4/4 ಜಯ: ಕರ್ನಾಟಕ ವಿಧಾನ ಪರಿಷತ್ ಬಲ ಹೆಚ್ಚಿಸಿಕೊಂಡ ಬಿಜೆಪಿ
ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳನ್ನು ಕಮಲ ಪಡೆ ತನ್ನದಾಗಿಸಿಕೊಂಡಿದೆ. ಈಶಾನ್ಯ ಶಿಕ್ಷಕ ಕ್ಷೇತ್ರದಲ್ಲಿ ಶೇ.73.22 ರಷ್ಟು ಮತದಾನವಾಗಿದ್ದು, ಎಂಎಲ್ಸಿ ಕಾಂಗ್ರೆಸ್ ಶರಣಪ್ಪ ಮಟ್ಟೂರನ್ನು ಬಿಜೆಪಿಯ ಶಶಿಲ್ ಜಿ ನಮೋಶಿ ಅವರು 3,130 ಮತಗಳಿಂದ ಸೋಲಿಸಿದರು. ಮಟ್ಟೂರ್ 7,082 ಮತಗಳನ್ನು ಪಡೆದರೆ, ನಮೋಶಿ 10,212 ಮತಗಳನ್ನು ಪಡೆದು ಜಯ ಗಳಿಸಿದರು. ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಶೇ. 70.11 ರಷ್ಟು ಮತದಾನವಾಗಿದ್ದು, ಬಿಜೆಪಿ ಪಕ್ಷದ ಎಸ್.ವಿ.ಸಂಕನೂರ್ ಅವರು ಕಾಂಗ್ರೆಸ್ನ ಆರ್.ಎ.ಕುಬೇರಪ್ಪ ಅವರನ್ನು […]

ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯಲ್ಲಿ ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳನ್ನು ಕಮಲ ಪಡೆ ತನ್ನದಾಗಿಸಿಕೊಂಡಿದೆ. ಈಶಾನ್ಯ ಶಿಕ್ಷಕ ಕ್ಷೇತ್ರದಲ್ಲಿ ಶೇ.73.22 ರಷ್ಟು ಮತದಾನವಾಗಿದ್ದು, ಎಂಎಲ್ಸಿ ಕಾಂಗ್ರೆಸ್ ಶರಣಪ್ಪ ಮಟ್ಟೂರನ್ನು ಬಿಜೆಪಿಯ ಶಶಿಲ್ ಜಿ ನಮೋಶಿ ಅವರು 3,130 ಮತಗಳಿಂದ ಸೋಲಿಸಿದರು. ಮಟ್ಟೂರ್ 7,082 ಮತಗಳನ್ನು ಪಡೆದರೆ, ನಮೋಶಿ 10,212 ಮತಗಳನ್ನು ಪಡೆದು ಜಯ ಗಳಿಸಿದರು.
ಪಶ್ಚಿಮ ಪದವೀಧರರ ಕ್ಷೇತ್ರದಲ್ಲಿ ಶೇ. 70.11 ರಷ್ಟು ಮತದಾನವಾಗಿದ್ದು, ಬಿಜೆಪಿ ಪಕ್ಷದ ಎಸ್.ವಿ.ಸಂಕನೂರ್ ಅವರು ಕಾಂಗ್ರೆಸ್ನ ಆರ್.ಎ.ಕುಬೇರಪ್ಪ ಅವರನ್ನು 11,409 ಮತಗಳ ಅಂತರದಿಂದ ಸೋಲಿಸಿ ಜಯ ಗಳಿಸಿದರು. ಸಂಕನೂರ್ ಅವರಿಗೆ 23,857 ಮತಗಳು ಬಂದರೆ, ಕುಬೇರಪ್ಪ ಅವರಿಗೆ 12,448 ಮತಗಳು ಸಂದಿವೆ.
ಬೆಂಗಳೂರು ಶಿಕ್ಷಕ ಕ್ಷೇತ್ರದಲ್ಲಿ ಶೇ.66 ರಷ್ಟು ಮತದಾನವಾಗಿದ್ದು, ಬಿಜೆಪಿಯ ಪುಟ್ಟಣ್ಣ 7,335 ಮತಗಳನ್ನು ಪಡೆದು ಜಯಶಾಲಿಯಾದರೆ, ಜೆಡಿಎಸ್ನ ಎ.ಪಿ. ರಂಗನಾಥ್ 5,107 ಮತ ಪಡೆದು 2,228 ಮತಗಳಿಂದ ಸೋತರು.
ಆಗ್ನೇಯ ಪದವೀಧರ ಕ್ಷೇತ್ರದ ಶೇ.75 ರಷ್ಟು ಮತದಾನವಾಗಿದ್ದು, ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಚಿದಾನಂದ ಗೌಡ 24, 217 ಮತಗಳಿಂದ ಪ್ರತಿಸ್ಪರ್ಧಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರನ್ನು ಸೋಲಿಸಿ, ಜಯಗಳಿಸಿದ್ದಾರೆ.
ಹಿಂದಿನ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪ ಹಿನ್ನೆಡೆಯಾಗಿತ್ತು. ಈ ಚುನಾವಣೆಯಲ್ಲಿ ಬಿಜೆಪಿ ಎಲ್ಲಾ ಸ್ಥಾನ ಗೆಲ್ಲುವುದರ ಮೂಲಕ, ಮೇಲ್ಮನೆಯಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ. ನಾಲ್ಕಕ್ಕೆ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಗಳಿಸಿದ್ದರಿಂದ, 75 ಸದಸ್ಯ ಬಲದ ಮೇಲ್ಮನೆಯಲ್ಲಿ ಬಿಜೆಪಿಯ ಸ್ಥಾನ 31ಕ್ಕೆ ಏರಿದೆ. ಆದರೂ ಬಿಜೆಪಿಗೆ ಬಹುಮತ ಪಡೆಯಲು 38 ಸ್ಥಾನಗಳ ಅಗತ್ಯವಿದೆ. ಬಿಜೆಪಿ ಸದ್ಯ 31 ಸ್ಥಾನಗಳನ್ನು ಹೊಂದಿದೆ.
ಕಾಂಗ್ರೆಸ್ ಪಕ್ಷ 29 ಸ್ಥಾನಗಳನ್ನು, ಜೆಡಿಎಸ್ 14 ಸ್ಥಾನಗಳನ್ನು ಹೊಂದಿದೆ ಮತ್ತು ಒಂದು ಸ್ವತಂತ್ರ ಸ್ಥಾನವಿದೆ. ಪರಿಷತ್ತಿನ ಒಟ್ಟೂ ಸದಸ್ಯರಲ್ಲಿ ಮೂರನೇಯ ಒಂದರಷ್ಟು ಸದಸ್ಯರನ್ನು ವಿಧಾನ ಪರಿಷತ್ ಸದಸ್ಯರು (ಶಾಸಕರು) ಆಯ್ಕೆ ಮಾಡುತ್ತಾರೆ. ಇನ್ನು ಮೂರನೆಯ ಒಂದರಷ್ಟು ಸದಸ್ಯರನ್ನು ಸ್ಥಳೀಯ ಸಂಸ್ಥೆಯ ಸದಸ್ಯರು ಆಯ್ಕೆ ಮಾಡುತ್ತಾರೆ.
ತಲಾ 12ನೇಯ ಒಂದರಷ್ಟು ಸದಸ್ಯರು ಶಿಕ್ಷಕರ ಕ್ಷೇತ್ರದಿಂದ ಮತ್ತು ಪದವೀಧರರ ಕ್ಷೇತ್ರದಿಂದ ಆಯ್ಕೆಯಾಗಿ ಬರುತ್ತಾರೆ. ಉಳಿದ ಸ್ಥಾನಗಳಿಗೆ ಕಲೆ, ಸಾಹಿತ್ಯ, ಸಹಕಾರ ಕ್ಷೇತ್ರ, ಸಮಾಜ ಸೇವೆ, ವಿಜ್ಞಾನ ಮುಂತಾದ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದವರನ್ನು ಸರ್ಕಾರವೇ ಆಯ್ಕೆ ಮಾಡಿ ನಾಮ ನಿರ್ದೇಶನ ನೀಡುತ್ತದೆ. 64 ಜನರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಿ 11ಜನರನ್ನ ನಾಮ ನಿರ್ದೇಶನ ಮಾಡಲಾಗುತ್ತದೆ.




