Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರಾವಳಿ ಜಿಲ್ಲೆಗಳಲ್ಲಿ ಸ್ಪಂದನೆ ಇಲ್ಲದೆ ನೆನೆಗುದಿಗೆ ಬಿದ್ದ ಕಾರವಾನ್​​ ಪ್ರವಾಸ

ಕಾರವಾನ್ ಪ್ರವಾಸೋದ್ಯಮವು ಕುಟುಂಬ ಪ್ರವಾಸಕ್ಕೆ ಹೆಚ್ಚು ಉತ್ತೇಜನೆ ನೀಡುತ್ತದೆ. ಕಾರವಾನ್​​ನಲ್ಲಿ ಮಲಗುವ ಕೋಣೆಗಳು ಮತ್ತು ಅಡಿಗೆಮನೆಗಳನ್ನು ಒಳಗೊಂಡಂತೆ ಪ್ರಯಾಣಕ್ಕಾಗಿ ಬೇಕಾದ ಮೂಲಭೂತ ಸೌಕರ್ಯಗಳು ಇದರಲ್ಲಿ ದೊರೆಯುತ್ತದೆ. ಹೀಗಾಗಿ ಕಾರವಾನ್​ ಪ್ರವಾಸ ಆರಾಮದಾಯಕವಾಗಿದೆ.

ಕರಾವಳಿ ಜಿಲ್ಲೆಗಳಲ್ಲಿ ಸ್ಪಂದನೆ ಇಲ್ಲದೆ ನೆನೆಗುದಿಗೆ ಬಿದ್ದ ಕಾರವಾನ್​​ ಪ್ರವಾಸ
ಕಾರವಾನ್​ ಬಸ್​
Follow us
TV9 Web
| Updated By: ವಿವೇಕ ಬಿರಾದಾರ

Updated on: Sep 20, 2023 | 2:38 PM

ಮಂಗಳೂರು ಸೆ.20: ಕರಾವಳಿ ಪ್ರವಾಸೋದ್ಯಮವನ್ನು (Coastal Tourism) ಉತ್ತ್ತೇಜಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ (Tourism Department) ಪ್ರಮುಖ ಕಾರವಾನ್​ (ಬಸ್​​)​ ಪ್ರವಾಸ ಯೋಜನೆ ನೆನೆಗುದಿಗೆ ಬಿದ್ದಿದೆ. ಪ್ರವಾಸೋದ್ಯಮ ಇಲಾಖೆ ಕಾರವಾನ್​​ ಪ್ರಸ್ತಾಪವನ್ನು ಮುಂದಿಟ್ಟರೂ, ಇಂಥಾ ಸೇವೆಗಳನ್ನು ಆರಂಭಿಸುವುದಕ್ಕೆ ಯಾರೊಬ್ಬರೂ ಮುಂದೆ ಬಂದಿಲ್ಲ. ರಾಜ್ಯ ಸರ್ಕಾರವು (Karnataka Government) ಸೌಲಭ್ಯಗಳನ್ನು ಒದಗಿಸಿದರೆ ಮತ್ತು ಕಾರವಾನ್ ಪ್ರವಾಸೋದ್ಯಮಕ್ಕೆ ಮೂಲಸೌಕರ್ಯವನ್ನು ನೀಡಿದರೇ ಅನೇಕ ಜನರು ಬರುತ್ತಾರೆ. ಪ್ರಸ್ತಾವನೆಯು ಇನ್ನೂ ಆರಂಭಿಕ ಹಂತದಲ್ಲಿದೆ. ಮತ್ತು ಕಾರವಾನ್ ಪ್ರವಾಸೋದ್ಯಮದಿಂದ ಕರಾವಳಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನವನ್ನು ಸಿಗುತ್ತದೆ.

ಕಾರವಾನ್ (ಬಸ್​​) ಪ್ರವಾಸೋದ್ಯಮವು ಕುಟುಂಬ ಪ್ರವಾಸಕ್ಕೆ ಹೆಚ್ಚು ಉತ್ತೇಜನೆ ನೀಡುತ್ತದೆ. ಕಾರವಾನ್​​ನಲ್ಲಿ ಮಲಗುವ ಕೋಣೆಗಳು ಮತ್ತು ಅಡಿಗೆಮನೆಗಳನ್ನು ಒಳಗೊಂಡಂತೆ ಪ್ರಯಾಣಕ್ಕಾಗಿ ಬೇಕಾದ ಮೂಲಭೂತ ಸೌಕರ್ಯಗಳು ಇದರಲ್ಲಿ ದೊರೆಯುತ್ತದೆ. ಹೀಗಾಗಿ ಕಾರವಾನ್​ ಪ್ರವಾಸ ಆರಾಮದಾಯಕವಾಗಿದೆ.

ದಕ್ಷಿಣ ಕನ್ನಡ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಾಣಿಕ್ಯ ಮಾತನಾಡಿ, ಒಂದು ವರ್ಷದ ಹಿಂದೆ ಕಾರವಾನ್ ಪ್ರವಾಸಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಎರಡರಿಂದ ಮೂರು ಅರ್ಜಿಗಳು ಹೊರತುಪಡಿಸಿ, ಹೆಚ್ಚು ಅರ್ಜಿಗಳು ಬರಲಿಲ್ಲ. ಹೀಗಾಗಿ ಕಾರವಾನ್ ಪ್ರವಾಸೋದ್ಯಮದ ಬಗ್ಗೆ ಮತ್ತೊಮ್ಮೆ ಹೆಚ್ಚು ಪ್ರಚಾರ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Womens Day 2023: ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಿದ ಕರ್ನಾಟಕ ಪ್ರವಾಸೋದ್ಯಮ ಇಲಾಖೆ

ಕಾರವಾನ್ ವಾಹನಗಳ ಜೊತೆಗೆ, ರಾಜ್ಯ ಸರ್ಕಾರವು ಕಾರವಾನ್ ಪಾರ್ಕ್ ನಿರ್ಮಿಸಲು ಪ್ರಸ್ತಾಪಿಸಿದೆ. ಕಾರವಾನ್ ವಾಹನಗಳನ್ನು ರಾತ್ರಿಯಿಡೀ ನಿಗದಿಪಡಿಸಿದ ಜಾಗಗಳಲ್ಲಿ ನಿಲುಗಡೆ ಮಾಡಬಹುದಾಗಿದೆ. ಕನಿಷ್ಠ ಐದು ಪಾರ್ಕ್​​ಗಳನ್ನು ನಿರ್ಮಿಸುವ ಚಿಂತನೆ ಇದೆ. ಈ ಪಾರ್ಕ್​​ಗಾಗಿ ಕನಿಷ್ಠ ಅರ್ಧ ಎಕರೆ ಜಾಗ ಬೇಕಾಗಿದ್ದು, ಯಾರಾದರೂ ಕಾರವಾನ್ ಪಾರ್ಕ್ ಅನ್ನು ಅಭಿವೃದ್ಧಿಪಡಿಸಬಹುದು.

ಈ ಪಾರ್ಕ್​ ವಿದೇಶಿ ಮತ್ತು ಭಾರತೀಯ ಪ್ರಜೆಗಳಿಗೆ ಹೊಂದುವಂತೆ ಇರಬೇಕು. ಮೂಲಭೂತ ಸೌಲಭ್ಯ ಹೊಂದಿದರಬೇಕು. ಈ ಪಾರ್ಕ್​ ನಿರ್ಮಾಣಕ್ಕೆ ಯಾರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ. ಕಾರವಾನ್ ಪಾರ್ಕ್‌ಗಳು ಬೀಚ್ ಪಕ್ಕದಲ್ಲಿ ವಿಶೇಷವಾಗಿ ಸಾಕಷ್ಟು ಸೌಲಭ್ಯಗಳು, ಭದ್ರತೆ ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಸ್ಥಳಗಳಲ್ಲಿ ನಿರ್ಮಾಣ ಮಾಡಬೇಕು.

ಉದಾಹರಣೆಗೆ, ಬ್ಲೂ ಫ್ಲಾಗ್​ ಬೀಚ್​ ಪಕ್ಕದಲ್ಲಿ ಕಾರವಾನ್ ಪಾರ್ಕ್​​ ನಿರ್ಮಿಸಿದರೇ​ ಒಳ್ಳೆಯದು ಏಕೆಂದರೇ ಈ ಸ್ಥಳಗಳು ವಾಶ್‌ರೂಮ್‌ ಮತ್ತು ಸೆಕ್ಯುರಿಟಿ ಎರಡನ್ನೂ ಹೊಂದಿದೆ. ಮತ್ತು ಬೀಚ್‌ಗಳಿಗೆ ಹತ್ತಿರದಲ್ಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಅದು ಪರ್ಸನಲ್ ವಿಷಯ: ದರ್ಶನ್ ಜೀವನದ ಬದಲಾವಣೆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕಷ್ಟದಲ್ಲಿ ಬಿಟ್ಟುಹೋಗುವವನು ನಾನಲ್ಲ: ದರ್ಶನ್ ಸ್ನೇಹದ ಬಗ್ಗೆ ಧನ್ವೀರ್ ಮಾತು
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಕೇವಲ 33 ದಿನಗಳಲ್ಲಿ ಝೋಜಿಲಾ ಪಾಸ್ ಓಪನ್; ಲಡಾಖ್ ಸಂಪರ್ಕ ಈಗ ಇನ್ನಷ್ಟು ಸುಲಭ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ