ಜಾಲಿ ನಗರದಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ, ಇದು ನಿತ್ಯ ಹತ್ತಾರು ಕೇಸ್​ಗಳ ಹಾಟ್​ಸ್ಪಾಟ್​

  • TV9 Web Team
  • Published On - 19:48 PM, 5 Jun 2020
ಜಾಲಿ ನಗರದಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ, ಇದು ನಿತ್ಯ ಹತ್ತಾರು ಕೇಸ್​ಗಳ ಹಾಟ್​ಸ್ಪಾಟ್​

ದಾವಣಗೆರೆ: ಬೆಣ್ಣೆ ನಗರ ದಾವಣಗೆರೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂದಿಗೆ ಬರೋಬ್ಬರಿ 180 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 94 ಜನ ಜಾಲಿ ನಗರ ಒಂದೇ ಒಂದು ಕಂಟೈನ್​ಮೆಂಟ್​ ಜೋನ್​ನಲ್ಲಿ ಇದ್ದಾರೆ ಅಂದ್ರೆ ಆಶ್ಚರ್ಯವಾಗುತ್ತಿದೆ. ಏಪ್ರಿಲ್ 30ಕ್ಕೆ ಇಲ್ಲೊಬ್ಬ 69 ವರ್ಷದ ವೃದ್ಧನಿಗೆ ಸೋಂಕು ಪತ್ತೆ ಆಯಿತು. ಹೀಗೆ ಪತ್ತೆ ಆಗಿದ್ದೇ ತಡ ಆ ವೃದ್ಧನ ಸಂಪರ್ಕದಲ್ಲಿ ಬರೋಬ್ಬರಿ 36 ಜನ ಇದ್ದರು. ಉಳಿದವರ ಸಂಪರ್ಕದಲ್ಲಿ ಒಂದಿಷ್ಟು ಹೀಗೆ ಜಾಲಿ ನಗರದ ಜಾಡು ಬೆಳೆಯುತ್ತಲೇ ಇದೆ.

ವಿಚಿತ್ರ ಅಂದ್ರೆ ಈ ಜಾಲಿ ನಗರಕ್ಕೆ ಸೋಂಕು ಎಲ್ಲಿಂದ ಬಂತು ಎಂಬುದು ಇನ್ನು ಪತ್ತೆಯಾಗಿಲ್ಲ. ಆದ್ರೆ ನಿತ್ಯ ಜಾಲಿ ನಗರದಲ್ಲಿ ಜನರಿಗೆ ಸೋಂಕು ಅಂಟಿಕೊಳ್ಳುತ್ತಲೇ ಇದೆ. ಅತಿ ಹೆಚ್ಚು ಮಹಿಳೆಯರನ್ನೇ ಟಾರ್ಗೆಟ್ ಮಾಡಿದೆ. 94 ಕೊರೊನಾ ಸೋಂಕಿತರಲ್ಲಿ 63 ಮಂದಿ ಮಹಿಳೆಯರು ಮತ್ತು ಮಕ್ಕಳೆ ಸೇರಿದ್ದಾರೆ.

ಬಗೆದಷ್ಟು ಚಿನ್ನ ಎನ್ನುವಂತೆ ಬೆಣ್ಣೆ ನಗರಿಯ ಜಾಲಿ ನಗರದಲ್ಲಿ ಅಗೆದಷ್ಟು ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ನಗರದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಸುಮಾರು 57 ಸಾವಿರ ಜನರ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಜೊತೆಗೆ ಸೋಂಕಿನ ಲಕ್ಷಣ ಇರುವ 715 ಜನ ಗಂಟಲು ದ್ರವ ಸಂಗ್ರಹಿಸಿದ್ದಾರೆ. ಇವರಲ್ಲಿ 94 ಜನರು ಪಾಸಿಟಿವ್ ಬಂದಿದ್ದು ನಿರಂತರವಾಗಿ ಪ್ರಕರಣಗಳು ಬರುತ್ತಲೇ ಇವೆ.