AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆಗೆ ಹೋಗುವಾಗ ಬಸ್ ಡ್ರೈವರ್ ಇಮ್ರಾನ್ ಮೇಲೆ ಲವ್: ಮದ್ವೆಯಾದ 3 ವರ್ಷದಲ್ಲೇ ಆಶಾ ಅನುಮಾಸ್ಪದ ಸಾವು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಿಂದ ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ಮಹಿಳೆ ಏಕಾಏಕಿ ಅನುಮಾಸ್ಪದವಾಗಿ ನಿಧನ ಹೊಂದಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ. ಈ ಸಾವಿನ ಹಿಂದೆ ವರದಕ್ಷಿಣೆ ಹಾಗೂ ಲವ್‌ ಜಿಹಾದ್‌ ಆರೋಪಗಳು ವ್ಯಕ್ತವಾಗಿವೆ. ಹಾಗಾದ್ರೆ, ಆಶಾ ಹಾಗೂ ಇಮ್ರಾನ್ ಪರಿಚಯ ಲವ್ ಆಗಿದ್ಹೇಗೆ ಎನ್ನುವ ಡಿಟೇಲ್ಸ್ ಇಲ್ಲಿದೆ.

ಶಾಲೆಗೆ ಹೋಗುವಾಗ ಬಸ್ ಡ್ರೈವರ್ ಇಮ್ರಾನ್ ಮೇಲೆ ಲವ್: ಮದ್ವೆಯಾದ 3 ವರ್ಷದಲ್ಲೇ ಆಶಾ ಅನುಮಾಸ್ಪದ ಸಾವು
Imran And Asha
ಬಸವರಾಜ ಮುದನೂರ್
| Edited By: |

Updated on: Oct 13, 2026 | 9:07 PM

Share

ಚಿತ್ರದುರ್ಗ, (ಅಕ್ಟೋಬರ್ 13): ಜಿಲ್ಲೆಯ ಹೊಸಯಳನಾಡು ಗ್ರಾಮದ ಆಶಾ (30) ಎಂಬ ಮಹಿಳೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾಳೆ. 30 ವರ್ಷದ ಆಶಾ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಹಲವು ಅನುಮಾನುಗಳು ವ್ಯಕ್ತವಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂಪರ ಸಂಘಟನೆಗಳು ಲವ್ ಜಿಹಾದ್ ಆರೋಪ ಮಾಡಿವೆ. ಚಿತ್ರದುರ್ಗ ಜಿಲ್ಲೆ ಹೊಸಯಳನಾಡು ಗ್ರಾಮದ ಆಶಾ, ಶಾಲೆಗೆ ಹೋಗುವಾಗ ಬಸ್‌ ಚಾಲಕ ಇಮ್ರಾನ್ ಪರಿಚಯ ಆಗಿತ್ತು. ಅದೇ ಪರಿಚಯ ಪ್ರೀತಿಗೆ ತಿರುಗಿದ್ದು, ಮನೆಯವರ ವಿರೋಧದ ನಡುವೆ ಇಬ್ಬರು ಮದುವೆ ಆಗಿದ್ರು. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಆಶಾ, ಇಮ್ರಾನ್‌ ದಂಪತಿಗೆ ಎರಡೂವರೆ ವರ್ಷದ ಮಗು ಇದೆ. ಹೀಗೆ ಸುಖವಾಗಿದ್ದ ಸಂಚಾರ ಛಿದ್ರವಾಗಿದೆ.

ಆಶಾ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಹಿರಿಯೂರು ಆಸ್ಪತ್ರೆಗೆ ಗಾಬರಿಯಲ್ಲಿ ಕರೆ ತಂದಿದ್ದಾನೆ. ಯಾವಾಗ ಆಕೆ ಪ್ರಾಣ ಬಿಟ್ಟಿದ್ದಾಳೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಇಮ್ರಾನ್ ಅಲ್ಲಿಂದ ಪರಾರಿ ಆಗಿದ್ದಾನೆ ಎಂದು ವರದಿಯಾಗಿದೆ.

ಇದನ್ನೂ ನೋಡಿ: ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಮರು ತನಿಖೆ ಬಗ್ಗೆ ವಿಶೇಷ ತನಿಖಾ ತಂಡದಿಂದ ಹೈವೋಲ್ಟೇಜ್ ಸಭೆ

ಶಾಲೆಗೆ ಹೋಗುವಾಗ ಬಸ್‌ ಚಾಲಕ ಇಮ್ರಾನ್ ಪರಿಚಯ

ಚಿತ್ರದುರ್ಗ ಜಿಲ್ಲೆ ಹೊಸಯಳನಾಡು ಗ್ರಾಮದ ಆಶಾ, ಶಾಲೆಗೆ ಹೋಗುವಾಗ ಬಸ್‌ ಚಾಲಕ ಇಮ್ರಾನ್ ಪರಿಚಯ ಆಗಿತ್ತು. ಅದೇ ಪರಿಚಯ ಪ್ರೀತಿಗೆ ತಿರುಗಿದ್ದು, ಮನೆಯವರ ವಿರೋಧದ ನಡುವೆ ಇಬ್ಬರು ಮದುವೆ ಆಗಿದ್ರು. ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಆಶಾ, ಇಮ್ರಾನ್‌ ದಂಪತಿಗೆ ಎರಡೂವರೆ ವರ್ಷದ ಮಗು ಇದೆ. ಹೀಗೆ ಸುಖವಾಗಿದ್ದ ಸಂಚಾರ ಛಿದ್ರವಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಆಶಾ ಸಾವಿನ ಮನೆ ಸೇರಿದ್ದು, ವರದಕ್ಷಿಣೆಗಾಗಿ ಗಂಡನೇ ಕೊಲೆ ಮಾಡಿದ್ದಾನೆ ಎಂದು ಆಶಾ ಪೋಷಕರು ಆರೋಪಿಸಿದ್ದಾರೆ. ಒಂದೂವರೆ ತಿಂಗಳ ಹಿಂದಷ್ಟೇ 1 ಲಕ್ಷ ಹಣ ಕೊಟ್ಟಿದ್ದೆವು. ಇಷ್ಟಾದ್ರೂ ಸುಮ್ಮನಾಗಿಲ್ಲ. ಈಗ ನೇಣುಬಿಗಿದು, ಆತ್ಮಹತ್ಯೆ‌ ಕತೆ ಕಟ್ಟಿ ಎಸ್ಕೇಪ್ ಆಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಲವ್‌ ಜಿಹಾದ್ ಆರೋಪ

ಇನ್ನು ಹಿಂದೂ ಸಂಘಟನೆಗಳು ಇದೊಂದು ಲವ್‌ ಜಿಹಾದ್ ಅಂತಾ ಆರೋಪಿಸಿದ್ದು, ತನಿಖೆ ನಡೆಸಿ ಎಂದು ಹಿರಿಯೂರು ನಗರ ಠಾಣೆ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ಪೋಷಕರು ಹಾಗೂ ಹಿಂದೂಪರ ಸಂಘಟನೆಗಳ ಆರೋಪ ಮೇರೆಗೆ ಮುದ್ದಾದ ಮಗುವಿನ ತಾಯಿ ಆಗಿದ್ದ ಆಶಾ, ಸಾವನ್ನಪ್ಪಿದ್ದು ಹೇಗೆ ಎನ್ನುವ ಬಗ್ಗೆ ಹಿರಿಯೂರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ ಮುದನೂರ್
ಬಸವರಾಜ ಮುದನೂರ್

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More