AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ

ಧರ್ಮೇಂದ್ರ ಅವರ ನಿಧನದ ನಂತರ, ಹೇಮಾ ಮಾಲಿನಿಯನ್ನು ಕುಟುಂಬದ ಸಂತಾಪ ಸಭೆಯಿಂದ ದೂರವಿಡಲಾಯಿತು. 45 ವರ್ಷಗಳ ಒಡನಾಟವಿದ್ದರೂ, ಅವರ ಅನುಪಸ್ಥಿತಿಯು ಡಿಯೋಲ್ ಕುಟುಂಬದಲ್ಲಿನ ಭಿನ್ನಾಭಿಪ್ರಾಯಗಳನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ಬರಹಗಾರ್ತಿ ಶೋಭಾ ಡೇ ಡಿಯೋಲ್ ಕುಟುಂಬದ ನಿರ್ಧಾರವನ್ನು ಪ್ರಶ್ನಿಸಿ, ಹೇಮಾ ಮಾಲಿನಿಯ ಮೌನ ಮತ್ತು ಘನತೆಯನ್ನು ಶ್ಲಾಘಿಸಿದ್ದಾರೆ. ಈ ಘಟನೆ ಬಾಲಿವುಡ್‌ನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ
ಧರ್ಮೇಂದ್ರ ಕುಟುಂಬ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 19, 2025 | 11:09 AM

Share

ನಟ ಧರ್ಮೇಂದ್ರ ಮತ್ತು ನಟಿ ಹೇಮಾ ಮಾಲಿನಿ 45 ವರ್ಷಗಳ ಕಾಲ ಒಟ್ಟಿಗೆ ಇದ್ದವರು. ಧರ್ಮೇಂದ್ರ ನವೆಂಬರ್ 24 ರಂದು ಕೊನೆಯುಸಿರೆಳೆದರು. ನಂತರ ನವೆಂಬರ್ 27 ರಂದು, ಡಿಯೋಲ್ ಕುಟುಂಬವು ಹೇಮಾ ಮಾಲಿನಿಯನ್ನು ನಿರ್ಲಕ್ಷಿಸಿ ಸಂತಾಪ ಸೂಚಿಸುವ ಸಭೆಯನ್ನು ಆಯೋಜಿಸಿತು. ಹೇಮಾ ಮಾಲಿನಿ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳು ಸಹ ಸಂತಾಪ ಸೂಚಿಸುವ ಸಭೆಯಲ್ಲಿ ಕಾಣಿಸಲಿಲ್ಲ. ಅಷ್ಟೇ ಅಲ್ಲ, ಅಂತ್ಯಕ್ರಿಯೆ ನಡೆಯುತ್ತಿರುವಾಗ ಹೇಮಾ ಮಾಲಿನಿ ನೇರವಾಗಿ ಸ್ಮಶಾನಕ್ಕೆ ತಲುಪಿದರು. ಧರ್ಮೇಂದ್ರ ಅವರ ಎರಡು ಕುಟುಂಬಗಳ ನಡುವೆ ಭಿನ್ನಾಭಿಪ್ರಾಯಗಳಿರುವುದಕ್ಕೆ ಇದಕ್ಕೆ ಕಾರಣ. ಈಗ ಬರಹಗಾರ್ತಿ ಶೋಭಾ ಡೇ ಈ ಬಗ್ಗೆ ಮಾತನಾಡಿದ್ದಾರೆ.

ಶೋಭಾ ಡೇ ಅವರು ಬರ್ಖಾ ದತ್ ಅವರೊಂದಿಗಿನ ಸಂದರ್ಶನದಲ್ಲಿ ಡಿಯೋಲ್ ಕುಟುಂಬದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಶೋಭಾ. ‘ಈ ನಿರ್ಧಾರವು ತುಂಬಾ ಜಟಿಲ ಮತ್ತು ಕಷ್ಟಕರವಾಗಿದ್ದಿರಬೇಕು. ಧರ್ಮೇಂದ್ರ ಅವರ ಕುಟುಂಬವು ಹೇಮಾ ಮಾಲಿನಿಯನ್ನು ಎಲ್ಲದರಿಂದ ದೂರವಿಟ್ಟಿತು. ಹೇಮಾ ಮಾಲಿನಿ ತಮ್ಮ ಜೀವನದ 45 ವರ್ಷಗಳನ್ನು ಕಳೆದ ವ್ಯಕ್ತಿ. ಅವರು ಪ್ರೀತಿಸಿದ ವ್ಯಕ್ತಿ. ಅವರ ಜೀವನವನ್ನು ಶ್ರೀಮಂತಗೊಳಿಸಿದ ವ್ಯಕ್ತಿ. ಆದರೆ, ಈಗ ಹೇಮಾ ಮಾಲಿನಿ ಅವರನ್ನು ಡಿಯೋಲ್ ಕುಟುಂ ಎಲ್ಲದರಿಂದ ದೂರವಿಟ್ಟರು’ ಎಂದಿದ್ದಾರೆ ಶೋಭಾ.

‘ಧರ್ಮೇಂದ್ರ ಮತ್ತು ಹೇಮಾ ಮಾಲಿನಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇಡೀ ಪರಿಸ್ಥಿತಿ ಅವರಿಗೆ ತುಂಬಾ ಭಯಾನಕವಾಗಿದ್ದಿರಬೇಕು. ಆದರೆ ಅವರು ಎಲ್ಲವನ್ನೂ ತಮ್ಮ ಖಾಸಗಿ ಜೀವನದಲ್ಲಿಯೇ ಇಟ್ಟುಕೊಂಡಿದ್ದರು. ಅವರು ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಅವರು ಯಾವುದೇ ಸಾರ್ವಜನಿಕ ಕಾರ್ಯಕ್ರಮವನ್ನು ಮಾಡಿದಾಗಲೆಲ್ಲಾ, ಅವರು ಅದನ್ನು ಅತ್ಯಂತ ಘನತೆಯಿಂದ ಮಾಡಿದರು ಎಂದು ನಾನು ಭಾವಿಸುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ: ಧರ್ಮೇಂದ್ರ ನಿಧನದ ನೋವು: ಭಾವುಕವಾಗಿ ಫೋಟೋ ಹಂಚಿಕೊಂಡ ಹೇಮಾ ಮಾಲಿನಿ

‘ಹೇಮಾ ಮಾಲಿನಿ ಸ್ವತಃ ಪ್ರಭಾವಿ ವ್ಯಕ್ತಿ, ಆದ್ದರಿಂದ ಸಾರ್ವಜನಿಕ ಪ್ರದರ್ಶನಗಳ ಮೂಲಕ ತನ್ನ ಶ್ರೇಷ್ಠತೆಯನ್ನು ಪ್ರದರ್ಶಿಸುವ ಬದಲು ತನ್ನ ಘನತೆಯನ್ನು ಕಾಪಾಡಿಕೊಳ್ಳುವ ಅವರ ನಿರ್ಧಾರವು ಅವರ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ಹೇಳುತ್ತದೆ. ಧರ್ಮೇಂದ್ರ ಅವರ ಮರಣದ ನಂತರ, ಹೇಮಾ ಮಾಲಿನಿ ಸಿಂಪತಿ ತೆಗೆದುಕೊಳ್ಳುವ ಅವಕಾಶ ಇತ್ತು. ಮಾಧ್ಯಮಗಳು ಸಹ ಈ ಬಗ್ಗೆ ವರದಿ ಮಾಡಲು ಬಯಸಿದ್ದವು. ಆದರೆ ಅವರು ಯಾವಾಗಲೂ ಎಲ್ಲವನ್ನೂ ರಹಸ್ಯವಾಗಿಟ್ಟರು. ಅವರು ತಮ್ಮ ಘನತೆಯನ್ನು ಉಳಿಸಿಕೊಂಡರು’ ಎಂದು ಶೋಭಾ ಡೇ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.