Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘನತೆಯಿಂದ ಸಾಯುವ ಹಕ್ಕು: ಮೊದಲು ದಯಾಮರಣ ಪಡೆಯಲು ಮುಂದಾದ ನಿವೃತ್ತ ಶಿಕ್ಷಕಿ

ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನಿಂದಾಗಿ, ಮಾರಣಾಂತಿಕ ರೋಗಿಗಳಿಗೆ ಘನತೆಯಿಂದ ಸಾಯುವ ಹಕ್ಕು ದೊರೆತಿದೆ. ಕರ್ನಾಟಕ ಸರ್ಕಾರ ಈ ತೀರ್ಪನ್ನು ಜಾರಿಗೆ ತಂದಿದೆ. ಈ ತೀರ್ಪಿನ ಪ್ರಮುಖ ಅಂಶಗಳು ವೈದ್ಯರ ಅನುಮತಿ, ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ಅನುಮೋದನೆ ಮತ್ತು ನ್ಯಾಯಾಲಯದ ಅನುಮತಿ ಸೇರಿವೆ. 84 ವರ್ಷದ ಹೋರಾಟಗಾರ್ತಿ ಹೆಚ್‌.ಬಿ. ಕರಿಬಸಮ್ಮ ಕಾನೂನಿನಡಿ ಮೊದಲಿಗೆ ದಯಾಮರಣ ಪಡೆಯಬೇಕು ಎಂದಿದ್ದಾರೆ.

ಘನತೆಯಿಂದ ಸಾಯುವ ಹಕ್ಕು: ಮೊದಲು ದಯಾಮರಣ ಪಡೆಯಲು ಮುಂದಾದ ನಿವೃತ್ತ ಶಿಕ್ಷಕಿ
ಘನತೆಯಿಂದ ಸಾಯುವ ಹಕ್ಕು: ಮೊದಲ ದಯಾಮರಣ ಪಡೆಯಲು ಮುಂದಾದ ನಿವೃತ್ತ ಶಿಕ್ಷಕಿ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ

Updated on:Feb 12, 2025 | 8:13 PM

ದಾವಣಗೆರೆ, ಫೆಬ್ರವರಿ 12: ಸಾವಿನಲ್ಲಿಯೂ ಘನತೆ ಇರಲಿ ಎಂಬ ಹೋರಾಟ ಹಲವಾರು ದಶಕಗಳಿಂದ ವಿದೇಶ ವಿದೇಶಗಳಲ್ಲಿ ನಡೆಯುತ್ತಿದೆ. ಇದಕ್ಕೆ ದಯಾಮರಣ, ಇಚ್ಚಾಮರಣ (ichchamaran) ಹೀಗೆ ಹತ್ತಾರು ಹೆಸರುಗಳಿಂದ ಕರೆಯುತ್ತಾರೆ. ಇನ್ನೇನು ಗುಣ ಪಡಿಸಲಾಗದ ಕಾಯಿಲೆಯಿಂದ ಬಳಲುತ್ತಿರುವ ಕೊನೆಗಾಲದಲ್ಲಿ ಹಿಂಸೆ ಅನುಭವಿಸುತ್ತಿರುವರ ಘಟನೆಯಿಂದ ಸಾವನ್ನಪ್ಪಬಹುದು ಎಂದು ಸುಪ್ರೀಂ ಕೋರ್ಟ 2023 ರಲ್ಲಿ ಒಂದು ತೀರ್ಪು ನೀಡಿದೆ. ಸುಪ್ರೀಂ ಕೋರ್ಟನ ತೀರ್ಪನ್ನ ರಾಜ್ಯ ಆರೋಗ್ಯ ಇಲಾಖೆ ಅನುಷ್ಠಾನಕ್ಕೆ ಮುಂದಾಗಿದೆ. ಮನುಷ್ಯ ಜೀವನಕ್ಕೆ ಗೌರವಕೊಟ್ಟು ಸುರ್ಪೀಂ ತೀರ್ಪು ಜಾರಿ ಮಾಡಬೇಕಿದೆ.

ದಯಾಮರಣದ ಹಕ್ಕು ಜಾರಿಗೆ ಮುಂದಾದ ರಾಜ್ಯ ಆರೋಗ್ಯ ಇಲಾಖೆ

ಕಳೆದ 2023 ಜನವರಿ 30 ರಂದು ಸುಪ್ರೀಂ ಕೋರ್ಟ ಒಂದು ಐತಿಹಾಸಿಕ ತೀರ್ಪು ನೀಡಿದೆ. ಅಂದರೆ ಸಂವಿಧಾನದ 21ನೇ ವಿಧಿಯು ಘನತೆಯಿಂದ ಬದುಕುವ ಹಾಗೂ ಸಾಯುವಕ ಹಕ್ಕು ಒದಗಿಸಿದೆ. ಇದೇ ವಿಚಾರ ಇಟ್ಟುಕೊಂಡು ಸುಪ್ರೀಂ ಕೋರ್ಟ್​ ಮಾರಣಾಂತಿಕ ರೋಗಗಳಿಂದ ಬಳಲುವರಿಗೆ ದಯಾಮರಣದ ಹಕ್ಕು ನೀಡಿದೆ. ಹೀಗೆ ಸುಪ್ರೀಂ ಕೋರ್ಟ್​ ನೀಡಿದ ತೀರ್ಪು ಜಾರಿಗೆ ತರಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.

ಇದನ್ನೂ ಓದಿ: ಶ್ವಾಸಕೋಶ ಸಂಶೋಧನೆ ಮಾಡಲು ಹೋಗಿ ಮಗುವಿನ ಬ್ರೈನ್ ಡ್ಯಾಮೇಜ್: ದಯಾಮರಣ ಕೋರಿದ ತಂದೆ

ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಅವರು ಇದೇ ಜನವರಿ 24, 2025 ರಂದು ಆದೇಶ ಹೊರಡಿಸಿದ್ದು. ಸುಪ್ರೀಂ ತೀರ್ಪಿನ ಅನ್ವಯ ಘತನೆಯ ಸಾವನ್ನಪ್ಪಬಹುದು ಎಂಬುದು ಆದೇಶದ ಸಾರಾಂಶ. ಹೀಗೆ ದಯಾಮರಣ ಹೊಂದುವಾಗ ಸುಪ್ರೀಂ ಕೋರ್ಟ್​ ನೀಡಿದ ನಿರ್ದೇಶನಗಳ ಪಾಲನೆ ಮಾಡಬೇಕಾಗುತ್ತದೆ.

ನಿಮಯ ಒಂದು- ಚಿಕಿತ್ಸೆ ನೀಡುತ್ತಿರುವ ವೈದ್ಯರ ಅನುಮತ. ನಿಯಮ ಎರಡು- ರೋಗಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಪ್ರಾಥಮಿಕ ಮತ್ತು ಮಾಧ್ಯಮಿಕ ವೈದ್ಯಕೀಯ ಮಂಡಳಿ ಸ್ಥಾಪನೆ. ನಿಯಮ ಮೂರು- ವೈದ್ಯಕೀಯ ಮಂಡಳಿಯಲ್ಲಿ ಮೂರು ಜನ ವೈದ್ಯರುತ್ತಾರೆ. ನಿಯಮ ನಾಲ್ಕು- ಈ ವೈದ್ಯಕೀಯ ಮಂಡಳಿ ದಯಾ ಮರಣದ ಬಗ್ಗೆ ತೆಗೆದುಕೊಂಡ ನಿರ್ಧಾರ ಪ್ರತಿಯನ್ನ ಸ್ಥಳೀಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಜೆಎಂಎಫ್ ಸಿ ನ್ಯಾಯಾಲಯ ಈ ಪ್ರತಿ ಹೈಕೋರ್ಟಗೆ ಕಳುಹಿಸುತ್ತದೆ. ಮರಣ ಇಚ್ಚೆಯ ಉಯಿಲು ಪಡೆಯಬೇಕು. ರೋಗಿಯು ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕಳೆದು ಕೊಂಡಾಗ ಅವರ ಪರವಾಗಿ ಕನಿಷ್ಠ ಇಬ್ಬರು ನಾಮನಿರ್ದೇಶನ ಮಾಡಬೇಕೆಂಬು ಸುಪ್ರೀಂ ತಾಕೀತು.

ಇಚ್ಛಾಮರಣ ಪಡೆದ ಮೊದಲ ವ್ಯಕ್ತಿ ನಾನಾಗಬೇಕು: ಎಚ್‌.ಬಿ.ಕರಿಬಸಮ್ಮ

ದಾವಣಗೆರೆಯಲ್ಲಿ ಟಿವಿ9ಗೆ ನಿವೃತ್ತ ಶಿಕ್ಷಕಿ ಹೆಚ್‌.ಬಿ.ಕರಿಬಸಮ್ಮ ಹೇಳಿಕೆ ನೀಡಿದ್ದು, ನನ್ನ 24 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಘನತೆಯಿಂದ ಮರಣಹೊಂದುವ ಕಾನೂನು ಜಾರಿಯಿಂದ ಸಂತಸವಾಗಿದೆ. ಕಾನೂನಾತ್ಮಕವಾಗಿ ಇಚ್ಛಾಮರಣ ಪಡೆದ ಮೊದಲ ವ್ಯಕ್ತಿ ನಾನಾಗಬೇಕು ಎಂಬ ಬಯಕೆ ಇದೆ. ಈ ಅವಕಾಶಕ್ಕೆ ಕಾಯುತ್ತಿದ್ದೇನೆ ಎಂಬುದ ಕರಿಬಸಪ್ಪ ಅವರ ಮಾತಾಗಿದೆ.

ಈ ಕಾನೂನಿನಡಿ ಮೊದಲು ನಾನೇ ದಯಾಮರಣ ಪಡೆಯಬೇಕು. ಹತ್ತಾರು ಕಾಯಿಲೆಗಳಿಂದ ನಾನು ಹಿಂಸೆ ಅನುಭವಿಸುತ್ತಿದ್ದೇನೆ. ಬಾಲ್ಯದಲ್ಲಿ ಕುಷ್ಠರೋಗ ಇರುವ ವ್ಯಕ್ತಿಗೆ ಕೊಟ್ಟು ಮದ್ವೆ ಮಾಡಿದ್ದರು. ಆತ ರೋಗದಿಂದ ಮೃತಪಟ್ಟಿದ್ದ, ಬಳಿಕ ವಿಧವಾ ವಿವಾಹವಾಗಿದ್ದೆ ಎಂದಿದ್ದಾರೆ.

ಜವಾನರ ಕಲ್ಯಾಣ ನಿಧಿಗೆ 10 ಲಕ್ಷ ರೂ

2ನೇ ಪತಿಯೂ ಬಿಟ್ಟು ಹೋದ, ಇದೇ ಕಾರಣಕ್ಕೆ 24 ವರ್ಷ ಹೋರಾಟ ಮಾಡಿದ್ದು, ಈಗ ನನಗೆ 84 ವರ್ಷ ವಯಸ್ಸು, ನನಗೆ ಗೌರವದ ಸಾವು ಬೇಕು. ಇದ್ದ ಮನೆ ಮಾರಾಟ ಮಾಡಿ 16 ವರ್ಷಗಳಿಂದ ವೃದ್ಧಾಶ್ರಮದಲ್ಲಿ ಇರುವೆ. ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಘನತೆಯಿಂದ ಮರಣಹೊಂದುವ ಹಕ್ಕು ನೀಡಿದ್ದು ಸ್ವಾಗತಾರ್ಹ. ನಾನು 24 ವರ್ಷಗಳಿಂದ ಕರಳು ಕ್ಯಾನ್ಸರ್‌ನಿಂದ ಬಳಲುತ್ತಿರುವೆ. ದಯಾಮರಣಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದೆ. ಹತ್ತಾರು ಸಲ ಸಾವಿನ ಮನೆಗೆ ಹೋಗಿ ವಾಪಸ್‌ ಬಂದಿರುವೆ. ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಒಪ್ಪಿಲ್ಲ. ಮಾರಣಾಂತಿಕ ಕಾಯಿಲೆಗಳಿಂದ ಬಳಲ್ತಿರುವ ವೃದ್ಧರ ಸಂಖ್ಯೆ ಹೆಚ್ಚಾಗಿದೆ‌. ಘನತೆಯಿಂದ ಮರಣಹೊಂದುವ ಅವಕಾಶ ಇಲ್ಲದೇ ನರಳುತ್ತಿದ್ದಾರೆ. ಮನೆ ಮಾರಿ ಬ್ಯಾಂಕ್‌ನಲ್ಲಿಟ್ಟಿದ್ದ ಹಣ 10 ಲಕ್ಷ ರೂಪಾಯಿ ಆಗಿದೆ. ಈ ಹಣ ಗಡಿಭದ್ರತಾ ಪಡೆಯ ಜವಾನರ ಕಲ್ಯಾಣ ನಿಧಿಗೆ ನೀಡುವೆ ಎಂದಿದ್ದಾರೆ.

ಇದನ್ನೂ ಓದಿ: ಮಾರಣಾಂತಿಕ ಗಂಭೀರ ರೋಗದಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು: ಕರ್ನಾಟಕ ಸರ್ಕಾರ ಮಹತ್ವದ ಆದೇಶ

ದೇಶದಲ್ಲಿ ಕೋಟ್ಯಂತರ ವಯಸ್ಸಾದವರು ಅನೇಕ ಮಾರಣಾಂತಿಕ ರೋಗಗಳಿಂದ ಬಳಲುತ್ತಿದ್ದು ಒಂದು ಕಡೆ ಕೌಟುಂಬಿಕ ಅಸಹಕಾರ, ಚಿಕಿತ್ಸೆಗೆ ಅಗತ್ಯ ಹಣ ಇಲ್ಲದವರು ಗೌರವಯುತವಾಗಿ ಸಾವು ಹೊಂದಲು ಅವಕಾಶ ಮಾಡಿಕೊಡಲು ಕಾನೂನು ಜಾರಿಗೆ ತಂದಿರುವುದು ಸಂತಸದ ವಿಚಾರ. ಕರ್ನಾಟಕ ಸರ್ಕಾರ ಜಾರಿಗೆ ತಂದಿರುವಂತೆ ದೇಶದ ಇತರೆ ಎಲ್ಲ ರಾಜ್ಯಗಳಲ್ಲೂ ದಯಾ ಮರಣ, ಇಚ್ಛಾಮರಣ ಕಾನೂನು ಜಾರಿಗೆ ತರಬೇಕು ಎಂದು 84 ವರ್ಷದ ದಯಾ ಮರಣ ಹೋರಾಟಗಾರ್ತಿ ಕರಿಬಸಮ್ಮ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:12 pm, Wed, 12 February 25

Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
Live: ಆರ್​ಎಸ್​ಎಸ್ ಅಖಿಲ ಭಾರತೀಯ ಪ್ರತಿನಿಧಿ ಸಭಾ ಪತ್ರಿಕಾಗೋಷ್ಠಿ ಲೈವ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಪರೀಕ್ಷೆ ಇಲ್ಲದಿರುವುದನ್ನು ಸಚಿವರಿಂದ ಖಚಿತಪಡಿಸಿಕೊಂಡಿದ್ದೆವು: ವಾಟಾಳ್
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
ಹನಿ ಟ್ರ್ಯಾಪ್ ಆರೋಪ ವಿಷಯದಲ್ಲಿ ಸಿಎಂ, ಹೆಚ್​ಎಂ ಪ್ರತಿಕ್ರಿಯೆ ನೀಡಿಲ್ಲ
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
VIDEO: ಹಾರುವ ಹಾರಿಸ್... ಅದ್ಭುತ ಕ್ಯಾಚ್ ಹಿಡಿದ ರೌಫ್
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಬೆಂಗಳೂರಲ್ಲಿ ಕರ್ನಾಟಕ ಬಂದ್​ಗೆ ಮಿಶ್ರ ಪ್ರತಿಕ್ರಿಯೆ
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಪ್ರತಿಭಟನೆಗೆ ಬಂದ್ ಬಿಟ್ಟು ಪರ್ಯಾಯ ದಾರಿ ಹುಡುಕಬೇಕು: ಆಟೋರಿಕ್ಷಾ ಚಾಲಕರು
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಕಮೆಂಟೇಟರ್ ಜಾನಿ ನಿಜವಾದ ಹೆಸರೇನು? ಈ ಹೆಸರು ಬಂದಿದ್ದು ಹೇಗೆ?
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ಆಣೆ ಪ್ರಮಾಣ ಮಾಡುವುದು ಯಾಕೆ? ಆಣೆ ತಪ್ಪಿದರೆ ಏನಾಗುತ್ತದೆ ನೋಡಿ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ರವಿ ಮೀನ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ
‘ಕಾವೇರಿ ಆರತಿ’: ಜಲ ರಕ್ಷಣೆ ಬಗ್ಗೆ ಡಿಕೆ ಶಿವಕುಮಾರ್​​ ಪ್ರತಿಜ್ಞಾವಿಧಿ