ಟಿಕೆಟ್​ ಘೋಷಣೆಗೂ ಮುನ್ನವೇ ಸೇವಾಲಾಲ್ ಜಯಂತಿಯಲ್ಲಿ ಮತ್ತೊಮ್ಮೆ ಆಶೀರ್ವಾದ ಕೇಳಿದ ರಾಘವೇಂದ್ರ

ಬಿಎಸ್ ಯಡಿಯೂರಪ್ಪ ಅವರು ಸೇವಾಲಾಲ್​ರ ದೇವಸ್ಥಾನಕ್ಕೆ ಜಾಗ ಗುರುತಿಸಿ 2 ಕೋಟಿ ಅನುದಾನ ಕೊಟ್ಟರು. ಮುಂದೆ ಬಂದಂತ ಸಿಎಂ ಸಿದ್ದರಾಮಯ್ಯ ಅವರು ಕೂಡ ಭಾಯಾಗಡ್ ಅಭಿವೃದ್ಧಿ ಹಣ ಕೊಟ್ಟರು. ಸರ್ಕಾರ ಯಾವುದೇ ಬರಲಿ ಹೋಗಲಿ ಆದರೆ ಈ ಸಮುದಾಯಕ್ಕೆ ಕೆಲಸ ಆಗಲು ಹಣ ಮೀಸಲಿಡಲಿ. ನೀವು ನನಗೆ ಆಶೀರ್ವಾದ ಮಾಡಿ ಎಂದು ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಕೇಳಿಕೊಂಡಿದ್ದಾರೆ. 

ಟಿಕೆಟ್​ ಘೋಷಣೆಗೂ ಮುನ್ನವೇ ಸೇವಾಲಾಲ್ ಜಯಂತಿಯಲ್ಲಿ ಮತ್ತೊಮ್ಮೆ ಆಶೀರ್ವಾದ ಕೇಳಿದ ರಾಘವೇಂದ್ರ
ಸಂಸದ ಬಿ ವೈ ರಾಘವೇಂದ್ರ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 14, 2024 | 8:15 PM

ದಾವಣಗೆರೆ, ಫೆಬ್ರವರಿ 14: ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಮೂವರು ಪಕ್ಷಗಳು ಅಧಿಕಾರಿಯ ಚುಕ್ಕಾಣಿ ಹಿಡಿಯಲು ಕಸರತ್ತು ನಡೆಸಿವೆ. ಇನ್ನೂ ಲೋಕಸಭೆ ಚುನಾವಣೆಗೆ ಟಿಕೆಟ್ ಘೋಷಣೆ ಮಾಡಿಲ್ಲ. ಆದರೆ ಟಿಕೆಟ್​ ಘೋಷಣೆಗೂ ಮುನ್ನವೇ ಮತ್ತೊಮ್ಮೆ ಆಶೀರ್ವಾದ ಮಾಡುವಂತೆ ಸಂಸದ ಬಿ.ವೈ.ರಾಘವೇಂದ್ರ (B. Y. Raghavendra) ಕೇಳಿದ್ದಾರೆ. ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಸೇವಾಲಾಲ್​ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ಮತ್ತೊಮ್ಮೆ ಆಶೀರ್ವಾದ ಮಾಡಿ ಎಂದಿದ್ದಾರೆ. ಸಂತ ಸೇವಾಲಾಲ್ ಪುಣ್ಯ ಕ್ಷೇತ್ರವನ್ನೂ ಅಭಿವೃದ್ಧಿ ಪಡಿಸಲಾಗಿದೆ. ಬಿಎಸ್​ ಯಡಿಯೂರಪ್ಪ ಸಿಎಂ ಆಗಿದ್ದಾಗ ಕ್ಷೇತ್ರಕ್ಕೆ ಅನುದಾನ ಕೊಟ್ಟಿದ್ದರು. ಸೂರಗೊಂಡನಕೊಪ್ಪ ಭಾಗದಲ್ಲಿ ರೈಲು ಸಂಚಾರಕ್ಕೆ ಅನುವು ಮಾಡಿದೆ. ಇಲ್ಲಿ ಸೇವಾಲಾಲ್ ರೈಲು ನಿಲ್ದಾಣ ಕೂಡ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮುಂದಿನ ಸಂತ ಸೇವಾಲಾಲ್ ಜಯಂತಿ ವೇಳೆಗೆ ನಿಮ್ಮ ಭಾಯಾಗಡ್​ನಲ್ಲಿ ರೈಲ್ವೆ ನಿಲ್ದಾಣ ಆಗುತ್ತೆ. ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಣೆಬೆನ್ನೂರು ಟು ಶಿವಮೊಗ್ಗ ರೈಲ್ವೆ ನಿಲ್ದಾಣ ಆಗುತ್ತಿದೆ. ಇದೆ ಸೇವಾಲಾಲ್ ಜನ್ಮ ಸ್ಥಳದ ಮೂಲಕ ರೈಲ್ವೆ ಹಳಿ ಹೋಗಲು ನಾನು ಕೇಳಿಕೊಂಡಿದ್ದೆ. ಭಾಯಾಗಡ್ ರೈಲು ನಿಲ್ದಾಣ ಆಗಿ ಅದನ್ನ ಮುಂದಿನ ಜಾತ್ರೆ ವೇಳೆ ಉದ್ಘಾಟನೆ ಮಾಡುತ್ತೇವೆ. ನಾನು ಕೇವಲ ಮೈಕ್​ನಲ್ಲಿ ರೈಲು ಬಿಡಲ್ಲ ಎಂದಿದ್ದಾರೆ.

ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವಂತೆ ಕೇಳಿಕೊಂಡ ಬಿವೈ ರಾಘವೇಂದ್ರ

ಬಿಎಸ್ ಯಡಿಯೂರಪ್ಪ ಅವರು ಸೇವಾಲಾಲ್​ರ ದೇವಸ್ಥಾನಕ್ಕೆ ಜಾಗ ಗುರುತಿಸಿ 2 ಕೋಟಿ ಅನುದಾನ ಕೊಟ್ಟರು. ಮುಂದೆ ಬಂದಂತ ಸಿಎಂ ಸಿದ್ದರಾಮಯ್ಯ ಅವರು ಕೂಡ ಭಾಯಾಗಡ್ ಅಭಿವೃದ್ಧಿ ಹಣ ಕೊಟ್ಟರು.

ಇದನ್ನೂ ಓದಿ: ಸರ್ಕಾರ ಕಾರು ಖರೀದಿಸಿದ್ದು ಪ್ರಶ್ನಿಸುವ ಬಿಜೆಪಿ ನಾಯಕರು ಅಧಿಕಾರದಲ್ಲಿದ್ದಾಗ ಸೈಕಲ್, ಬಸ್​ಗಳಲ್ಲಿ ಓಡಾಡುತ್ತಿದ್ದರೇ? ಮಧು ಬಂಗಾರಪ್ಪ

ಸರ್ಕಾರ ಯಾವುದೇ ಬರಲಿ ಹೋಗಲಿ ಆದರೆ ಈ ಸಮುದಾಯಕ್ಕೆ ಕೆಲಸ ಆಗಲು ಹಣ ಮೀಸಲಿಡಲಿ. ನೀವು ದೇವರಿಗೆ ಹೂವು ಹಾಕ್ತೀರಾ, ಮುಂದೆ ನನಗೊಂದು ಹೂ ಹಾಕಿ ನನಗೂ ಆಶೀರ್ವಾದ ಮಾಡಿ ಎಂದು ಪರೋಕ್ಷವಾಗಿ ಮುಂದಿನ ಚುನಾವಣೆಯಲ್ಲಿ ಗೆಲ್ಲಿಸುವಂತೆ ಕೇಳಿಕೊಂಡಿದ್ದಾರೆ.

ನಿಮ್ಮ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧ: ಸಚಿವ ಮಧು ಬಂಗಾರಪ್ಪ

ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು, ಬಂಜಾರ ಸಮುದಾಯಕ್ಕೆ ಸಂತ ಸೇವಾಲಾಲ್ ಕೊಡುಗೆ ಅಪಾರ. ಸೇವಾಲಾಲ್ ಜನ್ಮಸ್ಥಳ ಕರ್ನಾಟಕದಲ್ಲಿ ಇರುವುದು ನಮಗೆ ಹೆಮ್ಮೆ. ಬಂಜಾರ ಸಮುದಾಯಕ್ಕೆ ಸರ್ಕಾರದಿಂದ ಹೆಚ್ಚು ಒತ್ತು ನೀಡುತ್ತೇವೆ. ನಿಮ್ಮ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿರುತ್ತದೆ. ಮೆಡಿಕಲ್ ಕಾಲೇಜ್ ಸೇರಿದಂತೆ ಹಲವು ಬೇಡಿಕೆ ಈಡೇರಿಸಲು ಬದ್ಧ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ನಿಲ್ಲಿಸುವಂತೆ ಮಂತ್ರಿಯೊಬ್ಬ 10 ಕೋಟಿ ರೂ. ಆಮಿಶವೊಡ್ಡಿದ್ದ: ಬಸನಗೌಡ ಪಾಟೀಲ್ ಯತ್ನಾಳ್

ನಿಮ್ಮ ಸಹೋದರಾಗಿ ನಾನು ಧ್ವನಿ ಎತ್ತಿ ಕೆಲಸ ಮಾಡಿಸಿಕೊಡುತ್ತೇನೆ. ರಾಜ್ಯದಲ್ಲಿ 76 ಸಾವಿರ ಶಾಲೆಗಳು ಬರುತ್ತವೆ. 1 ಕೋಟಿ 20 ಲಕ್ಷ ಮಕ್ಕಳು ಓದುತ್ತಿದ್ದಾರೆ. ನನ್ನ ಇಲಾಖೆ ಕಷ್ಟದ ಇಲಾಖೆ, ಆದರೆ ಪುಣ್ಯದ ಕೆಲಸ. ಮಕ್ಕಳು ದೇವರ ಸಮಾನ. ಹೀಗಾಗಿ ಅವರಿಗೆ ಶಿಕ್ಷಣ ನೀಡುವುದು ಪುಣ್ಯದ ಕೆಲಸ. ದೇಶದ ಆಸ್ತಿ ಶಿಕ್ಷಣ, ಶಿಕ್ಷಣ ಪಡೆದರೆ ಅಂಬೇಡ್ಕರ್ ಅವರ ಆಸೆ ಈಡೇರುತ್ತೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ