ದೀಪಾವಳಿ ಬಳಿಕ 9-12 ತರಗತಿಗಳು ಆರಂಭ.. ಶಿಕ್ಷಣ ಇಲಾಖೆಗೆ ಪೋಷಕರು ನೀಡಿದ ಸಲಹೆ ಏನು?

ಬೆಂಗಳೂರು: ಶಾಲೆಗಳ ಪುನರಾರಂಭದ ಬಗ್ಗೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕಾಲೇಜುಗಳ ಆರಂಭಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್​​​ ಆಗಿದೆ. ಇದೀಗ, ಶಾಲೆಗಳನ್ನು ತೆರೆಯೋದಕ್ಕೆ ಪೋಷಕರು ಸಮ್ಮತಿ ಕೊಟ್ಟಿದ್ದಾರೆ. ಹಾಗೇ, ಒಂದಷ್ಟು ಕಂಡೀಷನ್​ಗಳನ್ನೂ ಹಾಕಿದ್ದಾರೆ. ಶಾಲೆಗಳ ಪುನಾರಂಭಕ್ಕೆ ಶುರುವಾಯ್ತು ಕೌಂಟ್​ಡೌನ್​ ಎಸ್​.. ಅಳೆದು ತೂಗಿದ್ದಾಯ್ತು.. ಲೆಕ್ಕಾಹಾಕಿದ್ದಾಯ್ತು.. ಸಭೆ ಮೇಲೆ ಸಭೆ ನಡೆಸಿ, ವಾರಗಟ್ಟಲೆ ಚರ್ಚೆ ನಡೆಸಿದ್ರು. ಕೊರೊನಾ ನಡುವೆಯೂ ರಾಜ್ಯದಲ್ಲಿ ಶಾಲೆಗಳ ಪುನಾರಂಭದ ಬಗ್ಗೆ ನಡೆದ ಆ ಸರ್ಕಸ್​ ಒಂದು ಹಂತಕ್ಕೆ ಬಂದಿದೆ. ಅದ್ರಲ್ಲೂ, ಒಂಬತ್ತರಿಂದ 12ನೇ ತರಗತಿಗಳು […]

ದೀಪಾವಳಿ ಬಳಿಕ 9-12 ತರಗತಿಗಳು ಆರಂಭ.. ಶಿಕ್ಷಣ ಇಲಾಖೆಗೆ ಪೋಷಕರು ನೀಡಿದ ಸಲಹೆ ಏನು?
ಸಂಗ್ರಹ ಚಿತ್ರ
Updated By: ಸಾಧು ಶ್ರೀನಾಥ್​

Updated on: Nov 12, 2020 | 10:01 AM

ಬೆಂಗಳೂರು: ಶಾಲೆಗಳ ಪುನರಾರಂಭದ ಬಗ್ಗೆ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕಾಲೇಜುಗಳ ಆರಂಭಕ್ಕೆ ಈಗಾಗಲೇ ಮುಹೂರ್ತ ಫಿಕ್ಸ್​​​ ಆಗಿದೆ. ಇದೀಗ, ಶಾಲೆಗಳನ್ನು ತೆರೆಯೋದಕ್ಕೆ ಪೋಷಕರು ಸಮ್ಮತಿ ಕೊಟ್ಟಿದ್ದಾರೆ. ಹಾಗೇ, ಒಂದಷ್ಟು ಕಂಡೀಷನ್​ಗಳನ್ನೂ ಹಾಕಿದ್ದಾರೆ.

ಶಾಲೆಗಳ ಪುನಾರಂಭಕ್ಕೆ ಶುರುವಾಯ್ತು ಕೌಂಟ್​ಡೌನ್​
ಎಸ್​.. ಅಳೆದು ತೂಗಿದ್ದಾಯ್ತು.. ಲೆಕ್ಕಾಹಾಕಿದ್ದಾಯ್ತು.. ಸಭೆ ಮೇಲೆ ಸಭೆ ನಡೆಸಿ, ವಾರಗಟ್ಟಲೆ ಚರ್ಚೆ ನಡೆಸಿದ್ರು. ಕೊರೊನಾ ನಡುವೆಯೂ ರಾಜ್ಯದಲ್ಲಿ ಶಾಲೆಗಳ ಪುನಾರಂಭದ ಬಗ್ಗೆ ನಡೆದ ಆ ಸರ್ಕಸ್​ ಒಂದು ಹಂತಕ್ಕೆ ಬಂದಿದೆ. ಅದ್ರಲ್ಲೂ, ಒಂಬತ್ತರಿಂದ 12ನೇ ತರಗತಿಗಳು ಶೀಘ್ರವೇ ಆರಂಭವಾಗುವ ಸಾಧ್ಯತೆಗಳಿವೆ.

ಶಾಲೆಗಳ ಪುನಾರಂಭ ವಿಷ್ಯವಾಗಿ, ಶಿಕ್ಷಣ ಇಲಾಖೆ ಅಧಿಕಾರಿಗಳು RTE ಸ್ಟುಡೆಂಟ್ಸ್ ಆ್ಯಂಡ್ ಪೆರೆಂಟ್ಸ್ ಅಸೋಸಿಯೇಷನ್ ಹಾಗೂ ಮಾನ್ಯತೆ ಪಡೆದ ಅನುದಾನ‌ ರಹಿತ ಖಾಸಗಿ ಶಾಲೆಗಳ ಸಂಘದ ಜೊತೆ ಸಭೆ ನಡೆಸಿದ್ರು. ಇನ್ನು, ಅಭಿಪ್ರಾಯ ಪರಿಗಣಿಸದೆ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಿರೋದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ಇನ್ನು, 9 ರಿಂದ 12 ನೇ ತರಗತಿಗಳ ಆರಂಭಕ್ಕೆ ತಕರಾರು ಇಲ್ಲ ಅಂದ್ರು. ಆದ್ರೆ ನವೆಂಬರ್​ 17ರಿಂದ ಆರಂಭವಾಗುವ ಕಾಲೇಜುಗಳ ಪರಿಸ್ಥಿತಿ ಅವಲೋಕಿಸಿ ಶಾಲೆಗಳನ್ನು ಆರಂಭಿಸಿ ಅಂದ್ರು.

ಇನ್ನು, ಶಿಕ್ಷಣ ಇಲಾಖೆಗೆ ಪೋಷಕರು ಹಾಗೂ ಖಾಸಗಿ ಶಾಲೆಗಳು ಕೆಲವು ಸಲಹೆ ನೀಡಿವೆ. ಏನವು ಅಂತ ನೋಡೋದಾದ್ರೆ.
ಶಾಲೆಗಳ ಪುನಾರಂಭಕ್ಕೆ ಸಲಹೆ:
ಡಿಸೆಂಬರ್ 15ರ ನಂತರ ಶಾಲೆ ಕಾಲೇಜು ಆರಂಭಿಸಬಹುದು ಅನ್ನೋ ಸಲಹೆ ನೀಡಲಾಗಿದೆ. ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿಗಳ ಆರಂಭಿಸಬೇಕು.. 15 ದಿನದ ನಂತರ 9 ಮತ್ತು 11ನೇ ತರಗತಿಗಳನ್ನ ನಡೆಸಬೇಕು. ಇನ್ನು, 10 ಮತ್ತು 12ನೇ ತರಗತಿಗಳನ್ನು ಬೆಳಗ್ಗೆ 7 ರಿಂದ 12 ಗಂಟೆವರೆಗೆ ನಡೆಸಿದ್ರೆ, 9 ಮತ್ತು 11ನೇ ತರಗತಿಗಳನ್ನು 1 ರಿಂದ ಸಂಜೆ 5 ಘಂಟೆಯ ವರೆಗೆ ನಡೆಸಬೇಕು. ಒಂದು ತರಗತಿಯಲ್ಲಿ ಕೇವಲ 10 ವಿದ್ಯಾರ್ಥಿಗಳು ಮಾತ್ರ ಇರಬೇಕು ಅನ್ನೋ ಸಲಹೆ ನೀಡಲಾಗಿದೆ.

ಹಾಗೆ, ಶಾಲೆಗಳಲ್ಲಿ ಪ್ರಾರ್ಥನೆ ಸೇರಿದಂತೆ ಯಾವುದೇ ಪಠ್ಯೇತರ ಚಟುವಟಿಕೆಗಳನ್ನು ನಡೆಸಬಾರದು. ತರಗತಿ ಪ್ರಾರಂಭದ ಹೆಸರಿನಲ್ಲಿ ಯಾವುದೇ ಹೆಚ್ಚುವರಿ ಶುಲ್ಕವನ್ನೂ ವಸೂಲಿ ಮಾಡಬಾರದು. ವಿದ್ಯಾರ್ಥಿಗಳಲ್ಲಿ ಸೋಂಕು ಕಂಡುಬಂದಲ್ಲಿ ಶಾಲಾಡಳಿತ ಹಾಗೂ ಸರ್ಕಾರ ಚಿಕಿತ್ಸಾ ಖರ್ಚು-ವೆಚ್ಚ ಭರಿಸಬೇಕು. ಇನ್ನು, ಪ್ರತಿಯೊಬ್ಬ ವಿದ್ಯಾರ್ಥಿಗೂ ಆರೋಗ್ಯ ವಿಮೆ, ಶಿಕ್ಷಕರು, ಎಲ್ಲಾ ಸಿಬ್ಬಂದಿಗಳಿಗೆ 15 ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡ್ಬೇಕು ಅನ್ನೋ ಸಲಹೆ ನೀಡಲಾಗಿದೆ.

ಒಟ್ನಲ್ಲಿ ಶಾಲೆಗಳ ಪುನಾರಂಭಕ್ಕೆ ಹತ್ತಾರು ಕಂಡೀಷನ್​​ಗಳನ್ನು ಪೋಷಕರು ನೀಡಿದ್ದಾರೆ. ಹಾಗೆ, ತರಗತಿ ಆರಂಭಕ್ಕೆ ಒಪ್ಪಿಗೆ ಕೊಟ್ಟಿದ್ದಾರೆ. ಹೀಗಾಗಿ, ದೀಪಾವಳಿ ಹಬ್ಬ ಮುಗಿದ 15 ದಿನದ ಬಳಿಕ ಶಾಲೆಗಳು ಪುನಾರಂಭವಾಗುವ ಸಾಧ್ಯತೆಗಳಿವೆ.

Published On - 7:19 am, Thu, 12 November 20