ಮಂಗಳೂರಿನಲ್ಲಿ ಇ-ರಿಕ್ಷಾ ನೋಂದಣಿಗೆ ಅಡ್ಡಿ: ಹೊಸ ಆಟೋ ಬುಕ್ ಮಾಡಿದವರು ಅತಂತ್ರ!

Mangaluru News: ಕಡಲನಗರಿ ಮಂಗಳೂರಿನಲ್ಲಿ ಇ-ಅಟೋ ಬುಕ್ ಮಾಡಿದವರು ಸಂಕಷ್ಟ ಅನುಭವಿಸುವಂತಾಗಿದೆ. ತಾವು ಖರೀದಿಸಿದ ಆಟೋಗಳನ್ನು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ.

ಮಂಗಳೂರಿನಲ್ಲಿ ಇ-ರಿಕ್ಷಾ ನೋಂದಣಿಗೆ ಅಡ್ಡಿ: ಹೊಸ ಆಟೋ ಬುಕ್ ಮಾಡಿದವರು ಅತಂತ್ರ!
ಇ-ರಿಕ್ಷಾ ನೋಂದಣಿಗೆ ಸಂಕಷ್ಟ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 06, 2023 | 9:31 PM

ಮಂಗಳೂರು, ಆಗಸ್ಟ್​ 06: ಇಂಧನ ಉಳಿತಾಯದ ಜೊತೆಗೆ ಪರಿಸರ ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ಸರ್ಕಾರ ಇಲೆಕ್ಟ್ರಿಕ್ ವಾಹನ (Electric vehicle) ಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.‌ ಆದರೆ ಕಡಲನಗರಿ ಮಂಗಳೂರಿನಲ್ಲಿ ಇ-ಅಟೋ ಬುಕ್ ಮಾಡಿದವರು ಸಂಕಷ್ಟ ಅನುಭವಿಸುವಂತಾಗಿದೆ. ತಾವು ಖರೀದಿಸಿದ ಆಟೋಗಳನ್ನು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದೆ ಪರದಾಡುವಂತಾಗಿದೆ.

ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್ ಚಾಲಿತ ಹೊಸ ವಾಹನಗಳು ರಸ್ತೆಗಿಳಿಯುವ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಇಂಧನದ ಕೊರತೆ ಉಂಟಾಗುದರ ಜೊತೆ ವಾತವಾರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಾಗಿ ಉಸಿರಾಡುವುದಕ್ಕೆ ಶುದ್ದ ಗಾಳಿ ಇಲ್ಲದಂತಾಗುತ್ತದೆ. ಹೀಗಾಗಿ ಸದ್ಯ ಇಲೆಕ್ಟ್ರಿಕ್ ವಾಹನಗಳ ಖರೀದಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತಿದೆ. ಇದಕ್ಕಾಗಿ ಸರ್ಕಾರವು ಸಹ ಇಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಪೋರ್ಟ್ ಸಹ ನೀಡುತ್ತಿದೆ. ಆದರೆ ಮಂಗಳೂರಿನಲ್ಲಿ ಇದಕ್ಕೆ ತದ್ವಿರುದ್ಧ ಎಂಬಂತೆ ಕಳೆದ ನವೆಂಬರ್‌ನಿಂದ ಇವರೆಗೆ ಪರಿಸರ ಸ್ನೇಹಿ ಇಲೆಕ್ಟ್ರಿಕ್ ಆಟೋಗಳ ನೋಂದಣಿಯೇ ಆಗುತ್ತಿಲ್ಲ.

ಇದನ್ನೂ ಓದಿ: ಪ್ರಯಾಣಿಕರನ್ನು ಬೆಂಗಳೂರು ನಿಲ್ದಾಣದಲ್ಲೇ ಬಿಟ್ಟು ಮಂಗಳೂರಿಗೆ ಹಾರಿದ ಇಂಡಿಗೋ ವಿಮಾನ, ಮುಂದೇನಾಯ್ತು?

ಮಂಗಳೂರು ನಗರದಲ್ಲಿ ಈಗಾಗಲೇ 7 ಸಾವಿರಕ್ಕೂ ಅಧಿಕ ಆಟೋಗಳು ಇದ್ದು ಹೀಗಾಗಿ ನಗರದಲ್ಲಿ ಹೊಸ ಅಟೋಗಳಿಗೆ ಅನುಮತಿ ನೀಡಬಾರದು ಎಂದು ಕೆಲ ಆಟೋ ಯೂನಿಯನ್‌ಗಳು ಪ್ರತಿಭಟನೆ ನಡೆಸಿದ್ದವು. ಈ ಬಗ್ಗೆ ಕ್ರಮ ವಹಿಸಿದ ಪ್ರಾದೇಶಿಕ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾಧಿಕಾರಿಗಳು ನಗರ ಭಾಗದಲ್ಲಿ ಹೊಸ ಆಟೋಗಳಿಗೆ ನೋಂದಣಿಗೆ ಅವಕಾಶ ಇಲ್ಲ ಎಂಬ ಆದೇಶ ಹೊರಡಿಸಿದರು. ಆ ಬಳಿಕದಿಂದ ಈ ಸಮಸ್ಯೆ ಉದ್ಭವವಾಗಿದ್ದು ಇದರಿಂದ ಹೊಸ ಇ-ಆಟೋ ಬುಕ್ ಮಾಡಿದವರು ಇತ್ತ ರಿಕ್ಷಾ ನೋಂದಣಿಯು ಸಾಧ್ಯವಾಗದೆ ಅತ್ತ ಸಾಲದ ಕಂತು ಪಾವತಿಸಲು ಸಾಧ್ಯವಾಗದೆ ಸಮಸ್ಯೆಯ ಸುಲಿಯಲ್ಲಿ ಸಿಲುಕಿದ್ದಾರೆ.

ಮಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ವಲಯ 1 ಹಾಗೂ ವಲಯ 2 ಎಂಬ ವಿಭಾಗ ಮಾಡಿದ್ದಾರೆ. ವಲಯ 1ರಲ್ಲಿ ಅನುಮತಿ ಪಡೆದ ಆಟೋಗಳು ನಗರದಲ್ಲಿ ಮಾತ್ರ ಬಾಡಿಗೆ ಮಾಡಬೇಕು. ವಲಯ 2 ಅಡಿ ನೋಂದಣಿ ಮಾಡಿದ ಆಟೋಗಳು ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಬಾಡಿಗೆ ಮಾಡಬೇಕೆಂಬ ನಿಯಮವನ್ನು ಮಾಡಿದ್ದಾರೆ. ಆದರೆ ಸದ್ಯ ಇ ಆಟೋ‌ ಸೇರಿದಂತೆ ಹೊಸ‌‌ ಆಟೋಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಅನುಮತಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಗ್ರಾಹಕರಿಗೆ ಶಾಕ್: ಮಂಗಳೂರಿನಲ್ಲಿಯೂ ಹೋಟೆಲ್ ತಿಂಡಿ, ತಿನಿಸು ದುಬಾರಿ, ಶೇ 10ರ ದರ ಹೆಚ್ಚಳ

ಆದರೆ ಇ-ಆಟೋಗಳು ನಗರದಲ್ಲಿ ಓಡಿಸುವುದು ಸುಲಭವಾಗಿದ್ದು ನೋಂದಣಿಗೆ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದ್ದು ಈ ನೀತಿಯ ವಿರುದ್ದ ಇಲೆಕ್ಟ್ರಿಕ್ ಆಟೋ ಡೀಲರ್‌ಗಳು ಹೈಕೋರ್ಟ್ ಮೊರೆ ಹೋಗಿದ್ದಾರೆ. ಸದ್ಯ ಈ ಹಿಂದಿನ ಆಟೋ ಯೂನಿಯನ್ ಮತ್ತು ಆಟೋ ಡೀಲರ್ಸ್‌ಗಳ ನಡುವೆ ಕಾನೂನು ಹೋರಾಟ ನಡೆಯುತ್ತಿದ್ದು ತೀರ್ಪಿಗಾಗಿ ಕಾಯಲಾಗುತ್ತಿದೆ. ಇನ್ನು ಈ ವಿಚಾರ ದಕ್ಷಿಣಕನ್ನಡ ಜಿಲ್ಲೆಯ ನೂತ‌ನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಗಮನಕ್ಕೂ ಬಂದಿದ್ದು ಪ್ರಾದೇಶಿಕ ಪ್ರಾಧಿಕಾರದ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ.

ಈಗಾಗಲೇ ಮಂಗಳೂರಿನಲ್ಲಿ ಸುಮಾರು 400 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಆಟೋಗಳ ನೋಂದಣಿಯಾಗಿದೆ. ಆದ್ರೆ ನವೆಂಬರ್ ಬಳಿಕದಿಂದ ಯಾವುದೇ ನೋಂದಣಿ ಆಗಿಲ್ಲ. ಒಟ್ಟಿನಲ್ಲಿ ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಿ ಎಲ್ಲರಿಗೂ ಸಮಾನವಾಗಿ‌ ದುಡಿಯುವ ಅವಕಾಶವನ್ನು ಕಲ್ಪಿಸಿಕೊಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭಾರತದ ವಿಶ್ವಕಪ್ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು
ಭಾರತದ ವಿಶ್ವಕಪ್ ಹೀರೋಗೆ ಹುಟ್ಟುಹಬ್ಬದ ಶುಭಾಶಯಗಳು
Daily Devotional: ನಿಸ್ವಾರ್ಥ ಸೇವೆಯ ಫಲ ಹೇಗಿರುತ್ತದೆ? ಈ ವಿಡಿಯೋ ನೋಡಿ
Daily Devotional: ನಿಸ್ವಾರ್ಥ ಸೇವೆಯ ಫಲ ಹೇಗಿರುತ್ತದೆ? ಈ ವಿಡಿಯೋ ನೋಡಿ
ಈ ರಾಶಿಯವರಿಗೆ ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು
ಈ ರಾಶಿಯವರಿಗೆ ಬಂಧುಗಳ ಸಂಪತ್ತು ಕಾರಣಾಂತರಗಳಿಂದ ನಿಮಗೆ ಸಿಗಬಹುದು
ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟ ಕರಿ ಚಿರತೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಮನೆ ಅಂಗಳಕ್ಕೆ ಎಂಟ್ರಿ ಕೊಟ್ಟ ಕರಿ ಚಿರತೆ; ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ
ಸಿದ್ರಾಮಯ್ಯ ಕಾರು ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸ್
ಸಿದ್ರಾಮಯ್ಯ ಕಾರು ಬರ್ತಿದ್ದಂತೆ ನುಗ್ಗಿಬಂದ ವ್ಯಕ್ತಿ; ವಶಕ್ಕೆ ಪಡೆದ ಪೊಲೀಸ್
ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್
ಹಂಸಾ, ಜಗದೀಶ್ ಬಗ್ಗೆ ನೇರವಾಗಿ ಮಾತಾಡಿದ ಧನರಾಜ್; ಕಿಚ್ಚ ಸುದೀಪ್​ಗೂ ಶಾಕ್
ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ ದೂರಿನ ಬಗ್ಗೆ ಕುಮಾರಸ್ವಾಮಿ ಖಡಕ್ ಮಾತು
ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ ದೂರಿನ ಬಗ್ಗೆ ಕುಮಾರಸ್ವಾಮಿ ಖಡಕ್ ಮಾತು
ಐಶ್ವರ್ಯಾ, ಧರ್ಮ, ಅನುಷಾ ಲವ್ ಸ್ಟೋರಿ ಚರ್ಚೆ; ಹಳೇ ವಿಷಯ ತೆಗೆದ ಸುರೇಶ್
ಐಶ್ವರ್ಯಾ, ಧರ್ಮ, ಅನುಷಾ ಲವ್ ಸ್ಟೋರಿ ಚರ್ಚೆ; ಹಳೇ ವಿಷಯ ತೆಗೆದ ಸುರೇಶ್
ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್
ಕರ್ನಾಟಕದ ಹುಲಿ ಕುಣಿತ ಕಂಡು ತಲೆ ದೂಗಿದ ಬಾಲಿವುಡ್ ಬಾಬ ಸಂಜಯ್ ದತ್
ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ
ಜಗದೀಶ್-ಹಂಸಾ ಡುಯೆಟ್, ವಕೀಲರ ಮನಸು ಗೆಲ್ಲೋ ಪ್ರಯತ್ನದಲ್ಲಿ ಹಂಸಾ