ಧರ್ಮೇಂದ್ರ ನಿಧನದ ನೋವು: ಭಾವುಕವಾಗಿ ಫೋಟೋ ಹಂಚಿಕೊಂಡ ಹೇಮಾ ಮಾಲಿನಿ
89ನೇ ವಯಸ್ಸಿಗೆ ನಟ ಧರ್ಮೇಂದ್ರ ಅವರು ನಿಧನರಾದರು. ಅವರ ನೆನಪಿನಲ್ಲಿ ಪತ್ನಿ ಹೇಮಾ ಮಾಲಿನಿ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಧರ್ಮೇಂದ್ರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಅವರು ಚೇತರಿಸಿಕೊಳ್ಳುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಹಾಗೆ ಆಗಲಿಲ್ಲ.
Updated on: Nov 27, 2025 | 8:22 PM

ಬಾಲಿವುಡ್ನ ಖ್ಯಾತ ಕಲಾವಿದರಾದ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರು ಮದುವೆ ಆಗಿದ್ದು 1980ರಲ್ಲಿ. ಇಷ್ಟು ವರ್ಷಗಳ ದಾಂಪತ್ಯವನ್ನು ಹೇಮಾ ಮಾಲಿನಿ ಈಗ ಮೆಲುಕು ಹಾಕಿದ್ದಾರೆ. ಅಪರೂಪದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

‘ಉತ್ತಮ ಪತಿ, ಸ್ನೇಹಿತ, ಮಾರ್ಗದರ್ಶಿ, ತತ್ವಜ್ಞಾನಿ, ಕವಿ.. ಹೀಗೆ ನನ್ನ ಪಾಲಿಗೆ ಧರ್ಮೇಂದ್ರ ಅವರು ಎಲ್ಲವೂ ಆಗಿದ್ದರು’ ಎಂದು ಹೇಮಾ ಮಾಲಿನಿ ಅವರು ಹೇಳಿದ್ದಾರೆ. ಫೋಟೋಗಳ ಮೂಲಕ ಅವರು ನೆನಪಿನ ಪುಟ ತೆರೆದಿದ್ದಾರೆ.

‘ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಜೊತೆಯಾಗಿ ನಿಂತರು. ಸ್ನೇಹಭಾವದಿಂದ ನಮ್ಮ ಕುಟುಂಬದ ಎಲ್ಲ ಸದಸ್ಯರಿಗೆ ಅವರು ಆಪ್ತರಾಗಿದ್ದರು’ ಎನ್ನುವ ಮೂಲಕ ಧರ್ಮೇಂದ್ರ ಅವರ ವ್ಯಕ್ತಿತ್ವವನ್ನು ಹೇಮಾ ಮಾಲಿನಿ ಅವರು ಹೊಗಳಿದ್ದಾರೆ.

ಚಿತ್ರರಂಗದಲ್ಲಿ ಧರ್ಮೇಂದ್ರ ಅವರು ಸಾಕಷ್ಟು ಖ್ಯಾತಿ ಗಳಿಸಿದ್ದರು. ಅಪಾರ ಜನಪ್ರಿಯತೆ ಅವರಿಗೆ ಇತ್ತು. ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಆ ಎಲ್ಲ ಕ್ಷಣಗಳನ್ನು ಹೇಮಾ ಮಾಲಿನಿ ಅವರು ಈಗ ನೆನಪಿಸಿಕೊಂಡಿದ್ದಾರೆ.

‘ಧರ್ಮೇಂದ್ರ ಅವರ ಅಗಲಿಕೆಯಿಂದ ನನಗೆ ಆದ ನಷ್ಟವನ್ನು ವಿವರಿಸಲು ಸಾಧ್ಯವಿಲ್ಲ’ ಎಂದು ಹೇಮಾ ಮಾಲಿನಿ ಅವರು ಹೇಳಿದ್ದಾರೆ. ಭಾರತೀಯ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಧರ್ಮೇಂದ್ರ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.




