AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕುಖ್ಯಾತ ಡ್ರಗ್ ಪೆಡ್ಲರ್​​ಗಳ ಬಂಧನ

ನಿಷೇಧಿತ ಎಮ್​ಡಿಎಮ್​ಎ ಡ್ರಗ್ಸ್​​ ಮಾರುತಿದ್ದ ಕುಖ್ಯಾತ ಡ್ರಗ್​ ಪೆಡ್ಲರ್​ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಮಂಗಳೂರಿನ ವಿವಿಧ ಪ್ರದೇಶಗಳಿಗೆ ಡ್ರಗ್ಸ್​​ ಸರಬರಾಜು ಮಾಡುತ್ತಿದ್ದರು.

ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ: ಕುಖ್ಯಾತ ಡ್ರಗ್ ಪೆಡ್ಲರ್​​ಗಳ ಬಂಧನ
ಬಂಧಿತ ಆರೋಪಿಗಳು
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: ವಿವೇಕ ಬಿರಾದಾರ|

Updated on:Aug 28, 2023 | 8:29 AM

Share

ಮಂಗಳೂರು: ಮಂಗಳೂರು ಪೊಲೀಸರು (Mangaluru Police) ಡ್ರಗ್ಸ್ ಮಾಫಿಯಾ (Drug Mafia) ವಿರುದ್ಧ ಸಮರ ಸಾರಿದ್ದು, ಈ ದಂಧೆಯಲ್ಲಿ ಭಾಗಿಯಾಗಿದ ಆರೋಪಿಗಳ ಹೆಡೆಮುರಿ ಕಟ್ಟುತ್ತಿದ್ದಾರೆ. ಇದೀಗ ಮಂಗಳೂರು ಸಿಸಿಬಿ (CCB) ಪೊಲೀಸರು ಡ್ರಗ್​ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ನಿಷೇಧಿತ ಎಮ್​ಡಿಎಮ್​ಎ ಡ್ರಗ್​ ಪೆಡ್ಲರ್​​​ಗಳನ್ನು ಬಂಧಿಸಿದ್ದಾರೆ. ಕಾಟಿಪಳ್ಳ ನಿವಾಸಿ ಶಾಕೀಬ್ ಅಲಿಯಾಸ್ ಶಬ್ಬು (33), ಚೊಕ್ಕಬೆಟ್ಟು ನಿವಾಸಿ ನಿಸಾರ್ ಹುಸೈನ್ ಅಲಿಯಾಸ್ ನಿಚ್ಚು ಬಂಧಿತ ಆರೋಪಿಗಳು. ಆರೋಪಿಗಳ ಬಳಿ ಇದ್ದ 2.6 ಲಕ್ಷ ರೂ. ಮೌಲ್ಯದ ಎಮ್​ಡಿಎಮ್​ಎ ಡ್ರಗ್​ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಮಂಗಳೂರಿನ ವಿವಿಧ ಪ್ರದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು. ಹೀಗೆ ಸುರತ್ಕಲ್​​​ನ ತಡಂಬೈಲ್ ಬೀಚ್ ಬಳಿ ಕಾರಿನಲ್ಲಿ ನಿಷೇಧಿತ ಎಮ್​ಡಿಎಮ್​ಎ ಮಾರುವಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಆರೋಪಿಗಳ ವಿರುದ್ಧ ಈ ಹಿಂದೆ ಕೊಲೆಯತ್ನ, ಹಲ್ಲೆ, ಸರಗಳ್ಳತನ, ಮನೆಗಳ್ಳತನ, ವಾಹನ ಕಳ್ಳತನದಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿದ್ದವು.

ಇದನ್ನೂ ಓದಿ: ಗಾಂಜಾ ಮತ್ತಲ್ಲಿ ಯುವಕನ ದಾಂಧಲೆ: ಸಿನಿಮಿಯ ರೀತಿಯಲ್ಲಿ ಲಾಕ್ ಮಾಡಿದ ಮಂಗಳೂರು ಪೊಲೀಸ್​​​​; ವಿಡಿಯೋ ವೈರಲ್​​

26 ದಿನಗಳಲ್ಲಿ 40 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಇನ್ನು ಮಂಗಳೂರು ಪೊಲೀಸರು ಕಳೆದ 26 ದಿನಗಳಲ್ಲಿ 40 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಇದರಲ್ಲಿ ನಿಷೇಧಿತ ಎಮ್​ಡಿಎಮ್​ಎ ಡ್ರಗ್ ಪಾಲು ಹೆಚ್ಚಾಗಿತ್ತು. ಹಾಗೇ ಪೊಲೀಸರು ಹತ್ತು ಪ್ರಕರಣದಲ್ಲಿ ಒಟ್ಟು 22 ಜನ ಪೆಡ್ಲರ್​ಗಳನ್ನು ಬಂಧಿಸಿದ್ದರು.

ಈ ಆರೋಪಿಗಳು ಬೆಂಗಳೂರಿನಿಂದ ಎಮ್​ಡಿಎಮ್​ಎ ಡ್ರಗ್ ಖರೀದಿಸಿ ತಂದು ಕರಾವಳಿ, ಕೇರಳ ಭಾಗದಲ್ಲಿ ಮಾರಾಟ ಮಾಡುತ್ತಿದ್ದರು. ಸದ್ಯ ನಗರ ಪೊಲೀಸರು ಈ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾ ಇನ್ನು ಹಲವರಿಗಾಗಿ ಶೋಧ ನಡೆಸುತ್ತಿದ್ದು, ಶೀಘ್ರದಲ್ಲೇ ಬಂಧಿಸಿ ಜೈಲಿಗೆ ಅಟ್ಟಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 am, Mon, 28 August 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ