ಲಕ್ಷಾಂತರ ಹಣ ಬೇಡಿಕೆ ದೂರು: ಬಿಬಿಎಂಪಿ ಟೌನ್ ಪ್ಲಾನಿಂಗ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ನಕ್ಷೆ ಮಂಜೂರಾತಿ ವೇಳೆ ಲಕ್ಷಾಂತರ ರೂ. ಹಣ ಬೇಡಿಕೆ ಬಗ್ಗೆ ದೂರು ಹಿನ್ನೆಲೆ ಬಿಬಿಎಂಪಿ ಪೂರ್ವ ವಲಯದ ಟೌನ್ ಪ್ಲಾನಿಂಗ್ ಕಚೇರಿ ಮೇಲೆ ಸುಮಾರು 10ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಿ, ಪರಿಶೀಲನೆ ಮಾಡಿದ್ದಾರೆ. 40 ಸಾವಿರ ರೂ. ಲಂಚ ಸ್ವೀಕರಿಸುವಾಗ ಸರ್ವೆ ಅಧಿಕಾರಿ, ಆರ್​​ಐ ಲೋಕಾ ಬಲೆಗೆ ಬಿದ್ದಿರುವಂತಹ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಲಕ್ಷಾಂತರ ಹಣ ಬೇಡಿಕೆ ದೂರು: ಬಿಬಿಎಂಪಿ ಟೌನ್ ಪ್ಲಾನಿಂಗ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ
ಲಕ್ಷಾಂತರ ಹಣ ಬೇಡಿಕೆ ದೂರು: ಬಿಬಿಎಂಪಿ ಟೌನ್ ಪ್ಲಾನಿಂಗ್ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 06, 2024 | 7:52 PM

ಬೆಂಗಳೂರು, ಜುಲೈ 06: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಪೂರ್ವ ವಲಯದ ಟೌನ್ ಪ್ಲಾನಿಂಗ್ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ಮಾಡಿದ್ದಾರೆ. ಮೆಯೋ ಹಾಲ್ ಕಟ್ಟಡದ  23ನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಪರಿಶೀಲನೆ ಮಾಡಲಾಗಿತ್ತಿದೆ. ಹಲವು ದೂರುಗಳು ಬಂದ ಹಿನ್ನೆಲೆ ಸುಮಾರು 10ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನಕ್ಷೆ ಮಂಜೂರಾತಿ ವೇಳೆ ಲಕ್ಷಾಂತರ ಹಣ ಬೇಡಿಕೆ ಬಗ್ಗೆ ದೂರು ಬಂದಿವೆ.

40 ಸಾವಿರ ರೂ. ಹಣಕ್ಕೆ ಬೇಡಿಕೆ: ಲೋಕಾ ಬಲೆಗೆ ಬಿದ್ದ ಸರ್ವೆ ಅಧಿಕಾರಿ, ಆರ್​​ಐ

40 ಸಾವಿರ ರೂ. ಲಂಚ ಸ್ವೀಕರಿಸುವಾಗ ಸರ್ವೆ ಅಧಿಕಾರಿ, ಆರ್​​ಐ ಲೋಕಾ ಬಲೆಗೆ ಬಿದ್ದಿರುವಂತಹ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕಚೇರಿಯಲ್ಲಿ ನಡೆದಿದೆ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ತಾಲೂಕು ಸರ್ವೆ ಅಧಿಕಾರಿ ಅಶ್ವಿನಿ, ಕಂದಾಯ ನಿರೀಕ್ಷಕ ಮಂಜುನಾಥ್ ವಶಕ್ಕೆ ಪಡೆದ ಅಧಿಕಾರಿಗಳು.

ಇದನ್ನೂ ಓದಿ: ಪಾರ್ಕಿಂಗ್, ಎಂಟ್ರಿ ಟಿಕೆಟ್​​ನಲ್ಲಿ ಅವ್ಯವಹಾರ: ಮೈಸೂರು ಅರಮನೆ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಭೂಪರಿವರ್ತನೆ ಮಾಡಲು ಆರ್​​​​ಐ ಮೂಲಕ 40 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಿಂದೆ 10 ಸಾವಿರ ಹಣ ಪಡೆದಿದ್ದ ಸರ್ವೆ ಅಧಿಕಾರಿ, ಆರ್​​ಐ ಇಂದು ಉಳಿದ 30 ಸಾವಿರ ರೂ. ಹಣ ಪಡೆಯುವ ವೇಳೆ ಲೋಕಾಯುಕ್ತ ದಾಳಿ ಮಾಡಿದೆ. ಹೊಸಕೋಟೆ ಮೂಲದ ಮಹೇಶ್ ಎಂಬುವರ ದೂರಿನ ಮೇರೆಗೆ ಲೋಕಾಯುಕ್ತ ಎಸ್​​ಪಿ ಉಮೇಶ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.

ಬಳ್ಳಾರಿ ಪಾಲಿಕೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ

ಲೇಔಟ್ ನಿರ್ಮಾಣಕ್ಕೆ ಪರ್ಮಿಷನ್ ಕೊಡಲು 14 ಲಕ್ಷ ರೂ. ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದ ಬಳ್ಳಾರಿ ಪಾಲಿಕೆ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ ಮಾಡಿದೆ. ಪಾಲಿಕೆ ಇಂಜಿನಿಯರ್ ಮಹಾದೇವ, ಜೆಇ ವಿರುಪಾಕ್ಷ ಹಾಗೂ ಕೇಸ್ ವರ್ಕರ್​ರಿಂದ ಹಣಕ್ಕೆ ಬೇಡಿಕೆ ಇಟ್ಟಿದರು.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಶಾಕ್; ರಾಜ್ಯದ ಹಲವೆಡೆ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಪ್ರಕಾಶ್ ರಾವ್ ಎನ್ನುವರಿಂದ ಅಧಿಕಾರಿಗಳ ವಿರುದ್ದ ದೂರು ನೀಡಲಾಗಿದ್ದು, ನಾಲ್ಕು ಎಕ್ಕರೆ ಜಮೀನಿಗೆ ಪರ್ಮಿಷನ್ ನೀಡಲು 14 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ ಎಂದು ದೂರು ನೀಡಿದ್ದರು. ದೂರಿನ ಜೊತೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದ ಆಡಿಯೋ ಕೊಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.