‘ಮುನಿರತ್ನ BJPಗೆ ಬಂದಿದ್ದೇಕೆಂದು ಹೇಳುವ ಧೈರ್ಯ ಡಿಕೆಶಿ, ಸಿದ್ದರಾಮಯ್ಯಗೆ ಇದ್ಯಾ?’

ಬೆಂಗಳೂರು: ಮುನಿರತ್ನ ಬಿಜೆಪಿಗೆ ಬಂದಿದ್ದೇಕೆಂದು ಹೇಳುವ ಧೈರ್ಯವಿದೆಯಾ? ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯರಿಗೆ ಇದೆಯಾ? ಎಂದು ರಾಜರಾಜೇಶ್ವರಿನಗರ ಉಪಚುನಾವಣೆಯ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಪ್ರಶ್ನಿಸಿದ್ದಾರೆ. ಶೀಘ್ರದಲ್ಲೇ ಆಡಿಯೋ ಸಾಕ್ಷಿ ಬಿಡುಗಡೆ ಮುನಿರತ್ನ ಪಕ್ಷ ಬಿಡುವ ಪ್ರಮೇಯ ಬಂದಿದ್ದು ಯಾಕೆ? ಬಂಡೆ ರೀತಿ ಇರುತ್ತೇನೆಂದು ಡಿಕೆಶಿ ಹೇಳಿಕೊಂಡು ಓಡಾಡಿದ್ರು. ಆದರೆ, ಡಿ.ಕೆ.ಶಿವಕುಮಾರ್ ತಿಂಗಳಿಗೊಂದು ಗುಂಡಿ ತೋಡಿದ್ರು. ಮೈತ್ರಿ ಸರ್ಕಾರದಲ್ಲಿ 13 ತಿಂಗಳು 13 ಅಡಿ ಗುಂಡಿ ತೋಡಿದ್ರು ಎಂದು ಅಶ್ವತ್ಥ್​ ನಾರಾಯಣ ತಿರುಗೇಟು ನೀಡಿದ್ದಾರೆ. ಯಾರು ಮುನಿರತ್ನ […]

‘ಮುನಿರತ್ನ BJPಗೆ ಬಂದಿದ್ದೇಕೆಂದು ಹೇಳುವ ಧೈರ್ಯ ಡಿಕೆಶಿ, ಸಿದ್ದರಾಮಯ್ಯಗೆ ಇದ್ಯಾ?’
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 20, 2020 | 1:56 PM

ಬೆಂಗಳೂರು: ಮುನಿರತ್ನ ಬಿಜೆಪಿಗೆ ಬಂದಿದ್ದೇಕೆಂದು ಹೇಳುವ ಧೈರ್ಯವಿದೆಯಾ? ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯರಿಗೆ ಇದೆಯಾ? ಎಂದು ರಾಜರಾಜೇಶ್ವರಿನಗರ ಉಪಚುನಾವಣೆಯ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಪ್ರಶ್ನಿಸಿದ್ದಾರೆ.

ಶೀಘ್ರದಲ್ಲೇ ಆಡಿಯೋ ಸಾಕ್ಷಿ ಬಿಡುಗಡೆ ಮುನಿರತ್ನ ಪಕ್ಷ ಬಿಡುವ ಪ್ರಮೇಯ ಬಂದಿದ್ದು ಯಾಕೆ? ಬಂಡೆ ರೀತಿ ಇರುತ್ತೇನೆಂದು ಡಿಕೆಶಿ ಹೇಳಿಕೊಂಡು ಓಡಾಡಿದ್ರು. ಆದರೆ, ಡಿ.ಕೆ.ಶಿವಕುಮಾರ್ ತಿಂಗಳಿಗೊಂದು ಗುಂಡಿ ತೋಡಿದ್ರು. ಮೈತ್ರಿ ಸರ್ಕಾರದಲ್ಲಿ 13 ತಿಂಗಳು 13 ಅಡಿ ಗುಂಡಿ ತೋಡಿದ್ರು ಎಂದು ಅಶ್ವತ್ಥ್​ ನಾರಾಯಣ ತಿರುಗೇಟು ನೀಡಿದ್ದಾರೆ. ಯಾರು ಮುನಿರತ್ನ ಅವರನ್ನು ಪಕ್ಷದಿಂದ ಕಳುಹಿಸಿದ್ರು ಎಂಬುದನ್ನು ಸಾಬೀತುಪಡಿಸುವ ಆಡಿಯೋ ಸಾಕ್ಷಿ ಇದೆ. ಶೀಘ್ರದಲ್ಲೇ ಆಡಿಯೋ ಸಾಕ್ಷಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

‘ಮುನಿರತ್ನ ತಮ್ಮನ್ನು ಮಾರಿಕೊಂಡಿದ್ದಾರೆ ಅಂತಾ ಆಪಾದನೆ ಮಾಡ್ತಿದ್ದಾರೆ’ R.R. ನಗರದಲ್ಲಿ ಚುನಾವಣೆ ಬರುತ್ತದೆ ಎಂದು ಊಹಿಸಿರಲಿಲ್ಲ. ಕೋರ್ಟ್​​ನಲ್ಲಿ ಕೇಸ್ ನಡೆಯುತ್ತಿರುತ್ತದೆ ಎಂದು ಭಾವಿಸಿದ್ರು. ಕಾಂಗ್ರೆಸ್ ನಾಯಕರು ಹತಾಶರಾಗಿ ಮಾತನಾಡ್ತಿದ್ದಾರೆ. ಮುನಿರತ್ನ ತಮ್ಮನ್ನು ಮಾರಿಕೊಂಡಿದ್ದಾರೆ ಅಂತಾ ಆಪಾದನೆ ಮಾಡ್ತಿದ್ದಾರೆ. ಮುನಿರತ್ನ ಡಿ.ಕೆ.‌ ಶಿವಕುಮಾರ್ ಮತ್ತು ಡಿ.ಕೆ.ಸುರೇಶ್​ಗೆ ಆತ್ಮೀಯರು ಹಾಗೂ ಬೆಂಬಲಿಗರು. ಕಾಂಗ್ರೆಸ್ ಪಕ್ಷ ಬಿಡೋಕೆ ಯಾರು ಕಾರಣ ಎಂದು ಶಿವಕುಮಾರ್ ಸತ್ಯ ಹೇಳಬೇಕು ಎಂದು ಹೇಳಿದರು.

‘ನಾನು ಬಂಡೆ, ಮೈತ್ರಿ ಸರ್ಕಾರ ಬಿಡಲ್ಲ ಅಂತಾ ಹೇಳಿದ್ರು’ ಹದಿಮೂರು ತಿಂಗಳು ಜೋಡಿ ಎತ್ತು ಅಂತಾ ಸರ್ಕಾರ ಮಾಡಿದ್ರು. ನಾನು ಬಂಡೆ, ಮೈತ್ರಿ ಸರ್ಕಾರ ಬಿಡಲ್ಲ ಅಂತಾ ಹೇಳಿದ್ರು. ಅವರ ಜೊತೆಯಲ್ಲೇ ಇದ್ದುಕೊಂಡು ಹದಿಮೂರು ಅಡಿ ಗುಂಡಿ ತೋಡಿದ್ದಾರೆ. ಜೊತೆಯಲ್ಲೇ ಇದ್ದು ಷಡ್ಯಂತ್ರ ಮಾಡಿರೋದನ್ನು ನೋಡಿದ್ದೇವೆ. ಮೈತ್ರಿ ಸರ್ಕಾರ ಬೀಳೋದ್ದಕ್ಕೆ ಯಾರು ಕಾರಣ ಅನ್ನೋ ಸತ್ಯವನ್ನ ಹೇಳಬೇಕು. ಮುನಿರತ್ನ ಒಂದೇ ಒಂದು ರೂಪಾಯಿ ಹಣವನ್ನ ನಮ್ಮಿಂದ ಪಡೆದಿಲ್ಲ. ಅವರು ಮತ್ತು ಯಾರೂ ಕೂಡ ಹಣವನ್ನು ಪಡೆದಿಲ್ಲ. ಅವರ ಒಳಜಗಳದಿಂದ ಮೈತ್ರಿ ಸರ್ಕಾರ ಬಿತ್ತು ಎಂದು ಮೈತ್ರಿ ಸರ್ಕಾರದ ಬಗ್ಗೆ ಡಾ. ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.

Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
Video: ಪ್ರಬಲ ಭೂಕಂಪಕ್ಕೆ ನಲುಗಿದ ತೈವಾನ್
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
‘2 ರೆಕ್ಕೆ ಕೊಡು, ದೊಡ್ಡ ಸ್ಟಾರ್ ಆಗಬೇಕು’; ಟ್ರೋಫಿ ನೋಡಿ ತ್ರಿವಿಕ್ರಂ ಮಾತು
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಕೊಪ್ಪಳ: ಸ್ವಂತ ಹಣದಲ್ಲಿ ಸರ್ಕಾರಿ ಶಾಲೆಗೆ‌ ಬೋರ್​ವೆಲ್ ಕೊರೆಸಿದ ರೈತ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ