AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುರ್ಗದ ಗುಡ್ಡಕ್ಕೆ ಕಾಂಪೌಂಡ್‌ ಕೋಟೆ, ಯೋಜನೆ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು

ಚಿತ್ರದುರ್ಗ: ವ್ಯರ್ಥ ಕೆಲಸಕ್ಕೆ ಗುಡ್ಡದ ಮೇಲಕ್ಕೆ ಕಲ್ಲು ಹೊತ್ತಂತೆ ಎಂದು ಹೇಳುವ ಮಾತೊಂದಿದೆ. ಕೋಟೆನಾಡಿನಲ್ಲಿ ಮಾತ್ರ ಅಧಿಕಾರಿಗಳು ಅಕ್ಷರಶ: ಗುಡ್ಡಕ್ಕೆ ಕಲ್ಲು ಹೊರುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂಶೋಧಕರು ಹಾಗೂ ಪರಿಸರ ಪ್ರಿಯರ ಆಕ್ರೋಶಕ್ಕೆ ಗುರಿ ಆಗಿದ್ದಾರೆ. ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತಿರುವ ಬೃಹತ್ ಕಲ್ಲುಗಳ ರಾಶಿಯ ಮನಮೋಹಕ ಬೆಟ್ಟಗುಡ್ಡಗಳು. ಈ ಬೆಟ್ಟಗುಡ್ಡ ಸುತ್ತಲು ನಿರ್ಮಾಣವಾಗುತ್ತಿರುವ ಕಾಂಪೌಂಡ್‌ ಕಾಮಗಾರಿ. ಹೀಗೆ ಬೆಟ್ಕಕ್ಕೆ ಬೇಲಿ ಹಾಕುವ ಕೆಲಸ ನಡೆಯುತ್ತಿರುವುದು ಕೋಟೆನಾಡು ಚಿತ್ರದುರ್ಗದಲ್ಲಿ. ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು […]

ದುರ್ಗದ ಗುಡ್ಡಕ್ಕೆ ಕಾಂಪೌಂಡ್‌ ಕೋಟೆ, ಯೋಜನೆ ವಿರುದ್ಧ ರೊಚ್ಚಿಗೆದ್ದ ಸ್ಥಳೀಯರು
ಸಾಧು ಶ್ರೀನಾಥ್​
|

Updated on:Jan 31, 2020 | 3:21 PM

Share

ಚಿತ್ರದುರ್ಗ: ವ್ಯರ್ಥ ಕೆಲಸಕ್ಕೆ ಗುಡ್ಡದ ಮೇಲಕ್ಕೆ ಕಲ್ಲು ಹೊತ್ತಂತೆ ಎಂದು ಹೇಳುವ ಮಾತೊಂದಿದೆ. ಕೋಟೆನಾಡಿನಲ್ಲಿ ಮಾತ್ರ ಅಧಿಕಾರಿಗಳು ಅಕ್ಷರಶ: ಗುಡ್ಡಕ್ಕೆ ಕಲ್ಲು ಹೊರುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಸಂಶೋಧಕರು ಹಾಗೂ ಪರಿಸರ ಪ್ರಿಯರ ಆಕ್ರೋಶಕ್ಕೆ ಗುರಿ ಆಗಿದ್ದಾರೆ.

ಪರಿಸರ ಪ್ರಿಯರನ್ನು ಕೈಬೀಸಿ ಕರೆಯುತ್ತಿರುವ ಬೃಹತ್ ಕಲ್ಲುಗಳ ರಾಶಿಯ ಮನಮೋಹಕ ಬೆಟ್ಟಗುಡ್ಡಗಳು. ಈ ಬೆಟ್ಟಗುಡ್ಡ ಸುತ್ತಲು ನಿರ್ಮಾಣವಾಗುತ್ತಿರುವ ಕಾಂಪೌಂಡ್‌ ಕಾಮಗಾರಿ. ಹೀಗೆ ಬೆಟ್ಕಕ್ಕೆ ಬೇಲಿ ಹಾಕುವ ಕೆಲಸ ನಡೆಯುತ್ತಿರುವುದು ಕೋಟೆನಾಡು ಚಿತ್ರದುರ್ಗದಲ್ಲಿ.

ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಸುಮಾರು 2ಕೋಟಿ ರೂಪಾಯಿ ವೆಚ್ಚದಲ್ಲಿ ಜಿಲ್ಲೆಯ ಬೆಟ್ಟಗುಡ್ಡಗಳ ಸಂರಕ್ಷಣೆ ನೆಪದಲ್ಲಿ ಬೆಟ್ಟದ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಯೋಜನೆ ಆರಂಭಿಸಿದೆ. ಹತ್ತಾರು ಕಿಲೋ ಮೀಟರ್ ಗುಡ್ಡದ ಸುತ್ತಲೂ ಕಲ್ಲಿನ ಕಾಂಪೌಂಡ್, ಕಬ್ಬಿಣದ ತಂತಿಬೇಲಿಯನ್ನು ಹಾಕಲಾಗುತ್ತಿದೆ. ಆದ್ರೆ ಇದರಿಂದ ಹಣ ವ್ಯರ್ಥ ಮಾಡಲಾಗುತ್ತಿದೆ. ಜೊತೆಗೆ ಪ್ರಾಚೀನ ಕಾಲದ ಪರಿಸರಕ್ಕೆ ಧಕ್ಕೆ ಮಾಡಲಾಗುತ್ತಿದೆ ಎಂದು ಹಿರಿಯ ಸಂಶೋಧಕರು ಆರೋಪಿಸಿದ್ದಾರೆ.

ಇನ್ನು ಈಗಾಗಲೇ ಅನೇಕ ಸಂಘ-ಸಂಸ್ಥೆಗಳು, ಪರಿಸರ ಪ್ರಿಯರು ಕಾಂಪೌಂಡ್ ನಿರ್ಮಾಣಕ್ಕೆ ಹಣ ಪೋಲಾಗುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ದೂರು ನೀಡಿದ್ದಾರೆ. ಅಲ್ಲದೇ ಐತಿಹಾಸಿಕ ಬೆಟ್ಟಗಳಲ್ಲಿ ಅನೇಕ ದೇಗುಲಗಳಿದ್ದು ನೂರಾರು ವರ್ಷಗಳಿಂದ ಜನ ದೇವಸ್ಥಾನಗಳಿಗೆ ನಡೆದುಕೊಳ್ಳುತ್ತಿದ್ದಾರೆ. ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಈಗ ಕಾಂಪೌಂಡ್ ನಿರ್ಮಾಣದ ಮೂಲಕ ಧಾರ್ಮಿಕ ಕಾರ್ಯಕ್ಕೂ ಅಡ್ಡಿಪಡಿಸಿದಂತಾಗುತ್ತಿದೆ ಎಂದು ಜನ ಆರೋಪಿಸಿದ್ದಾರೆ. ಆದ್ರೂ, ಸಹ ಅಧಿಕಾರಿಗಳು ಮಾತ್ರ ಕಾಂಪೌಂಡ್ ನಿರ್ಮಾಣ ಕಾರ್ಯ ನಿಲ್ಲಿಸಿಲ್ಲ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಬಳಿಯ ಬೃಹತ್ ಬೆಟ್ಟಗುಡ್ಡಗಳ ಸುತ್ತ ಕಾಂಪೌಂಡ್ ನಿರ್ಮಿಸುವ ಕಾರ್ಯ ಸಾಗಿದೆ. ಆದ್ರೆ ಬೆಟ್ಟಗಡ್ಡಗಳಿಗೆ ಕಾಂಪೌಡ್‌ ನಿರ್ಮಿಸುವ ಅವಶ್ಯಕತೆ ಇತ್ತ ಅನ್ನೋ ಪ್ರಶ್ನೆ ಜನರಲ್ಲಿ ಎದ್ದಿದೆ.

Published On - 3:12 pm, Fri, 31 January 20