ಕುರುಬ ಸಮಾಜದ ಮುಖಂಡರ ಮೇಲೆ ಸಿದ್ದರಾಮಯ್ಯ ಹಿಂಗ್ಯಾಕೆ ಸಿಟ್ಟಾದ್ರು?
ದಾವಣಗೆರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕುರುಬ ಸಮಾಜದ ಮುಖಂಡರ ಮೇಲೆ ಕೆಂಡ ಮಂಡಲರಾಗಿದ್ದಾರೆ. ಆ ಮುಖಂಡರು ಸಿದ್ದರಾಮಯ್ಯಗೆ ಮನವಿ ನೀಡಲು ಬಂದಿದ್ದಾಗ ಈ ಪ್ರಕರಣ ನಡೆದಿದೆ. ಸಿದ್ದರಾಮಯ್ಯ ಆಕ್ರೋಶ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಡಿಯೂರಪ್ಪ ಬಂದ್ರೆನೇ ಇದೆಲ್ಲ ಶುರುವಾಗೋದು.. ನಿಮ್ಗೆ ಕೋಪ ಬಂದ್ರೆ ತಾನೇ ಏನ್ ಮಾಡೋದು. ಈಶ್ವರಪ್ಪ ಏನ್ ಹಜಾಮತಿ (ಕ್ಷೌರ) ಮಾಡ್ತಿದ್ನಾ. ಬೈರತಿ ಬಸವರಾಜ್, ಎಂಟಿಬಿ ಸಹ ಅಲ್ಲಿಗೆ ಹೋಗ್ತಾ ಇದಾರೆ.. ಸಮಾಜಕ್ಕೆ ಅನ್ಯಾಯ ಮಾಡ್ತಾ ಇದ್ರು ಕೂಡ.. ಎಲ್ರು ಅಲ್ಲಿಗೆ […]
ದಾವಣಗೆರೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಕುರುಬ ಸಮಾಜದ ಮುಖಂಡರ ಮೇಲೆ ಕೆಂಡ ಮಂಡಲರಾಗಿದ್ದಾರೆ. ಆ ಮುಖಂಡರು ಸಿದ್ದರಾಮಯ್ಯಗೆ ಮನವಿ ನೀಡಲು ಬಂದಿದ್ದಾಗ ಈ ಪ್ರಕರಣ ನಡೆದಿದೆ. ಸಿದ್ದರಾಮಯ್ಯ ಆಕ್ರೋಶ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಯಡಿಯೂರಪ್ಪ ಬಂದ್ರೆನೇ ಇದೆಲ್ಲ ಶುರುವಾಗೋದು.. ನಿಮ್ಗೆ ಕೋಪ ಬಂದ್ರೆ ತಾನೇ ಏನ್ ಮಾಡೋದು. ಈಶ್ವರಪ್ಪ ಏನ್ ಹಜಾಮತಿ (ಕ್ಷೌರ) ಮಾಡ್ತಿದ್ನಾ. ಬೈರತಿ ಬಸವರಾಜ್, ಎಂಟಿಬಿ ಸಹ ಅಲ್ಲಿಗೆ ಹೋಗ್ತಾ ಇದಾರೆ.. ಸಮಾಜಕ್ಕೆ ಅನ್ಯಾಯ ಮಾಡ್ತಾ ಇದ್ರು ಕೂಡ.. ಎಲ್ರು ಅಲ್ಲಿಗೆ ಹೋಗ್ತಾ ಇದಾರಲ್ಲ. ಏನ್ ಮಾಡೋದು ಹೇಳಿ ಎನ್ನುತ್ತಾ ದಾವಣಗೆರೆ ಹರಿಹರ ನಗರದ ಬಿರ್ಲಾ ಅತಿಥಿ ಗೃಹದಲ್ಲಿ ಮನವಿ ಕೊಡಲು ಬಂದಿದ್ದ ಕುರುಬ ಸಮಾಜದ ಮುಖಂಡರ ಮೇಲೆ ಸಿದ್ದು ರೇಗಾಡಿದರು.
Published On - 2:13 pm, Thu, 28 November 19