು ಹೇಳಲಾಗುತ್ತಿದ್ದು, ಜಯಮ್ಮ ಹತ್ಯೆ ಸಂಬಂಧ ಎಸ್ಟೇಟ್ ಮಾಲೀಕ ಸೇರಿದಂತೆ ಮಾಲೀಕನ ಮಗನ ಮೇಲೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಸ್ಟೇಟ್ ಮಾಲೀಕ ಹೆಗಡೆ ಗೌಡ, ಮಗ ಸುಪ್ರೀಂ, ಕಾರ್ಮಿಕ ನಾಗಪ್ಪನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 7 ದಿನದ ಹಿಂದೆ ಚಿಕ್ಕ ಸುಳಿವು ಸಹ ನೀಡದೆ ಮಹಿಳೆಯ ಹತ್ಯೆ ಮಾಡಿ ಕಾಫಿ ತೋಟದಲ್ಲಿ ಸುಟ್ಟು ಹಾಕಿರುವ ಹಂತಕ ಯಾರು, ಮಹಿಳೆಯ ಹತ್ಯೆಯ ಹಿಂದಿನ ಕಾರಣ ಏನು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್