ರಾಜ್ಯದ 8 ಜಿಲ್ಲೆಗಳಿಗಿಲ್ಲ ಅನ್​ಲಾಕ್ ಭಾಗ್ಯ.. ಒಂದು ವಾರ ಲಾಕ್​ಡೌನ್ ಕಂಟಿನ್ಯೂ

ರಾಜ್ಯದ 8 ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೊರೊನಾ ಇಳಿಕೆಯಾಗುತ್ತಿಲ್ಲ. ಹೀಗಾಗಿ ಆ 8 ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್ ಮುಂದುವರೆಸಲು ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ.

ರಾಜ್ಯದ 8 ಜಿಲ್ಲೆಗಳಿಗಿಲ್ಲ ಅನ್​ಲಾಕ್ ಭಾಗ್ಯ.. ಒಂದು ವಾರ ಲಾಕ್​ಡೌನ್ ಕಂಟಿನ್ಯೂ
ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ

ಹಾಸನ: ರಾಜ್ಯದ 8 ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೊರೊನಾ ಇಳಿಕೆಯಾಗುತ್ತಿಲ್ಲ. ಹೀಗಾಗಿ ಆ 8 ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್ ಮುಂದುವರೆಸಲು ಸಿಎಂ ಬಿಎಸ್ ಯಡಿಯೂರಪ್ಪ ಸೂಚಿಸಿದ್ದಾರೆ. ರಾಜ್ಯದಲ್ಲಿ ಜೂನ್ 14ರ ಬಳಿಕ ಅನ್ಲಾಕ್ ಆದರೂ ಆ 8 ಜಿಲ್ಲೆಗಳಲ್ಲಿ ಲಾಕ್ಡೌನ್ ಇರಲಿದೆ. ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ, ಮಂಡ್ಯ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು ಡಿಸಿಗಳ ಜೊತೆ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ 8 ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದು ಜಿಲ್ಲಾಡಳಿತಗಳ ಡಿಸಿಗಳ ಜೊತೆ ನಡೆಸಿದ ಸಭೆಯಲ್ಲಿ ಸಿಎಂ ಬಿಎಸ್‌ವೈ ಕಳವಳಗೊಂಡಿದ್ದಾರೆ. ರಾಜ್ಯದ 8 ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕೊರೊನಾ ಇಳಿಕೆಯಾಗುತ್ತಿಲ್ಲ. ಹೀಗಾಗಿ ಆ 8 ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್ ಮುಂದುವರೆಸಲು ಸೂಚಿಸಿದ್ದಾರೆ. ಆ ಜಿಲ್ಲೆಗಳಲ್ಲಿ ಜನರು ಕೊವಿಡ್ ನಿಯಮ ಉಲ್ಲಂಘಿಸದಂತೆ ಕ್ರಮಕೈಗೊಳ್ಳಿ. ಈ ಹಿಂದೆ 8 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಸಲು ಹೇಳಿದ್ದೀರಿ. ಅದರಂತೆ ಸೋಂಕು ಕಡಿಮೆಯಾಗದ ಕಾರಣ ಒಂದು ವಾರ ಲಾಕ್​ಡೌನ್ ಮುಂದುವರಿಸೋಣ ಆದ್ರೆ ಲಾಕ್‌ಡೌನ್ ಜತೆಗೆ ಏನು ವಿನಾಯಿತಿ ನೀಡಬೇಕಾಗಿದೆ. ಈ ಬಗ್ಗೆ ನೀವೇ ಚರ್ಚೆ ಮಾಡಿ ತಿಳಿಸಿ ಎಂದು ಸಿಎಂ ಬಿಎಸ್ವೈ ಆದೇಶಿಸಿದ್ದಾರೆ.

ಡಿಸಿ, ಉಸ್ತುವಾರಿ ಸಚಿವರಿಗೆ ಜವಾಬ್ದಾರಿ ನೀಡಿದ ಸಿಎಂ
ನೀವು ಹೇಳಿದಂತೆ ಲಾಕ್‌ಡೌನ್ ವಿಸ್ತರಣೆ ಮಾಡೋಣ. ಆದರೆ ಹೇಗೆ ಮಾಡಬೇಕೆಂದು ಚರ್ಚೆ ಮಾಡಿ. ಎಲ್ಲವನ್ನೂ ನಾವು ಇಲ್ಲಿಂದ ಕುಳಿತು ಹೇಳಲು ಆಗಲ್ಲ. ಜಿಲ್ಲೆಗಳಲ್ಲಿಯೇ ನೀವು ಚರ್ಚೆ ಮಾಡಿ ಮಾಹಿತಿ ತಿಳಿಸಿ. ಪಾಸಿಟಿವಿಟಿ ಕಡಿಮೆ ಮಾಡಲು ಕ್ರಮವಹಿಸಿ ಎಂದು ಡಿಸಿ, ಉಸ್ತುವಾರಿ ಸಚಿವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಜವಾಬ್ದಾರಿ ನೀಡಿದ್ದಾರೆ. ರಾಜ್ಯದಲ್ಲಿ ಸೋಂಕಿತರ ತೀವ್ರತೆ ಕಡಿಮೆಯಾಗುತ್ತಿದೆ. ಆದರೆ ಈ ಎಂಟು ಜಿಲ್ಲೆಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆ ಆಗುತ್ತಿಲ್ಲ. ಮೈಸೂರು ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚುಇ ಇರುವುದು ಕಳವಳಕ್ಕೆ ಕಾರಿಣವಾಗಿದೆ.

ಇದನ್ನೂ ಓದಿ: ನಿಖಿಲ್ ಶೂಟಿಂಗ್ ಸಾಮಾನ್ ಇದೆ ಅಂದ್ರೆ ನನಗೆ ಕೇಳ್ಬೇಕಿತ್ತು, ಮನೆ ಬಾಗಿಲು ಮುರಿಯೋದಾ ಕುಮಾರಸ್ವಾಮಿ: ಜಮೀರ್ ಅಹಮದ್​ ಪ್ರಶ್ನೆ