
ಮಂಗಳೂರು, ಫೆಬ್ರವರಿ 19: ಚೆಂಡಿನ ಆಕಾರದ ವಸ್ತು ಸ್ಫೋಟಗೊಂಡು (explosion) ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಭೀಶ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಸದ್ಯ ಬಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 9(B), 1(b) ಸ್ಫೋಟಕಗಳ ಕಾಯ್ದೆ, 125 A BNS ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ.
ಬಾಲಕ ಅಭೀಶ್ ಮನೆ ಅಂಗಳದಲ್ಲಿ ಆಟ ಆಡುತ್ತಿದ್ದ. ಈ ವೇಳೆ ಚೆಂಡಿನಾಕಾರದ ವಸ್ತು ಪತ್ತೆಯಾಗಿದೆ. ಬಾಲ್ ರೀತಿ ಇದ್ದ ಬಾಂಬ್ನಿಂದ ಮಕ್ಕಳು ಕ್ರಿಕೆಟ್ ಆಡಿದ್ದಾರೆ. ಓರ್ವ ಬಾಲಕ ಪತ್ತೆಯಾದ ಚೆಂಡಿನಾಕಾರದ ವಸ್ತುವನ್ನು ಬೌಲ್ ಮಾಡಿದ್ದು, ಅಭೀಶ್ ಬ್ಯಾಟ್ನಿಂದ ಹೊಡೆದಾಗ ಬ್ಲಾಸ್ಟ್ ಆಗಿದೆ. ಈ ವೇಳೆ ಅಭೀಶ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಾಡು ಹಂದಿ ಬೇಟೆ ಆಡಲು ಇಟ್ಟಿದ್ದ ಬಾಂಬ್ ಎಂದು ಶಂಕಿಸಲಾಗಿದೆ.
ಕೆಮಿಕಲ್ ಟ್ಯಾಂಕ್ ಸ್ಫೋಟಗೊಂಡು ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಇತ್ತೀಚೆಗೆ ಮಂಡ್ಯದ ಕಾರೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕೀರ್ತಿ ಕೆಮಿಕಲ್ ಕಾರ್ಖಾನೆ ಸ್ಥಳಾಂತರಿಸುವ ವೇಳೆ ಅವಘಡ ಸಂಭವಿಸಿದೆ. ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಆಕಾಶ್ ಹಾಗೂ ಕಲ್ಲುಖಾನ್ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಐರ್ಲೆಂಡ್ನಲ್ಲಿ ಕನ್ನಡಿಗನ ನಿಗೂಢ ಸಾವು: ಮನೆಯಲ್ಲಿ ಶವ ಪತ್ತೆ
ಅಂದಹಾಗೇ ಕೀರ್ತಿ ಕೆಮಿಕಲ್ ಕಾರ್ಖಾನೆಯಲ್ಲಿ ಇಂತಹ ಅವಘಡ ಇದೇ ಮೊದಲೇನಲ್ಲ. ಕಳೆದ 4 ವರ್ಷಗಳ ಹಿಂದೆ ಫ್ಯಾಕ್ಟರಿಯಿಂದ ರಾಸಾಯನಿಕ ಸೋರಿಕೆಯಾಗಿ ಅಕ್ಕಪಕ್ಕದ ರೈತರು, ಸುಮಾರು 30 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣವಾಗಿ ನಾಶವಾಗಿತ್ತು. ಕಾರ್ಖಾನೆ ಮಾಲೀಕರೇ ರೈತರಿಗೆ ನಷ್ಟ ಪರಿಹಾರ ನೀಡಿದ್ದರು. ಬಳಿಕ ಫ್ಯಾಕ್ಟರಿ ಪುನರಾರಂಭಕ್ಕೆ ಸ್ಥಳೀಯ ರೈತರು ವಿರೋಧ ಹೆಚ್ಚಾಗಿತ್ತು. ಅಂದಿನಿಂದ ಇಂದಿನವರೆಗೂ ಸ್ಥಗಿತಗೊಂಡಿದ್ದ ಕಾರ್ಖಾನೆಯನ್ನ ಬೇರೆಡೆಗೆ ಸ್ಥಳಾಂತರ ಮಾಡಲು ಮಾಲೀಕರು ನಿರ್ಧರಿಸಿದ್ದರು. ಅದರಂತೆ ಕಳೆದ ಒಂದೂ ತಿಂಗಳಿನಿಂದ ಉತ್ತರ ಭಾರತ ಮೂಲದ ಕಾರ್ಮಿಕರ ಮೂಲಕ ಸ್ಥಳಾಂತರ ಕಾರ್ಯ ಮಾಡಿಸಲಾಗ್ತಿತ್ತು. ಆದರೆ ಯಾವುದೇ ಮುನ್ನೆಚ್ಚರಿಕೆ ವಹಿಸದ ಕಾರಣ ಕೆಮಿಕಲ್ ಟ್ಯಾಂಕ್ ಸ್ಪೋಟಿಸಿ ಇಬ್ಬರು ಅಮಾಯಕರ ಜೀವ ಹೋಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:37 pm, Thu, 19 February 26