ಉಡುಪಿ: ಭಾರಿ ಮಳೆಗೆ ಒಂದು ವರ್ಷದ ಹಿಂದೆ ನಿರ್ಮಿಸಿದ ಸೇತುವೆ ಕುಸಿತ; ಗ್ರಾಮಸ್ಥರು ಕಂಗಾಲು

ಕರ್ನಾಟಕದ ಹಲವೆಡೆ ಮಳೆಯ ಅಬ್ಬರ ಜೋರಾಗಿದ್ದು, ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ವರುಣಾರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಅದರಂತೆ ಕುಂದಾಪುರ (Kundapura) ತಾಲೂಕಿನ ಭರಣಕೊಳ್ಕಿಯಲ್ಲಿ ಭಾರಿ ಮಳೆಗೆ ಒಂದು ವರ್ಷದ ಹಿಂದೆ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆವೊಂದು ಕುಸಿದಿದ್ದು, ಅದನ್ನೇ ನಂಬಿಕೊಂಡಿದ್ದ ಜನರು ಕಂಗಾಲಾಗಿದ್ದಾರೆ.

ಉಡುಪಿ: ಭಾರಿ ಮಳೆಗೆ ಒಂದು ವರ್ಷದ ಹಿಂದೆ ನಿರ್ಮಿಸಿದ ಸೇತುವೆ ಕುಸಿತ; ಗ್ರಾಮಸ್ಥರು ಕಂಗಾಲು
ಸೇತುವೆ ಕುಸಿತ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 16, 2024 | 2:57 PM

ಉಡುಪಿ, ಜು.16: ಕರ್ನಾಟಕದ ಕರಾವಳಿ ಭಾಗದಲ್ಲಿ ಮಳೆ(Rain)ಯ ಆರ್ಭಟ ಜೋರಾಗಿದ್ದು, ಭಾರಿ ಮಳೆಗೆ ಒಂದು ವರ್ಷದ ಹಿಂದೆ 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆವೊಂದು ಕುಸಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಭರಣಕೊಳ್ಕಿಯಲ್ಲಿ ನಡೆದಿದೆ. ಹಾಲಾಡಿ, ಜೋರಾಡಿ, ಮುದ್ದೂರು ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ದಿನನಿತ್ಯದ ಕೆಲಸಕ್ಕೆ ತೆರಳಲು ಗ್ರಾಮಸ್ಥರು ಇದೇ ಸೇತುವೆಯನ್ನ ಅವಲಂಭಿಸಿದ್ದರು. ಇದೀಗ ಕಳಪೆ ಕಾಮಗಾರಿಯಿಂದ ಸೇತುವೆ ಕುಸಿತ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಗುಲಗಳಲೆ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತ

ಹಾಸನ: ತಡೆಗೋಡೆ ಇಲ್ಲದೆ ಸಕಲೇಶಪುರ ತಾಲ್ಲೂಕಿನ ಗುಲಗಳಲೆ ಬಳಿ ರಾಷ್ಟ್ರೀಯ ಹೆದ್ದಾರಿ ಕುಸಿತವಾಗಿದೆ. ಹೆದ್ದಾರಿ ಕುಸಿತ ಹಿನ್ನೆಲೆಯಲ್ಲಿ ನಾಲ್ಕು ಪಥದ ರಸ್ತೆಯ ಒಂದು ಭಾಗದ ರಸ್ತೆ ಬಂದ್ ಆಗಿದ್ದು, ವಾಹನ ಸಂಚಾರ ಮುಂದುವರೆದರೆ ಮತ್ತಷ್ಟು ಕುಸಿತ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತ ಮಾಡಲಾಗಿದೆ. ಸಮರ್ಪಕವಾಗಿ ಕಾಮಗಾರಿ ಆಗದಿರುವ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಸಕಲೇಶಪುರ ಉಪ ವಿಭಾಗ ಅಧಿಕಾರಿ ಶೃತಿ ಎದುರು ಕಾಮಗಾರಿ ಕಳಪೆ ಕುರಿತು ಜನರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಮಂಗಳೂರು: ನಿರ್ಮಾಣ ಹಂತದ ಸೇತುವೆ ಕುಸಿತ, ಏಳು ಜನರಿಗೆ ಗಾಯ

ಇನ್ನು ಈ ಘಟನೆ ನಡೆದರೂ ಪ್ರಾಧಿಕಾರದ ಅಧಿಕಾರಿಗಳು ಯಾರೂ ಬಂದಿಲ್ಲ. ಏನಾದರೂ ಅನಾಹುತ ಆದರೆ ಯಾರು ಹೊಣೆ ಎಂದು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಇಂಜಿನಿಯರ್​ಗಳಿಗೆ ಹಾಗೂ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳನ್ನ ಉಪ ವಿಭಾಗಾದಿಕಾರಿ ಶೃತಿ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಇಂಜಿನಿಯರ್, ‘ರಸ್ತೆ ಕುಸಿದಿದ್ದರಿಂದ ಮಾರ್ಗ ಬದಲಾವಣೆ ಮಾಡ್ತೇವೆ ಎಂದಿದ್ದು, ‘ನೀವು ವೆಹಿಕಲ್ ಡೈವರ್ಸನ್ ಮಾಡಿ ಹೋದ್ರೆ ಇಲ್ಲಿ ಯಾರು ಇರ್ತಾರೆ?, ಏನಾದ್ರು ಸಮಸ್ಯೆ ಆದರೆ ಜವಾಬ್ದಾರಿ ಯಾರು,ಕೂಡಲೇ ಅಗತ್ಯ ಕ್ರಮ ಕೈಗೊಳ್ಳಿ ಎಂದು ಉಪ ವಿಭಾಗಾದಿಕಾರಿ ಎಚ್ಚರಿಕೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ