ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ರೇಣುಕಾಚಾರ್ಯ, ರಾಜಕೀಯ ನಾಯಕರು; ಜನಸಾಮಾನ್ಯರಿಗೆ ಮಾತ್ರ ಕೊವಿಡ್ ನಿಯಮ?
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಳೇಶ್ವರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭಾಗವಹಿಸಿದ್ದಾರೆ.
ದಾವಣಗೆರೆ: ವೀಕೆಂಡ್ ಕರ್ಫ್ಯೂನಲ್ಲೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೊವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ ಘಟನೆಗಳು ರಾಜಕೀಯ ನಾಯಕರಿಂದ ನಡೆದಿದೆ. ಅಂಗನವಾಡಿ ಕೇಂದ್ರ ಉದ್ಘಾಟನೆ ಮಾಡಿ ಬಿಜೆಪಿ ಶಾಸಕ ರೇಣುಕಾಚಾರ್ಯ ಮತ್ತೊಮ್ಮೆ ಕೊರೊನಾ ನಿಯಮಾವಳಿ ಉಲ್ಲಂಘಿಸಿದ್ದಾರೆ. ಕಳೆದ ಬಾರಿ ವೀಕೆಂಡ್ ಕರ್ಫ್ಯೂ ವೇಳೆ ಅವರು ಕೊರೊನಾ ನಿಯಮ ಉಲ್ಲಂಘಿಸಿದ್ದು ಜನರ ಹಾಗೂ ಮೇಕೆದಾಟು ಪಾದಯಾತ್ರೆಯಲ್ಲಿ ತೊಡಗಿದ್ದ ಕಾಂಗ್ರೆಸ್ ಪಕ್ಷದ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ರೇಣುಕಾಚಾರ್ಯು ಕೊವಿಡ್ ರೂಲ್ಸ್ ಬ್ರೇಕ್ ಮಾಡಿದ್ದಾರೆ.
ಕೊವಿಡ್ ನಿಯಮ ಉಲ್ಲಂಘಿಸಿ ಅಂಗನವಾಡಿ ಉದ್ಘಾಟನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬಳೇಶ್ವರ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಭಾಗವಹಿಸಿದ್ದಾರೆ.
ದಾವಣಗೆರೆ: ವೀಕೆಂಡ್ ಕರ್ಫ್ಯೂ ನಡುವೆ ಬಿಜೆಪಿ ಶಾಸಕನ ಭರ್ಜರಿ ಬರ್ತ್ಡೇ
ವೀಕೆಂಡ್ ಕರ್ಫ್ಯೂ ನಡುವೆ ಬಿಜೆಪಿ ಶಾಸಕನ ಭರ್ಜರಿ ಬರ್ತ್ಡೇ ಆಚರಣೆ ನಡೆಸಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್.ವಿ. ರಾಮಚಂದ್ರ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ದಾವಣಗೆರೆಯ ಕೆ.ಬಿ.ಬಡಾವಣೆಯ ನಿವಾಸದ ಬಳಿ ಆಚರಣೆ ಮಾಡಲಾಗಿದ್ದು ಕೊವಿಡ್ ರೂಲ್ಸ್ ಉಲ್ಲಂಘಿಸಿ ಶಾಸಕರ ಮನೆ ಬಳಿ ಜನ ಜಮಾವಣೆ ಆಗಿದೆ. ಕರ್ತವ್ಯ ಮರೆತು ಪೊಲೀಸರು ಶಾಸಕರಿಗೆ ಅಭಿನಂದಿಸಲು ಬಂದಿದ್ದಾರೆ.
ಬೆಳಗಾವಿ: ಬಿಜೆಪಿ ಶಾಸಕ ಅನಿಲ್ ಬೆನಕೆಯಿಂದ ಮತ್ತೆ ಕೊವಿಡ್ ರೂಲ್ಸ್ ಬ್ರೇಕ್
ಬಿಜೆಪಿ ಶಾಸಕ ಅನಿಲ್ ಬೆನಕೆಯಿಂದ ಮತ್ತೆ ಕೊವಿಡ್ ರೂಲ್ಸ್ ಬ್ರೇಕ್ ಮಾಡಲಾಗಿದೆ. ವೀಕೆಂಡ್ ಕರ್ಫ್ಯೂ ದಿನವೇ ಧರ್ಮವೀರ ಸಂಭಾಜಿ ಪಟ್ಟಾಭಿಷೇಕ ದಿನಾಚರಣೆ ಆಚರಿಸಲಾಗಿದೆ. ಬೆಳಗಾವಿ ಧರ್ಮವೀರ ಸಂಭಾಜಿ ವೃತ್ತದಲ್ಲಿ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಗಿದೆ. ಸಂಭಾಜಿ ಪ್ರತಿಮೆಗೆ ಮಾಲಾರ್ಪಣೆ, ಜಲಾಭೀಷೇಕ ಮಾಡಲಾಗಿದೆ. ಕಳೆದ ಎರಡು ದಿನಗಳ ಹಿಂದೆ ಎಮ್ಮೆ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿದ್ದ ಅನಿಲ್ ಬೆನಕೆ ಈಗ ಮತ್ತೆ ಕೊವಿಡ್ ನಿಯಮ ಗಾಳಿಗೆ ತೂರಿದ್ದಾರೆ. ಜನರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯ ಅಂತಾ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಶಾಸಕರ ವಿರುದ್ಧ ಯಾವುದೇ ದೂರು ದಾಖಲಿಸದ ಬೆಳಗಾವಿ ಪೊಲೀಸರ ವಿರುದ್ದ ಆಕ್ರೋಶ ಕೇಳಿಬಂದಿದೆ.
ಕೂರ್ಗ್ ವೈಲ್ಡರ್ಸ್ ರೆಸಾರ್ಟ್ ಕೊನೆಗೂ ಸೀಲ್‌ಡೌನ್
ಕೂರ್ಗ್ ವೈಲ್ಡರ್ಸ್ ರೆಸಾರ್ಟ್ ಕೊನೆಗೂ ಸೀಲ್‌ಡೌನ್ ಮಾಡಲಾಗಿದೆ. ರೆಸಾರ್ಟ್‌ನ 38 ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ತಹಶೀಲ್ದಾರ್ ಸೂಚನೆಯ ಮೇರೆಗೆ ರೆಸಾರ್ಟ್ ಸೀಲ್‌ಡೌನ್ ಮಾಡಲಾಗಿದೆ. ರೆಸಾರ್ಟ್‌ನಲ್ಲಿದ್ದ ಜನರನ್ನು ವಾಪಸ್ ಕಳಿಸಿದ್ದಾರೆ. ರೆಸಾರ್ಟ್‌ನ 38 ಸಿಬ್ಬಂದಿಗೆ ಕೊರೊನಾ ಬಂದರೂ ಬೇಜವಾಬ್ದಾರಿ ತೋರಲಾಗಿತ್ತು. ಇದೀಗ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮದ ಬಳಿ ಇರುವ ಮಾಜಿ ಸಚಿವ ಟಿ.ಜಾನ್ ಪುತ್ರನ ಮಾಲೀಕತ್ವದ ಕೂರ್ಗ್ ವೈಲ್ಡರ್ಸ್ ರೆಸಾರ್ಟ್ ಸೀಲ್ ಡೌನ್ ಮಾಡಲಾಗಿದೆ.
ಇದನ್ನೂ ಓದಿ: ಬಳ್ಳಾರಿಗೆ ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಜಾರಿ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊವಿಡ್ ದೃಢ
ಇದನ್ನೂ ಓದಿ: ‘ಕಲ್ಯಾಣ ಮಂಟಪಗಳಿಗೂ 50:50 ನಿಯಮ ಮಾಡಿ; 100 ಜನರ ಮಿತಿ ಆದೇಶ ವಾಪಸ್ ಪಡೆಯಿರಿ’
Published On - 1:56 pm, Sun, 16 January 22