ಸಿಎಂ ಸಚಿವಾಲಯದಲ್ಲಿ ಮೇಜರ್​ ಸರ್ಜರಿ: 16 ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆ

ಮುಖ್ಯಮಂತ್ರಿಗಳ ಸಚಿವಾಲಯದಲ್ಲಿನ ಅಕ್ರಮಗಳ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ, 16 ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಒಂಭತ್ತು ಜನ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಮತ್ತು ಏಳು ಜನ ಸಿಎಂ ಪರಿಹಾರ ನಿಧಿ ವಿಭಾಗದಿಂದ ಇದ್ದಾರೆ. ಈ ಹಿಂದೆಯೂ 33 ಸಿಬ್ಬಂದಿಯನ್ನು ವಜಾ ಮಾಡಲಾಗಿತ್ತು. ಈ ಬದಲಾವಣೆಗಳು ಸಚಿವಾಲಯದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಸುಧಾರಿಸುವ ಗುರಿ ಹೊಂದಿವೆ.

ಸಿಎಂ ಸಚಿವಾಲಯದಲ್ಲಿ ಮೇಜರ್​ ಸರ್ಜರಿ: 16 ಸಿಬ್ಬಂದಿ ಕರ್ತವ್ಯದಿಂದ ಬಿಡುಗಡೆ
ವಿಧಾನಸೌಧ
Edited By:

Updated on: May 05, 2025 | 4:37 PM

ಬೆಂಗಳೂರು, ಮೇ 05: ಮುಖ್ಯಮಂತ್ರಿಗಳ ಸಚಿವಾಲಯದ (Chief Minister’s Secretariat) ಸಿಬ್ಬಂದಿ ವಿರುದ್ಧ ಅನೇಕ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ, ಮೇಜರ್ ಸರ್ಜರಿ ಮಾಡಲಾಗಿದೆ. ಸಿಎಂ (CM Siddaramaiah) ಸಚಿವಾಲಯದ 16 ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. 16 ಜನ ಸಿಬ್ಬಂದಿಗೆ ಮೂಲ ಇಲಾಖೆಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಒಂಬತ್ತು ಸಿಬ್ಬಂದಿ ಮತ್ತು ಸಿಎಂ ಪರಿಹಾರ ನಿಧಿ ವಿಭಾಗದ ಏಳು ಸಿಬ್ಬಂದಿಯನ್ನು ವರ್ಗಾವಣೆಗೊಳಿಸಿ ಸಿಎಂ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆಯೂ 33 ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿತ್ತು.

ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಅನ್ಯಸೇವೆಯ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಮಧು ಎನ್​, ನಯನ ಕುಮಾರಿ ಬಿ.ಎಲ್​, ನವೀನ್​ ಕುಮಾರ್​, ಬಿ. ಎನ್, ಗೀತಾ ಎನ್​, ಸವಿತಾ ಟಿ.ಡಿ, ಪರಮೇಶ್​ ಹೆಚ್್​ ಮತ್ತು ಗಂಗಾಧರ ಎನ್​. ಆರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯನ ಕೊಂದ್ರೆ ಹಿಂದೂಗಳಿಗೆ ನೆಮ್ಮದಿ: ಪೋಸ್ಟ್ ಹಾಕಿದ್ದ ಹೋಂ ಗಾರ್ಡ್​ ಅರೆಸ್ಟ್

ಇದನ್ನೂ ಓದಿ
ಕರ್ನಾಟಕ ಒಳಮೀಸಲಾತಿ ಗಣತಿ ಇಂದಿನಿಂದ ಶುರು: ಸಿಎಂ ಸಿದ್ದರಾಮಯ್ಯ ಮಾಹಿತಿ
ಸ್ಪೀಕರ್ ಯು.ಟಿ. ಖಾದರ್ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯಗೂ ಜೀವ ಬೆದರಿಕೆ..!
ಸುಹಾಸ್ ಶೆಟ್ಟಿ ಹತ್ಯೆ: ಡಿಜಿಯಿಂದ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ
ಬೆಳಗಾವಿ: ಭಾಷಣ ವೇಳೆ ಸಿದ್ದರಾಮಯ್ಯಗೆ ಕಪ್ಪು ಬಟ್ಟೆ ಪ್ರದರ್ಶನ

ಮುಖ್ಯಮಂತ್ರಿಗಳ ಚಿವಾಲಯದಲ್ಲಿ ಗುತ್ತಿಗೆ ಅಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಶೈಲಜಾ ಟಿ.ಎಸ್, ಶ್ರೀಶೈಲ ಸಿ. ಲಟ್ಟೆ, ರಾಮಯ್ಯ ಎನ್​, ನವೀನ್​ ಕುಮಾರ್ ಎಂ.ಆರ್​, ಅನ್ನಪೂರ್ಣ ಎಂಡಿ, ರಮ್ಯ ಜಿ, ಉಷಾ ಜಿ.ಆರ್, ಕುಮಾರಿ ಖುರ್ಷಿದ್​ ಮತ್ತು ರಿಯಾಜ್​ ಎಸ್​ ಅವರ ಗುತ್ತಿಗೆ ಆದೇಶವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ  ರದ್ದುಗೊಳಿಸಲಾಗಿದೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:36 pm, Mon, 5 May 25

Follow Us