ರಾಜ್ಯ, ದೇಶಕ್ಕೆ ಈ ಸರ್ಕಾರ ಕೆಟ್ಟ ಹೆಸರು ತಂದಿದೆ, ಬಿಜೆಪಿಗೆ 40% ಕಮಿಷನ್, ಲಂಚ, ಮಂಚ ಮೂಲಭೂತ ಬಳುವಳಿ -ಡಿಕೆ ಶಿವಕುಮಾರ್ ವಾಗ್ದಾಳಿ
ಕೋಟೆ ನಾಡು ಚಿತ್ರದುರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ. ರಾಜ್ಯ, ದೇಶಕ್ಕೆ ಈ ಸರ್ಕಾರ ಕೆಟ್ಟ ಹೆಸರು ತಂದಿದೆ ಎಂದರು.
ಚಿತ್ರದುರ್ಗ: ರಾಜ್ಯ ಬಿಜೆಪಿ ಸರ್ಕಾರ(BJP Government) 40% ಕಮಿಷನ್ ಸರ್ಕಾರ. ರಾಜ್ಯ, ದೇಶಕ್ಕೆ ಈ ಸರ್ಕಾರ ಕೆಟ್ಟ ಹೆಸರು ತಂದಿದೆ. ಯಾವ ವಿಚಾರಣೆಯಿಂದ ನನ್ನ ಏನೂ ಮಾಡಲಾಗಲ್ಲ. 3 ವರ್ಷದಿಂದ ನನನ್ನು ಏನೂ ಮಾಡಲು ಆಗಿಲ್ಲ. ಮುಂದೇನೂ ನನ್ನನ್ನ ಏನೂ ಮಾಡುವುದಕ್ಕೆ ಆಗಲ್ಲ. ನಮ್ಮ ಪಕ್ಷದ ಶಾಸಕರನ್ನ ರಕ್ಷಿಸಿದ್ದಕ್ಕೆ ಅಧಿಕಾರ ದುರ್ಬಳಕೆ ಮಾಡಿಕೊಂಡು ಕೇಸ್ ಹಾಕಿದ್ದಾರೆ ಎಂದು ಚಿತ್ರದುರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ವಾಗ್ದಾಳಿ ನಡೆಸಿದ್ದಾರೆ.
ಕೋಟೆ ನಾಡು ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಭಾರತ ಐಕ್ಯತಾ ಯಾತ್ರೆಯ ಪೂರ್ವ ಭಾವಿ ಸಭೆ ನಡೆಯಲಿದೆ. ಸಭೆಯಲ್ಲಿ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಧಾಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್, ಕೆಪಿಸಿಸಿ ಕಾರ್ಯದ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಹೆಚ್.ಆಂಜನೇಯ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಸೇರಿ ಗಣ್ಯರು ಭಾಗಿಯಾಗಲಿದ್ದು ಡಿಕೆ ಶಿವಕುಮಾರ್ ಚಿತ್ರದುರ್ಗಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಮಾಜದ ಸ್ವಾಸ್ಥ್ಯ ಕದಡುವವರು ಯಾವುದೇ ಸಂಘಟನೆಗೆ ಸೇರಿದವರಾಗಿರಲಿ, ಅವರ ವಿರುದ್ಧ ಕ್ರಮ ಜರುಗಿಸಬೇಕು: ಯುಟಿ ಖಾದರ್, ಶಾಸಕ
ಬಿಜೆಪಿಗೆ 40% ಕಮಿಷನ್, ಲಂಚ, ಮಂಚ ಮೂಲಭೂತ ಬಳುವಳಿ. ನನಗೆ ಅಶೋಕ್ ಹಾಗೂ ಯಾರು ಹೇಳುವ ಅಗತ್ಯವಿಲ್ಲ. ಜನ ಸರ್ಕಾರಕ್ಕೆ ಭ್ರಷ್ಟ ಸರ್ಕಾರ ಎಂಬ ಗಿಫ್ಟ್ ಕೊಟ್ಟಿದ್ದಾರೆ. ಭ್ರಷ್ಟ ಸರ್ಕಾರ ಎಂಬುದನ್ನ ತೊಳೆದು ರಾಜ್ಯದ ಗೌರವ ಉಳಿಸಲಿ ಎಂದರು. ಇನ್ನು ಇದೇ ವೇಳೆ ಭಾರತ್ ಜೋಡೋ ಅಲ್ಲ, ಕಾಂಗ್ರೆಸ್ ಜೋಡೋ ಎಂದು ಬಿಜೆಪಿ ವ್ಯಂಗ್ಯವಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ, ನಮ್ಮ ವಿಚಾರ ನಾವೇನಾದರೂ ಮಾಡಿಕೊಳ್ಳುತ್ತೇವೆ ಬಿಡಿ ಎಂದು ತಿರುಗೇಟು ಕೊಟ್ಟರು. ಹಾಗೂ ಭಾರತ್ ಜೋಡೋ ಯಾತ್ರೆ ವೇಳೆ ಬಿಜೆಪಿಯಿಂದ ರಾಹುಲ್ ಗೋಬ್ಯಾಕ್ ಅಭಿಯಾನ ಮಾಡಲು ಸಿದ್ದತೆ ನಡೆದಿರುವ ಬಗ್ಗೆ, ಗೋಬ್ಯಾಕ್ ಆದರೂ ಮಾಡಲಿ, ಕಂ ಬ್ಯಾಕ್ ಆದರೂ ಮಾಡಲಿ ಎಂದು ವ್ಯಂಗ್ಯವಾಡಿದ್ದಾರೆ.
ಹಾಗೂ ಇದೇ ವೇಳೆ ಡಿಕೆ ಶಿವಕುಮಾರ್ ರಾಹುಲ್ ಗಾಂಧಿಗೆ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಲು ಮನವಿ ಮಾಡಿದ್ದಾರೆ. ಪಕ್ಷದ ಅಧ್ಯಕ್ಷಗಿರಿ ತಿರಸ್ಕರಿಸದಂತೆ ಮನವಿ ಮಾಡಿದ್ದಾರೆ. ಪಕ್ಷ ಮತ್ತು ದೇಶದ ಹಿತದೃಷ್ಠಿಯಿಂದ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಲು ತಿಳಿಸಿದ್ದಾರೆ. ಗಾಂಧಿ ಕುಟುಂಬದಿಂದ ಮಾತ್ರ ಪಕ್ಷ ಮತ್ತು ದೇಶ ಸಂಘಟಿತವಾಗಿರಲು ಸಾಧ್ಯ ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:51 pm, Tue, 27 September 22