ಮಂಗಳೂರಿನಲ್ಲಿ ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಸಾವು

ಕಾಸ್ಮೆಟಿಕ್ ಸರ್ಜರಿ (cosmetic surgery) ವೇಳೆ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಮಂಗಳೂರಿನ ಕಂಕನಾಡಿಯ ಬೆಂದೂರ್ ವೆಲ್​ನಲ್ಲಿ ನಡೆದಿದೆ. ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಸಣ್ಣ ಶಸ್ತ್ರಚಿಕಿತ್ಸೆ, ಸಂಜೆಯಾದರೂ ಮುಗಿಯದ ಹಿನ್ನೆಲೆ ಅನುಮಾನಗೊಂಡ ವಿಚಾರಿಸಿದಾಗ ಆರೋಗ್ಯದಲ್ಲಿ ಏರುಪೇರು ಆಗಿರುವ ಮಾಹಿತಿ ಬೆಳಕಿಗೆ ಬಂದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಮಂಗಳೂರಿನಲ್ಲಿ ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಸಾವು
ಮಂಗಳೂರಿನಲ್ಲಿ ಕಾಸ್ಮೆಟಿಕ್ ಸರ್ಜರಿ ವೇಳೆ ಯುವಕ ಸಾವು,
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 24, 2024 | 6:52 PM

ದಕ್ಷಿಣ ಕನ್ನಡ, ಸೆ.24: ಮಂಗಳೂರಿನ ಕಂಕನಾಡಿಯ ಬೆಂದೂರ್ ವೆಲ್​ನಲ್ಲಿ ಕಾಸ್ಮೆಟಿಕ್ ಸರ್ಜರಿ(cosmetic surgery) ವೇಳೆ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಮೊಹ್ಮದ್ ಮಾಝಿನ್(32) ಮೃತ ರ್ದುದೈವಿ. ಉಳ್ಳಾಲದ ಅಕ್ಕರೆಕೆರೆ ನಿವಾಸಿಯಾದ ಮೊಹಮ್ಮದ್ ಮಾಝಿನ್, ತನ್ನ‌ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು ಬೆಂದೂರ್ ವೆಲ್​ನಲ್ಲಿರುವ ಫ್ಲೋಂಟ್ ಕಾಸ್ಮೆಟಿಕ್ ಸರ್ಜರಿ ಮತ್ತು ಹೇರ್ ಟ್ರಾನ್ಸ್ ಪರೆಂಟ್ ಕ್ಲಿನಿಕ್​ಗೆ ಬಂದಿದ್ದ.

ವೈದ್ಯರು ಎಡವಟ್ಟಿನಿಂದ ಸಾವು ಎಂದು ಆರೋಪ

ಅರ್ಧ ಗಂಟೆಯಲ್ಲಿ ಮುಗಿಯಬಹುದಾಗಿದ್ದ ಸಣ್ಣ ಶಸ್ತ್ರಚಿಕಿತ್ಸೆ, ಸಂಜೆಯಾದರೂ ಮುಗಿಯದ ಹಿನ್ನೆಲೆ ಅನುಮಾನಗೊಂಡ ಮಾಝಿನ್ ಮನೆಯವರು, ಸಂಶಯಗೊಂಡು‌ ವಿಚಾರಿಸಿದಾಗ ಆರೋಗ್ಯದಲ್ಲಿ ಏರುಪೇರು ಆಗಿರುವ ಮಾಹಿತಿ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಮಾಝಿನ್ ಅವರನ್ನು ದಾಖಲು ಮಾಡಲಾಗಿದೆ. ಬಳಿಕ ಪರೀಕ್ಷಿಸಿದ ವೈದ್ಯರು ಮಾಝಿನ್ ಮೃತಪಟ್ಟಿರುವ ಬಗ್ಗೆ ತಿಳಿಸಿದ್ದಾರೆ. ಸರ್ಜರಿಯ ವೇಳೆ ವೈದ್ಯರು ಎಡವಟ್ಟು ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದು, ಈ ಕುರಿತು ಕದ್ರಿ‌ ಠಾಣೆ ಪೊಲೀಸರು ಯು.ಡಿ.ಆರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಳ್ಳುವಾಗಲೇ ನಾಲ್ಕು ಬಾರಿ ಹೃದಯಾಘಾತ; ಮಾಡೆಲ್ ಸಾವು

ಕಾಸ್ಮೆಟಿಕ್ ಸರ್ಜರಿ

ಕಾಸ್ಮೆಟಿಕ್ ಸರ್ಜರಿ ಅಥವಾ ಸೌಂದರ್ಯದ ಶಸ್ತ್ರಚಿಕಿತ್ಸೆ ಎಂದು ಕರೆಯಲಾಗುತ್ತದೆ. ಶಸ್ತ್ರಚಿಕಿತ್ಸಾ ಮತ್ತು ವೈದ್ಯಕೀಯ ತಂತ್ರಗಳ ಮೂಲಕ ವ್ಯಕ್ತಿಯ ಸೌಂದರ್ಯವನ್ನು ಹೆಚ್ಚಿಸುವುದಾಗಿದೆ. ಇದರಿಂದ ಮುಖವು ಯೌವನ ಅಂದರೆ ವಯಸ್ಸಾದಂತೆ ಕಾಣುವುದನ್ನು ತಪ್ಪಿಸಬಹುದಾಗಿದೆ. ಹೆಚ್ಚಾಗಿ ಸೌಂದರ್ಯದ ಮೇಲೆ ಆಸಕ್ತಿ ಇದ್ದವರು ಇದನ್ನು ಮಾಡಿಸಿಕೊಳ್ಳುತ್ತಾರೆ. ಆದರೆ, ಇದೀಗ ಈ ಶಸ್ತ್ರಚಿಕಿತ್ಸೆಗೆ ಓರ್ವ ಅಸುನೀಗಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಸಿಎಂ ಪ್ರಾಸಿಕ್ಯೂಷನ್​ಗೆ ಹೈಕೋರ್ಟ್ ಅನುಮತಿ: ಹೆಚ್​ಡಿಕೆ ಅಚ್ಚರಿಯ ಹೇಳಿಕೆ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಅಮೆರಿಕ ಪ್ರವಾಸ ಫಲಪ್ರದವಾಗಿದೆ; ಯುಎಸ್​ ಭೇಟಿಯ ನೆನಪುಗಳ ಹಂಚಿಕೊಂಡ ಮೋದಿ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮಹಿಳಾ ಟಿ20 ವಿಶ್ವಕಪ್ 2024ರ ಆ್ಯಂಥಮ್ ಸಾಂಗ್ ಬಿಡುಗಡೆ
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
ಮುಡಾ ಪ್ರಾಸಿಕ್ಯೂಷನ್ ಕೇಸ್​: ಸಿದ್ದರಾಮಯ್ಯಗೆ ರಿಲೀಫ್​ ಸಿಗಲ್ಲ ಎಂದ ವಕೀಲರು
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
CM ಅರ್ಜಿ ಹೈಕೋರ್ಟ್‌ ವಜಾ; ಸತ್ಯಕ್ಕೆ ಜಯ ಸಿಕ್ಕಿದೆ ಎಂದ ದೂರುದಾರ
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​