ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ಘೋಷಣೆ ಹಿನ್ನೆಲೆ; 2 ತಿಂಗಳ ಹಿಂದೆ ತೀರಿಕೊಂಡ ಮಹಿಳೆಗೆ ಈಗ ಕೊವಿಡ್ ಪಾಸಿಟಿವ್ ವರದಿ ತಯಾರಿ

ಡಾಟಾ ಎಂಟ್ರಿ ಆಪರೇಟರ್​ ಯೂಸರ್ ಐಡಿ ದುರುಪಯೋಗ ಮಾಡಿರುವುದು, ಪಾಸ್​ ವರ್ಡ್​ ದುರ್ಬಳಕೆ ಮಾಡಿಕೊಂಡು ಕೊವಿಡ್​ ವರದಿ ನೀಡಿ, ಸರ್ಕಾರಕ್ಕೆ ವಂಚಿಸಿದ ಆರೋಪದಡಿ ಆರೋಪಿಗಳಿಬ್ಬರ ಸೆರೆಯಾಗಿದೆ. ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಪ್ರಕಾಶ್ ಬಿರಾದರ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೊರೊನಾದಿಂದ ಮೃತಪಟ್ಟವರಿಗೆ ಪರಿಹಾರ ಘೋಷಣೆ ಹಿನ್ನೆಲೆ; 2 ತಿಂಗಳ ಹಿಂದೆ ತೀರಿಕೊಂಡ ಮಹಿಳೆಗೆ ಈಗ ಕೊವಿಡ್ ಪಾಸಿಟಿವ್ ವರದಿ ತಯಾರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 17, 2021 | 2:59 PM

ಬಾಗಲಕೋಟೆ: ಕೊವಿಡ್​ನಿಂದ ಮೃತರಿಗೆ ಸರ್ಕಾರ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಕೆಲವು ಅವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಕಲಿ ಆರ್​ಟಿಪಿಸಿಆರ್ ವರದಿ ಪ್ರಕರಣ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎರಡು ತಿಂಗಳು ಹಿಂದೆ ತೀರಿಕೊಂಡಿದ್ದ ಮಹಿಳೆಗೆ ಇದೀಗ ಆರ್​ಟಿಪಿಸಿಆರ್ ಪಾಸಿಟಿವ್ ರಿಪೋರ್ಟ್ ತಯಾರಿ ಮಾಡಿರುವುದು ಕಂಡುಬಂದಿದೆ.

ಕೊವಿಡ್​ನಿಂದ ಮೃತಪಟ್ಟವರಿಗೆ ಕರ್ನಾಟಕ ಸರ್ಕಾರ ಪರಿಹಾರ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಬಾಗಲಕೋಟೆಯಲ್ಲಿ ನಕಲಿ RTPCR ವರದಿ ಮಾಡಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. 2 ತಿಂಗಳ ಹಿಂದೆ ಮೃತಪಟ್ಟ ಮಹಿಳೆಗೆ ಇದೀಗ ಪಾಟಿಟಿವ್ ರಿಪೋರ್ಟ್​ ನೀಡಲಾಗಿದೆ. ಬಾಗಲಕೋಟೆ ಜಿಲ್ಲಾಸ್ಪತ್ರೆ ಸಿಬ್ಬಂದಿಯಿಂದ ಗೋಲ್​ಮಾಲ್ ನಡೆದಿರುವ ಬಗ್ಗೆ ಮಾಹಿತಿ ದೊರಕಿದೆ.

ಪ್ರಕರಣಕ್ಕೆ ಸಂಬಂಧಿಸಿ ಸ್ಕ್ಯಾನಿಂಗ್ ವಿಭಾಗದ ಸ್ಟಾಫ್​ನರ್ಸ್​ ಬಸವರಾಜ್​ ಬಿಲಕೇರಿ, ಡಾಟಾ ಎಂಟ್ರಿ ಆಪರೇಟರ್​ ಬಸನಗೌಡ ಗಿರಿಯಪ್ಪಗೌಡ ಸೆರೆಯಾಗಿದ್ದಾರೆ. ಬಾಗಲಕೋಟೆಯ ನವನಗರ ಠಾಣೆ ಪೊಲೀಸರಿಂದ ಆರೋಪಿಗಳ ಬಂಧನವಾಗಿದೆ.

ಮೇ 2ರಂದು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಬಿದರಿ ಗ್ರಾಮದ ಶೇಖವ್ವ ರೂಗಿ (53) ಎಂಬವರು ಮೃತಪಟ್ಟಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಉಸಿರಾಟದ ಸಮಸ್ಯೆಯಿಂದ ಅವರು ಮೃತಪಟ್ಟಿದ್ದರು. ಸಿಟಿ ಸ್ಕ್ಯಾನ್​ನಲ್ಲಿ ಕೊವಿಡ್​ ಇದ್ದರೂ ಟೆಸ್ಟ್​ ಮಾಡಿಸಿರಲಿಲ್ಲ. ಶೇಖವ್ವ ರೂಗಿಗೆ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಿರಲಿಲ್ಲ. ಆದರೆ, ಈಗ ಸರ್ಕಾರ ಪರಿಹಾರ ಘೋಷಣೆ ಮಾಡಿದ ನಂತರ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ.

ಮೇ 1ರಂದು ಗಂಟಲು ದ್ರವ ಸಂಗ್ರಹಿಸಲಾಗಿತ್ತೆಂದು ದಾಖಲು ಮಾಡಿ, ಬಾಗಲಕೋಟೆ ಜಿಲ್ಲಾಸ್ಪತ್ರೆ ಸಿಬ್ಬಂದಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ಆದರೆ ಜುಲೈ 15ರಂದು ಪಾಸಿಟಿವ್ ಬಂದಿದೆ ಎಂದು ನಮೂದು ಮಾಡಲಾಗಿದೆ. 2 ತಿಂಗಳು ತಡವಾಗಿದ್ದರಿಂದ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಬಳಿಕ, ಅಧಿಕಾರಿಗಳು ತಪಾಸಣೆ ನಡೆಸಿದಾಗ ಗೋಲ್​ಮಾಲ್​ ಬೆಳಕಿಗೆ ಬಂದಿದೆ.

ಡಾಟಾ ಎಂಟ್ರಿ ಆಪರೇಟರ್​ ಯೂಸರ್ ಐಡಿ ದುರುಪಯೋಗ ಮಾಡಿರುವುದು, ಪಾಸ್​ ವರ್ಡ್​ ದುರ್ಬಳಕೆ ಮಾಡಿಕೊಂಡು ಕೊವಿಡ್​ ವರದಿ ನೀಡಿ, ಸರ್ಕಾರಕ್ಕೆ ವಂಚಿಸಿದ ಆರೋಪದಡಿ ಆರೋಪಿಗಳಿಬ್ಬರ ಸೆರೆಯಾಗಿದೆ. ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಪ್ರಕಾಶ್ ಬಿರಾದರ್​ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Delta Variant: ಕೊರೊನಾ ಲಸಿಕೆ ಪಡೆದ ನಂತರವೂ ಹಬ್ಬಿದ ಸೋಂಕಿನಲ್ಲಿ ಶೇ.86.09 ಪಾಲು ಡೆಲ್ಟಾ ತಳಿಯದ್ದು – ಐಸಿಎಂಆರ್

ಕೊರೊನಾ ಆತಂಕದ ಮಧ್ಯೆ ಕಾಣಿಸಿಕೊಂಡ ಮಂಕಿಪಾಕ್ಸ್​​; ಕಳೆದ 20 ದಶಕಗಳಲ್ಲಿ ಪತ್ತೆಯಾದ ಮೊದಲ ಪ್ರಕರಣ