ಕೋಟಿ ಚೆನ್ನಯ್ಯ ಕಂಬಳ; ದೇವರನ್ನು ಮೆಚ್ಚಿಸಲು ಆಡುವಂತಹ ಭಕ್ತಿಯಾಟಕ್ಕೆ ಮನಸೋತ ಸಾರ್ವಜನಿಕರು

ಸುಮಾರು 800 ರಿಂದ 900 ವರ್ಷ ಇತಿಹಾಸವಿರುವ ಚೆನ್ನಯ್ಯ ಕಂಬಳ ಕರಾವಳಿಗರ ನೆಚ್ಚಿನ ಕ್ರೀಡೆ. ವೀರ ಕ್ರೀಡೆ ಎಂದು ಕರೆಸಿಕೊಳ್ಳುವ ಕಂಬಳ ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆಯಾಗಿದೆ. ಮಾತ್ರವಲ್ಲ ದೇವರನ್ನು ಮೆಚ್ಚಿಸಲು ಆಡುವಂತಹ ಭಕ್ತಿಯಾಟ ಎಂದು ಕರೆಯಲಾಗುತ್ತದೆ.

ಕೋಟಿ ಚೆನ್ನಯ್ಯ ಕಂಬಳ; ದೇವರನ್ನು ಮೆಚ್ಚಿಸಲು ಆಡುವಂತಹ ಭಕ್ತಿಯಾಟಕ್ಕೆ ಮನಸೋತ ಸಾರ್ವಜನಿಕರು
ಕೋಟಿ ಚೆನ್ನಯ್ಯ ಕಂಬಳ
Follow us
TV9 Web
| Updated By: preethi shettigar

Updated on:Dec 13, 2021 | 9:57 AM

ದಕ್ಷಿಣ ಕನ್ನಡ: ಕೋಟಿ ಚೆನ್ನಯ್ಯ ಕಂಬಳ. ಇದು ಕಂಬಳದಲ್ಲಿಯೇ ಸುಪ್ರಸಿದ್ಧ ಐತಿಹ್ಯ ಹೊಂದಿರುವ ಕಂಬಳ. ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆ ಇದು. ಈ ಗ್ರಾಮೀಣ ಕ್ರೀಡೆ ನೂರಾರು ವರ್ಷಗಳಿಂದ ತುಳುನಾಡಿನ ಜನರ ಜೀವನದ ಕೊಂಡಿಯಾಗಿದೆ. ಈ ಬಾರಿಯ ಕೋಟಿ ಚೆನ್ನಯ್ಯ ಕಂಬಳಕ್ಕೆ (koti chennaya kambala) ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದು, ಸದ್ಯ ದಕ್ಷಿಣ ಕನ್ನಡದಲ್ಲಿ ಖುಷಿಯ ವಾತಾವರಣ ಸೃಷ್ಟಿಯಾಗಿದೆ.

ಸುಮಾರು 800 ರಿಂದ 900 ವರ್ಷ ಇತಿಹಾಸವಿರುವ ಚೆನ್ನಯ್ಯ ಕಂಬಳ ಕರಾವಳಿಗರ ನೆಚ್ಚಿನ ಕ್ರೀಡೆ. ವೀರ ಕ್ರೀಡೆ ಎಂದು ಕರೆಸಿಕೊಳ್ಳುವ ಕಂಬಳ ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆಯಾಗಿದೆ. ಮಾತ್ರವಲ್ಲ ದೇವರನ್ನು ಮೆಚ್ಚಿಸಲು ಆಡುವಂತಹ ಭಕ್ತಿಯಾಟ ಎಂದು ಕರೆಯಲಾಗುತ್ತದೆ. ಅಷ್ಟೇ ಅಲ್ಲ ಕಂಬಳ ಎನ್ನುವುದು ಕಡಲತೀರದ ಮಕ್ಕಳ ಭಾವನಾತ್ಮಕ ಆಚರಣೆ. ಹೀಗಾಗಿಯೇ ಕಂಬಳ ಪ್ರಿಯರು ಅದೆಷ್ಟೇ ದೂರ ಇದ್ದರು ಕೂಡ ಕಂಬಳ ನಡೆಯುವ ದಿನ ಅಲ್ಲಿಗೆ ಹಾಜರಾಗುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆ ತಾಲೂಕಿನ ಕಡಲಕೆರೆಯಲ್ಲಿ ನಡೆಯುವ ಕೋಟಿ ಚೆನ್ನಯ್ಯ ಕಂಬಳ ತುಂಬಾ ಐತಿಹ್ಯ ಹೊಂದಿರುವ ಕಂಬಳವಾಗಿದೆ. ಇಲ್ಲಿ ಸತ್ತಲೂ ಜನವೋ ಜನ. ನಡುರಾತ್ರಿಯಾದರೂ ಪರವಾಗಿಲ್ಲ. ಆಟ ನೋಡದೆ ಮನೆ ಸೋರೋಲ್ಲ ಎನ್ನುವ ಜನಸ್ತೋಮ. ಮಹಿಳೆಯರು ಮಕ್ಕಳೆನ್ನದೇ ಆಟ ನೋಡುವುದಕ್ಕೆ ಕಾದು ಕುಳಿತಿರುವ ಕುತೂಹಲಿಗರು. ಈ ಮಧ್ಯೆ ಶಿಳ್ಳೆ, ಚಪ್ಪಾಳೆಗಳ ಅಬ್ಬರ. ಹೀಗಿರೋವಾಗಲೇ ಆಟದ ಕಣಕ್ಕೆ ಬರುತ್ತವೆ ಬಾರಿ ಗಾತ್ರದ ಕೋಣಗಳು.

ಪ್ರತಿ ಬಾರಿಯಂತೆ ಈ ಬಾರಿ ಕೂಡ ಉಡುಪಿ-ದಕ್ಷಿಣ ಕನ್ನಡ ಎರಡು ಜಿಲ್ಲೆಗಳಿಂದ 200 ಜೊತೆ ಕೋಣಗಳು ಇದರಲ್ಲಿ ಪಾಲ್ಗೊಂಡಿದ್ದವು. ಇನ್ನು ಈ ಕಂಬಳವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಕಂಬಳ ಪ್ರಿಯರು ಆಗಮಿಸಿದ್ದರು. ಮಧ್ಯರಾತ್ರಿ ವೇಳೆಗೆ 10 ಸಾವಿರ ಕಂಬಳ ಅಭಿಮಾನಿಗಳು ಆಗಮಿಸಿದ್ದರು. ಇನ್ನೊ ಈ ಕಂಬಳ ಹೊನಲು ಬೆಳಕಿನಲ್ಲಿ ನಡೆಯುವ ಕಂಬಳ ಆಗಿದ್ದರಿಂದ ನಿನ್ನೆ ರಾತ್ರಿ ಪೂರ್ತಿ ನಡೆದು ಇಂದು ಸಮಾರೋಪವಾಗಲಿದೆ.

ಈ ಕಂಬಳದಲ್ಲಿ ಹಿಂಸೆಗೆ ಅವಕಾಶವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜಿಲ್ಲಾ ಕಂಬಳ ಸಮಿತಿ 2017-18 ಸಾಲಿನಲ್ಲಿ ಕೈಗೊಂಡಿರುವ ಮಾರ್ಗದರ್ಶಿ ಸೂಚನೆಗಳ ಪ್ರಕಾರ ಕಂಬಳ ನಡೆಯುತ್ತಿದೆ. ಕನೆಹಲಗೆಯಲ್ಲಿ ನಿಗದಿತ ನಿಶಾನೆಗೆ ನೀರು ಹಾಯಿಸಿದ ಕೋಣಗಳಿಗೆ ಹಗ್ಗ, ನೇಗಿಲು ಹಿರಿಯ ವಿಭಾಗದ ಕೋಣಗಳಿಗೆ ಕ್ರಮವಾಗಿ ಪ್ರಥಮ ಸ್ಥಾನಕ್ಕೆ 2 ಪವನ್, ದ್ವಿತೀಯ ಸ್ಥಾನಕ್ಕೆ 1 ಪವನ್ ಚಿನ್ನ ಕೊಡಲಾಗುವುದು. ಅಡ್ಡ ಹಲಗೆ, ಹಗ್ಗ, ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ 1 ಪವನ್, ದ್ವಿತೀಯ ಅರ್ಧ ಪವನ್ ಚಿನ್ನ ಕೊಡಲಾಗುತ್ತೆ. ಇದಲ್ಲಿದೆ ವಿಶೇಷವಾಗಿ ವಿಜೇತ ಕೋಣಗಳನ್ನು ಓಡಿಸಿದವರಿಗೆ ಕಾಲು ಪವನ್ ಚಿನ್ನ ಹಾಗೂ ಸಹಾಯಕ ತಂಡದವರಿಗೆ ಒಂದು ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ.

ಕಂಬಳ ನೋಡಲು ಬರುವವರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇನ್ನು ಈ ಬಾರಿ ಕಂಬಳ ನಡೆಯುವುದಕ್ಕೂ ಮುನ್ನ ಇತ್ತೀಚೆಗೆ ಅಗಲಿದ ನಟ ಪುನೀತ್ ರಾಜ್ ಕುಮಾರ್ ಮತ್ತು ಸಿಡಿಎಸ್ ಬಿಪಿನ್ ರಾವತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯ್ತು. ಕಂಬಳದ ಉಸ್ತುವಾರಿ ಪ್ರತಿವರ್ಷ ಮೂಡಬಿದಿರೆಯ ಶಾಸಕರದ್ದಾಗಿದ್ದು, ಈ ಬಾರಿಯೂ ವಿಜೃಂಭಣೆಯಿಂದ ನಡೆಯಿತು.

ವರದಿ: ಪೃಥ್ವಿರಾಜ್ ಬೊಮ್ಮನಕೆರೆ

ಇದನ್ನೂ ಓದಿ: Kambala: ಕಂಬಳ ಕ್ರೀಡೆಗೆ ಮಹಿಳಾ ಸಾರಥಿಗಳು; ಐವರು ಯುವತಿಯರಿಗೆ ತರಬೇತಿ ನೀಡಲು ತಯಾರಿ

ಕಂಬಳಕ್ಕೆ ಉತ್ತೇಜನ ನೀಡಿದ ಸರ್ಕಾರ – ದಕ್ಷಿಣ ಕನ್ನಡ, ಉಡುಪಿ ಡಿಸಿ ಖಾತೆಗಳಿಗೆ 1 ಕೋಟಿ ಬಿಡುಗಡೆ

Published On - 9:47 am, Mon, 13 December 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ