ನಶಿಸುತ್ತಿರುವ ದೇಸಿ ತಳಿಯ ರಾಸುಗಳ ಸಂತತಿಯನ್ನು ಉಳಿಸಲು ಟೊಂಕ ಕಟ್ಟಿ ನಿಂತ ಯುವ ರೈತ
ದನ-ಕರುಗಳನ್ನು ಸಾಕು ಸುಲಭದ ಮಾತಲ್ಲ. ಅದರಲ್ಲಂತು ದೇಸಿ ತಳಿ ದನ-ಕರುಗಳನ್ನು ಸಾಕುವುದು ಬಹಳ ಕಷ್ಟದ ಕೆಲಸ. ಇವುಗಳ ಪೋಷಣೆ ಅಧಿಕವಾಗಿರುತ್ತದೆ. ಅದರಲ್ಲಂತೂ ಬರಗಾಲಾದಲ್ಲಿ ಸರಿಯಾಗಿ ಮೇವು ಸಿಗದ ಸಮಯದಲ್ಲಿ ಈ ದೇಸಿ ತಳಿಯ ದನ-ಕರುಗಳನ್ನು ಸಾಕುವುದು ಹೈರಾಣದ ಕೆಲಸ. ಆದರೂ ಕೂಡ ದಾವಣಗೆರೆಯ ಯುವ ರೈತ ನಶಿಸುತ್ತಿರುವ ದೇಸಿ ತಳಿಯ ದನ-ಕರುಗಳನ್ನು ಸಾಕುವ ಮೂಲಕ ಮಾದರಿಯಾಗಿದ್ದಾರೆ.

ದಾವಣಗೆರೆ, ಮೇ 15: ಭೀಕರ ಬಗಾಲದಲ್ಲಿ ಮೇವು ನೀರಿಗೆ ಪರಿಪಾಟಿಲು ಹೇಳತಿರದು. ಇಂತಹ ಹತ್ತಾರು ಸಂಕಷ್ಟದ ನಡುವೆಯೂ, ನಶಿಸುತ್ತಿರುವ ದೇಸಿ ಗೋ (Desi Cows) ಸಂತತಿಯನ್ನು ರಕ್ಷಣೆ ಉಳಿಸಿಕೊಳ್ಳಲು ದಾವಣಗೆರೆ (Davangere) ತಾಲೂಕಿನ ಮಾಯಕೊಂಡ ಹೋಬಳಿಯ ಮಲ್ಲಿಗೇನಹಳ್ಳಿ ಗ್ರಾಮದ ಯುವ ರೈತ (Young Farmer) ಟೊಂಕ ಕಟ್ಟಿ ನಿಂತಿರುವುದು ಮಾತ್ರ ವಿಶೇಷವಾಗಿದೆ.
ದೇಸಿ ತಳಿಯ ದನ-ಕರುಗಳು ನಶಿಸಿ ಹೋಗುತ್ತಿವೆ. ಈ ದೇಸಿ ತಳಿಯನ್ನು ಉಳಿಸುವ ಸಲುವಾಗಿ ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಮಲ್ಲಿಗೇನಹಳ್ಳಿ ಗ್ರಾಮದ ಯುವ ರೈತ ಕುಮಾರ್ ಟೊಂಕಕಟ್ಟಿ ನಿಂತಿದ್ದಾರೆ. ಹಳಿಕಾರ್ ತಳಿ, ಗೀರ್ ತಳಿ, ಅಮೃತ್ ಮಾಲ್ ತಳಿ, ಮಲೆನಾಡು ಗಿಡ್ಡ, ಎರಡು ಎಮ್ಮೆ, ಕೃಷ್ಣ ಗಿರಿಯ ಹೋರಿ, ಆಂಧ್ರದಿಂದ ಎರಡು ಕರುಗಳು, ಕೋಲಾರದಿಂದ ಒಂದು ಹಳ್ಳಿಕಾರ್ ದನಗಳನ್ನು ತಂದಿರುವ ರೈತ ಕುಮಾರ್ರವರು ಒಟ್ಟು 28 ರಾಸುಗಳನ್ನು ಸಾಕುತ್ತಾ ತಳಿಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಹೋಬಳಿಯ ಮಲ್ಲಿಗೇನಹಳ್ಳಿ ಗ್ರಾಮದ ರೈತ ಕುಮಾರ್ ದೇಸಿ ದನ-ಕರುಗಳನ್ನು ಉಳಿಸಲು ಪಣ ತೊಟ್ಟಿದ್ದಾರೆ. ಕೆಲ ದಿನಗಳ ಹಿಂದೆ ರೈತ ಕುಮಾರ್ ಉತ್ತಮ ದೇಸಿ ಹೋರಿಗಳ ಹುಡುಕಾಟ ಪ್ರಾರಂಭಿಸಿದ್ದರು, ಈ ವೇಳೆ ಗ್ರಾಮೀಣ ಭಾಗದಲ್ಲಿ ನಾಟಿ ತಳಿಗಳು ನಶಿಸುತ್ತಿರುವುದು ರೈತ ಕುಮಾರ್ ಅವರ ಗಮನಕ್ಕೆ ಬಂದಿದೆ. ಇದರಿಂದ ದೇಸಿ ತಳಿ ಉಳಿಸುವ ನಿರ್ಧಾರ ಕೈಗೊಂಡು ಒಟ್ಟು 28 ರಾಸುಗಳನ್ನು ತಮ್ಮ ಶೆಡ್ನಲ್ಲಿ ಸಾಕಾಣಿಕೆ ಮಾಡುತ್ತಿದ್ದಾರೆ. ಒಟ್ಟು 4 ಲಕ್ಷ 80 ಸಾವಿರ ಖರ್ಚು ಮಾಡಿ ಕೊಡಗನೂರು ಕ್ರಾಸ್ನಲ್ಲಿ ಫಾರಂ ನಿರ್ಮಿಸಿ ಹಳ್ಳಿಕಾರ್, ಅಮೃತ ಮಹಲ್, ಮಲ್ನಾಡ್ ಗಿಡ್ಡ, ಗಿರ್, ಸಾಹಿವಾಲ, ಎರಡು ಎಮ್ಮೆಗಳ ಜೊತೆಯಲ್ಲಿ ಎರಡು ಮಿಶ್ರ ತಳಿ ಹಸುಗಳನ್ನು ಸಾಕಿ ಅವುಗಳಿಂದ ತಳಿ ಅಭಿವೃದ್ಧಿಪಡಿಸುವ ಗುರಿಯನ್ನು ರೈತ ಕುಮಾರ್ ಹೊಂದಿದ್ದಾರೆ.
ಇದನ್ನೂ ಓದಿ: ಕರುಳಿನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಮನಕಲುಕುವ ದೃಶ್ಯ ಮೊಬೈಲ್ನಲ್ಲಿ ಸೆರೆ
ಬರಗಾಲ ಆವರಿಸಿದ್ದರಿಂದ ಮೇವು ನೀರಿನ ಸಮಸ್ಯೆ ಎದುರಾಗಿದ್ದು, ಮೇವು ಶೇಖರಿಸಲು ಸಾಕಷ್ಟು ಹೈರಾಣಾಗಿಸಿದೆ. ಇದರಿಂದ ರೈತ ಕುಮಾರ್ ದೇಸಿ ದನಕರುಗಳಿಗಾಗಿ ಒಂದು ಎಕರೆಗೆ 2000 ರಂತೆ ಮೇವು ಖರೀದಿ ಮಾಡುತ್ತಿದ್ದಾರೆ. ನೀರಿನ ಸಮಸ್ಯೆ ಇರುವುದರಿಂದ ಕೊಳವೆ ಬಾವಿ ಮೊರೆ ಹೋಗಿದ್ದಾರೆ. ಕುಮಾರ್ ಅವರಿಗೆ ಚಿಕ್ಕವನಿಂದಲೂ ದೇಸಿ ಹಸುಗಳು, ಹೋರಿಗಳನ್ನು ಸಾಕುವ ಆಸೆ ಇತ್ತಂತೆ. ಇದರಿಂದ ಹಳಿಕಾರ್ ತಳಿ, ಗೀರ್ ತಳಿ, ಅಮೃತ್ ಮಾಲ್ ತಳಿ, ಮಲೆನಾಡು ಗಿಡ್ಡ, ಎರಡು ಎಮ್ಮೆ, ಕೃಷ್ಣ ಗಿರಿಯ ಹೋರಿ, ಆಂಧ್ರದಿಂದ ಎರಡು ಕರುಗಳು, ಕೋಲಾರದಿಂದ ಒಂದು ಹಳ್ಳಿಕಾರ್ ತಂದು ಒಟ್ಟು 28 ರಾಸುಗಳನ್ನು ಈ ಕುಮಾರ್ ಸಾಕುತಿದ್ದಾರೆ. ಕೆಎಮ್ಎಫ್ಗೆ ಹಾಲು ಮಾರಾಟ ಮಾಡಿ ಬರುವ ಹಣದಿಂದ ರಾಸುಗಳ ಪೋಷಣೆ ಮಾಡುತ್ತಿದ್ದಾರೆ. ಇನ್ನು ಈ ದೇಸಿ ದನಕರುಗಳನ್ನು ಸಾಕಾಲು ಬೇಕಾಗುವ ಖರ್ಚನ್ನು ಭರಿಸಲು ಎರಡು ಎಮ್ಎಫ್ ಹಸುಗಳನ್ನು ಕುಮಾರ್ ಸಾಕುತ್ತಿದ್ದಾರೆ. ಈ ಹಸುಗಳಿಂದ ಬರುವ ಹಾಲು ಮಾರಾಟ ಮಾಡಿ ಇದರಿಂದ ಬರುವ ಆದಾಯದಲ್ಲಿ ಈ ದನಕರುಗಳನ್ನು ಪೋಷಣೆ ಮಾಡುತ್ತಿದ್ದಾರೆ. ನಾಟಿ ದನ-ಕರುಗಳು, ಹೋರಿಗಳನ್ನು ಸಾಕಲು ಒಂದು ತಿಂಗಳಿಗೆ 12-15 ಸಾವಿರ ಹಣ ಬೇಕಾಗುತ್ತದೆ.
ಈ ದೇಸಿ ದನ-ಕರುಗಳ ಸಗಣಿಯಿಂದ ಬೆರಣಿ (ಕುಳ್ಳು)ಗಳನ್ನು ತಯಾರಿಸಿ ಕಾರ್ಕಳ ಮೂಲದ ಆಯುಶ್ ಮಂಡಲಂ ಎಂಬ ಸಂಸ್ಥೆಗೆ ಮಾರಾಟ ಮಾಡುತ್ತ ಆದಾಯ ಗಳಿಸುತ್ತಿದ್ದಾರೆ. ಈ ಬೆರಣಿ ಅಗ್ನಿಹೋತ್ರಕ್ಕೆ ಬಳಕೆ ಮಾಡಲಾಗುತ್ತದೆ. ಒಂದು ಕ್ವಿಂಟಾಲ್ಗೆ 12 ಸಾವಿರ ಬೆಲೆ ಇದ್ದು, ಈಗಾಗಲೇ ಕುಮಾರ್ ಬೆರಣಿಯಿಂದ ಆದಾಯ ಗಳಿಸುತ್ತಿದ್ದಾರೆ. ಹೋರಿ ಹಬ್ಬದ ಅಪ್ಪಟ ಅಭಿಮಾನಿಯಾಗಿರುವ ಕುಮಾರ್ ದೀಪಾವಳಿಯಂದು ನಡೆಯುವ ಹೋರಿಗಳ ಓಟ ಸ್ಪರ್ಧೆಯಲ್ಲಿ, ಇವರು ಸಾಕಿರುವ ಹೋರಿಗಳು ಭಾಗಿಯಾಗಿ ಪ್ರಶಸ್ತಿ ಪಡೆಯುತ್ತಿವೆ. ತಮಿಳುನಾಡು ಮೂಲದ ತಳಿಗಳು ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:43 am, Wed, 15 May 24