ಕೊರೊನಾಗೆ ವೃದ್ಧೆಯರು ಬಲಿ: ವೈದ್ಯ ಸಿಬ್ಬಂದಿಗೆ ಡಿಸಿಯಿಂದ ನೋಟಿಸ್
ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಗೆ ವೃದ್ಧೆಯರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಕಾರಣ ಕೇಳಿ ವೈದ್ಯ ಸಿಬ್ಬಂದಿಗೆ ಡಿಸಿ ನೋಟಿಸ್ ನೀಡಿದ್ದಾರೆ. ಆಸ್ಪತ್ರೆಯಲ್ಲಿ ವೃದ್ಧೆಯರನ್ನ ಭರ್ತಿ ಮಾಡಿಕೊಳ್ಳಲು ವಿಳಂಬ ಮಾಡಿದ ಕಾರಣ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ವೈದ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೋಟಿಸ್ ನೀಡಿದ್ದಾರೆ. ಮೇ 28 ಹಾಗೂ ಮೇ 31 ರಂದು ದಾವಣಗೆರೆಯಲ್ಲಿ ಕೊರೊನಾ ಸೋಂಕಿಗೆ ಇಬ್ಬರು ವೃದ್ಧೆಯರು ಬಲಿಯಾಗಿದ್ದರು. ಈ ಸೋಂಕಿತರ ಸಾವಿಗೆ ವೈದ್ಯರ ಬೇಜವಾಬ್ದಾರಿತನವೇ ಕಾರಣ ಎಂಬ ಆರೋಪಗಳು ಕೇಳಿ […]
ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾಗೆ ವೃದ್ಧೆಯರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿ ಕಾರಣ ಕೇಳಿ ವೈದ್ಯ ಸಿಬ್ಬಂದಿಗೆ ಡಿಸಿ ನೋಟಿಸ್ ನೀಡಿದ್ದಾರೆ. ಆಸ್ಪತ್ರೆಯಲ್ಲಿ ವೃದ್ಧೆಯರನ್ನ ಭರ್ತಿ ಮಾಡಿಕೊಳ್ಳಲು ವಿಳಂಬ ಮಾಡಿದ ಕಾರಣ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ವೈದ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೋಟಿಸ್ ನೀಡಿದ್ದಾರೆ.
ಮೇ 28 ಹಾಗೂ ಮೇ 31 ರಂದು ದಾವಣಗೆರೆಯಲ್ಲಿ ಕೊರೊನಾ ಸೋಂಕಿಗೆ ಇಬ್ಬರು ವೃದ್ಧೆಯರು ಬಲಿಯಾಗಿದ್ದರು. ಈ ಸೋಂಕಿತರ ಸಾವಿಗೆ ವೈದ್ಯರ ಬೇಜವಾಬ್ದಾರಿತನವೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ. ಸೋಂಕಿತರನ್ನ ಸಕಾಲಕ್ಕೆ ಆಸ್ಪತ್ರೆಗೆ ಭರ್ತಿ ಮಾಡಿಕೊಂಡಿದ್ದರೆ ಆ ಹಿರಿಯ ಜೀವಗಳು ಉಳಿಯಬಹುದಿತ್ತು ಎಂದು ಹೇಳಲಾಗುತ್ತಿದೆ.
ಹೀಗಾಗಿ ವಿಳಂಬಕ್ಕೆ ಕಾರಣ ಕೇಳಿ ವೈದ್ಯ ಸಿಬ್ಬಂದಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನೋಟಿಸ್ ನೀಡಿದ್ದಾರೆ. 83 ವರ್ಷದ P-4093 ದಾವಣಗೆರೆ ಬಸವರಾಜಪೇಟೆಯ ವೃದ್ಧೆ ಹಾಗೂ 80 ವರ್ಷದ P-3861 ಜಾಲಿನಗರದ ವೃದ್ಧೆ ಮೃತಪಟ್ಟವರು.
Published On - 12:55 pm, Fri, 5 June 20