AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಬಲ ಬೆಲೆಯಲ್ಲಿ ಕುಚಲಕ್ಕಿ ಖರೀದಿಸಲು ಕರ್ನಾಟಕ ಸರ್ಕಾರ ನಿರ್ಧಾರ

ಮೂರೂ ಜಿಲ್ಲೆಗಳಲ್ಲಿ ವಿತರಿಸಲು ಒಟ್ಟು 13 ಲಕ್ಷ ಕ್ವಿಂಟಲ್​​ ಕುಚಲಕ್ಕಿ ಅವಶ್ಯಕತೆ ಇದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಬೆಂಬಲ ಬೆಲೆಯಲ್ಲಿ ಕುಚಲಕ್ಕಿ ಖರೀದಿಸಲು ಕರ್ನಾಟಕ ಸರ್ಕಾರ ನಿರ್ಧಾರ
ಸಚಿವ ಕೋಟ ಶ್ರೀನಿವಾಸ ಪೂಜಾರಿ
TV9 Web
| Edited By: |

Updated on:Nov 10, 2022 | 2:35 PM

Share

ಬೆಂಗಳೂರು: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿತರಿಸಲೆಂದು ಕುಚಲಕ್ಕಿ ಖರೀದಿಸಲು ಕರ್ನಾಟಕ ನಿರ್ಧರಿಸಿದೆ. ಇದಕ್ಕಾಗಿ ವಿಶೇಷ ಖರೀದಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಡಿ 1ರಿಂದ ಕುಚಲಕ್ಕಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್​ದಾರರಿಗೆ ಕುಚಲಕ್ಕಿ ವಿತರಿಸಲಾಗುವುದು. ಮೂರೂ ಜಿಲ್ಲೆಗಳಲ್ಲಿ ವಿತರಿಸಲು ಒಟ್ಟು 13 ಲಕ್ಷ ಕ್ವಿಂಟಲ್​​ ಕುಚಲಕ್ಕಿ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು.

ಪ್ರತಿ ಕ್ವಿಂಟಲ್​ ಕುಚಲಕ್ಕಿಗೆ ₹ 2,540 ನೀಡಲಾಗುವುದು. ಪಡಿತರದಲ್ಲಿ ಕುಚಲಕ್ಕಿ ವಿತರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮತಿಸಿದ್ದಾರೆ. ಈ ಮೂರೂ ಜಿಲ್ಲೆಗಳಿಗೆ ಅಕ್ಕಿ ವಿತರಿಸಲು ತಿಂಗಳಿಗೆ 1 ಲಕ್ಷ ಕ್ವಿಂಟಲ್ ಅಕ್ಕಿ ಬೇಕಿದೆ. ಇದಕ್ಕಾಗಿ 18 ಲಕ್ಷ ಕ್ವಿಂಟಲ್ ಭತ್ತ ಸಂಸ್ಕರಿಸಬೇಕಾಗಿದೆ. ಇದನ್ನು ಬೇರೆಡೆಯಿಂದ ಕೊಳ್ಳುವ ಬದಲು ಕರಾವಳಿ ಜಿಲ್ಲೆಗಳಲ್ಲಿಯೇ ಖರೀದಿಸುವ ಬಗ್ಗೆ ಚಿಂತನೆ ನಡೆದಿದೆ ಎಂದರು.

ಕರಾವಳಿಗರ ಬೇಡಿಕೆ ಈಡೇರಿಕೆ: ಬೊಮ್ಮಾಯಿ

ಕರಾವಳಿ ಜಿಲ್ಲೆಗಳಲ್ಲಿ ಬಿಪಿಎಲ್ ಪಡಿತರ ಹೊಂದಿರುವವರಿಗೆ ಕುಚಲಕ್ಕಿ ವಿತರಿಸಬೇಕು ಎನ್ನುವ ಬಹುದಿನಗಳ ಬೇಡಿಕೆಯನ್ನು ಶೀಘ್ರ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಉಡುಪಿ ಸಮೀಪದ ಕಾಪುವಿನಲ್ಲಿ ಇತ್ತೀಚೆಗೆ ನಡೆದ ಜನಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪಡಿತರದಲ್ಲಿ ಕುಚಲಕ್ಕಿ ಕೊಡಬೇಕು ಎಂಬ ಕರಾವಳಿಗರ ಬಹುದಿನಗಳ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸುತ್ತಿದೆ ಎಂದು ಘೋಷಿಸಿದರು.

ಬೆಂಗಳೂರಿನಲ್ಲಿ ಈ ಸಂಬಂಧ ಶೀಘ್ರವೇ ಸಭೆಯೊಂದನ್ನು ನಡೆಸಲಾಗುವುದು. ಮುಂದಿನವಾರ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ಹೇಳಿದರು.

Published On - 2:35 pm, Thu, 10 November 22

Follow Us
Web contact
Web contact

TV9 Kannada

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ