ಕತ್ತೆ ಹಾಲಿನ ಫಾರ್ಮ್ ತೆರೆಯಲು ದುಬಾರಿ ಕೆಲಸ ತೊರೆದ ವ್ಯಕ್ತಿ: ಇಲ್ಲಿದೆ ಕುತೂಹಲಕರ ಕಥೆ

ಹಾಲು ಪ್ಯಾಕೆಟ್‌ಗಳಲ್ಲಿ ಲಭ್ಯವಿದ್ದು, 30 ಮಿಲಿ ಹಾಲಿನ ಪ್ಯಾಕೆಟ್‌ನ ಬೆಲೆ 150 ರೂ. ಎಂದು ಮನಿಕಂಟ್ರೋಲ್ ವರದಿ ತಿಳಿಸಿದೆ. ಮಾಲ್​ಗಳು, ಅಂಗಡಿಗಳು ಮತ್ತು ಸೂಪರ್​​​ ಮಾರ್ಕೆಟ್​ಗಳಲ್ಲಿ ಕತ್ತೆ ಹಾಲು ಸಿಗಲಿದೆ.

ಕತ್ತೆ ಹಾಲಿನ ಫಾರ್ಮ್ ತೆರೆಯಲು ದುಬಾರಿ ಕೆಲಸ ತೊರೆದ ವ್ಯಕ್ತಿ: ಇಲ್ಲಿದೆ ಕುತೂಹಲಕರ ಕಥೆ
ಕತ್ತೆ ಹಾಲಿನ ಫಾರ್ಮ್
Updated By: ಗಂಗಾಧರ​ ಬ. ಸಾಬೋಜಿ

Updated on: Jun 16, 2022 | 12:38 PM

ಮಂಗಳೂರು: ಇತ್ತೀಚೆಗೆ ಬಹುತೇಕ ಯುವಕರು ತಮ್ಮ ಹಳ್ಳಿಗಳನ್ನು ಬಿಟ್ಟು ನಗರಗಳತ್ತ ಕೆಲಸ ಹುಡುಕಿಕೊಂಡು ಹೋಗುತ್ತಿದ್ದಾರೆ. ಅಂಥದರಲ್ಲಿ ಇಲ್ಲೊಬ್ಬರು ಕೈ ತುಂಬಾ ಸಂಬಳ ಪಡೆಯುತ್ತಿದ್ದ ಐಟಿ ಉದ್ಯೋಗವನ್ನು ತೊರೆದು ಸದ್ಯ ತಮ್ಮ ಹಳ್ಳಿಯಲ್ಲಿ ಕತ್ತೆ ಸಾಕಣಿಯನ್ನು ಆರಂಭಿಸಿದ್ದಾರೆ. ಶ್ರೀನಿವಾಸ್ ಗೌಡ ಎನ್ನುವವರು ದಕ್ಷಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ  20 ಕತ್ತೆಗಳು ಮತ್ತು 42 ಲಕ್ಷ ರೂಪಾಯಿ ಹೂಡಿಕೆಯೊಂದಿಗೆ, ಕತ್ತೆ ಹಾಲಿನ ಫಾರ್ಮ್ ತೆರೆದಿದ್ದಾರೆ. ಇದು ಭಾರತ ಮತ್ತು ಕರ್ನಾಟಕದ ಮೊದಲ ಕತ್ತೆ ಸಾಕಾಣಿಕೆ ಮತ್ತು ತರಬೇತಿ ಕೇಂದ್ರವಾಗಿದೆ. ಜೂನ್​ 8ರಂದು ಫಾರ್ಮ್​ನ್ನು ಉದ್ಘಾಟಿಸಲಾಗಿದೆ.

ಈ ಕುರಿತಾಗಿ ಅವರು ಮಾತನಾಡಿದ್ದು, ನಾನು ಬಿ.ಎ ಪದವೀಧರನಾಗಿದ್ದು, ಈ ಹಿಂದೆ 2020 ರವರೆಗೆ ಸಾಫ್ಟ್‌ವೇರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದೆ.  ಪ್ರಸ್ತುತ ನಮ್ಮಲ್ಲಿ 20 ಕತ್ತೆಗಳಿವೆ ಮತ್ತು ನಾನು ಸುಮಾರು 42 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದೇನೆ. ನಾವು ಕತ್ತೆ ಹಾಲನ್ನು ಮಾರಾಟ ಮಾಡಲು ಯೋಜಿಸುತ್ತಿದ್ದೇವೆ. ಇದರಿಂದ ಸಾಕಷ್ಟು ಅನುಕೂಲಗಳಿವೆ. ಕತ್ತೆ ಹಾಲು ಎಲ್ಲರಿಗೂ ಸಿಗಬೇಕು ಎಂಬುದು ನಮ್ಮ ಕನಸು, ಕತ್ತೆ ಹಾಲು ಒಂದು ಔಷಧ ಸೂತ್ರವಾಗಿದೆ. ಕತ್ತೆ ಜಾತಿಗಳ ಸಂಖ್ಯೆ ಇಳಿಮುಖವಾಗಿರುವುದರಿಂದ ಈ ವಿಚಾರವನ್ನು ಯೋಚಿಸಿರುವುದಾಗಿ ಗೌಡರು ತಿಳಿಸಿದರು. ಆರಂಭದಲ್ಲಿ ಕತ್ತೆ ಸಾಕಾಣಿಕೆ ವಿಚಾರ ಜನರಿಗೆ ಮನವರಿಕೆಯಾಗಿರಲಿಲ್ಲ ಎಂದರು.

ಹಾಲು ಪ್ಯಾಕೆಟ್‌ಗಳಲ್ಲಿ ಲಭ್ಯವಿದ್ದು, 30 ಮಿಲಿ ಹಾಲಿನ ಪ್ಯಾಕೆಟ್‌ನ ಬೆಲೆ 150 ರೂ. ಎಂದು ಮನಿಕಂಟ್ರೋಲ್ ವರದಿ ತಿಳಿಸಿದೆ. ಮಾಲ್​ಗಳು, ಅಂಗಡಿಗಳು ಮತ್ತು ಸೂಪರ್​​​ ಮಾರ್ಕೆಟ್​ಗಳಲ್ಲಿ ಕತ್ತೆ ಹಾಲು ಲಭ್ಯವಿರಲಿದ್ದು, ಈಗಾಗಲೇ ಅವರು 17 ಲಕ್ಷ ರೂ.ಗಳ ಆರ್ಡರ್​ ಕೂಡ ಪಡೆದಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.