
ಬೆಂಗಳೂರು, (ನವೆಂಬರ್ 23): ನಗರದ ಯಲಹಂಕ ಬಳಿ ಇರುವ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಕೋರ್ಟ್ ಮೆಟ್ಟಿಲೇರಿದೆ. ಹೌದು…ದೇವನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು, ಗುತ್ತಿಗೆ ಒಪ್ಪಂದದ ಅಡಿಯಲ್ಲಿ ‘ಸಿಲಿಕಾನ್ ಬಿಲ್ಡರ್ಸ್ ಪ್ರೈವೇಟ್ ಲಿಮಿಟೆಡ್’ ಹೊಂದಿರುವ ಈ ಆಸ್ತಿಯ ಸ್ವಾಧೀನದಲ್ಲಿ ಶರ್ಮಿಳಾ ಅಥವಾ ಅವರ ಪ್ರತಿನಿಧಿಗಳು ಹಸ್ತಕ್ಷೇಪ ಮಾಡದಂತೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರ ಬೆನ್ನಲ್ಲೇ, ನವೆಂಬರ್ 22 ರಂದು ಬೆಂಗಳೂರಿಗೆ ಬಂದಿಳಿದ ಶರ್ಮಿಳಾ ಮತ್ತು ಅವರ ತಾಯಿ ವಿಜಯಮ್ಮ ಅವರನ್ನು ಯಲಹಂಕ ನಿವಾಸಕ್ಕೆ ತೆರಳದಂತೆ ಬೆಂಗಳೂರು ಪೊಲೀಸರು ವಿಮಾನ ನಿಲ್ದಾಣದಲ್ಲೇ ತಡೆದ್ದಾರೆ.
ವೈ.ಎಸ್.ಶರ್ಮಿಳಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಿಲಿಕಾನ್ ಬಿಲ್ಡರ್ಸ್ ಪ್ರೈವೆಟ್ ಲಿಮಿಟೆಡ್, ಇ.ಸಿ.ಸುಗುಣಮ್ಮ (ರಾಜಶೇರ್ ರೆಡ್ಡಿ ಪತ್ನಿ ತಾಯಿ) 2007ರಿಂದ ಫೆಬ್ರವರಿ 2027ರವರೆಗೆ ತಮಗೆ ಜಾಗ ಲೀಸ್ಗೆ ನೀಡಿದ್ದಾರೆ.ಲೀಸ್ಗೆ ಪಡೆದ ಜಾಗದಲ್ಲಿ ಕೃಷಿ, ತೋಟ, ಗೆಸ್ಟ್ಹೌಸ್ ನಿರ್ವಹಿಸುತ್ತಿದ್ದೇವೆ. ಜಾಗ ಅಭಿವೃದ್ಧಿಪಡಿಸಲು ಸಾಕಷ್ಟು ಹೂಡಿಕೆ ಮಾಡಿದ್ದೇವೆ. 2026ರ ಆ.27ರಂದು ಸುಗುಣಮ್ಮ ತಮ್ಮ ಮಗಳು, ಮೊಮ್ಮಗಳಿಗೆ ದಾನಪತ್ರ ನೀಡಿದ್ದಾರೆ. ಹೀಗಾಗಿ ಮೊದಲು ವೈ.ಎಸ್.ಶರ್ಮಿಳಾ ಗೆಸ್ಟ್ಹೌಸ್ನಲ್ಲಿರಲು ಅವಕಾಶ ನೀಡಿದ್ದೆವು. ಆದರೆ ಈಗ 3ನೇ ವ್ಯಕ್ತಿಗಳನ್ನೂ ಗೆಸ್ಟ್ಹೌಸ್ಗೆ ಕಳುಹಿಸುತ್ತಿದ್ದಾರೆ. ಅಲಂಕಾರ ಮಾಡಲೂ ಅಲ್ಲಿಗೆ ಜನ ಬರುತ್ತಿದ್ದಾರೆ ಎಂದು ಸಿಲಿಕಾನ್ ಬಿಲ್ಡರ್ಸ್, ಕೋರ್ಟ್ಗೆ ಲೀಸ್ ಡೀಡ್ ಹಾಜರುಪಡಿಸಿದೆ. ಈ ವಾದ ಆಲಿಸಿದ ದೇವನಹಳ್ಳಿಯ ಸಿವಿಲ್ ಕೋರ್ಟ್, ವೈ.ಎಸ್.ಶರ್ಮಿಳಾ ಹಾಗೂ ಅವರ ಪ್ರತಿನಿಧಿಗಳಿಗೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಅಲ್ಲದೇ ಸಿಲಿಕಾನ್ ಬಿಲ್ಡರ್ಸ್ನ ಸ್ವಾಧೀನದಲ್ಲಿ ಹಸ್ತಕ್ಷೇಪ ಮಾಡದಂತೆ ಮಧ್ಯಂತರ ನಿರ್ಬಂಧಕಾಜ್ಞೆ ವಿಧಿಸಿದೆ.
ಅವರ ಕುಟುಂಬಕ್ಕೆ ಸೇರಿದ ಫಾರ್ಮ್ ಹೌಸ್ಗೆ ಶರ್ಮಿಳಾ ಅವರನ್ನೇ ಏಕೆ ಪ್ರವೇಶಿಸಲು ನಿರ್ಬಂಧ ತರಲಾಗಿದೆ ಎನ್ನುವುದು ಪ್ರಶ್ನೆ ಉದ್ಭವಿಸುವುದು ಸಹಜ. ಹೌದು…ವೈಸ್ಆರ್ ರಾಜಶೇಖರ್ ರೆಡ್ಡಿ ಪತ್ನಿ ಭಾರತಿ ಅವರ ತಾಯಿ ಇ.ಸಿ.ಸುಗುಣಮ್ಮ ಅವರೇ ಈ ಯಲಹಂಕದ ಫಾರ್ಮ್ ಹೌಸ್ ನ ಮೂಲ ಮಾಲೀಕರಾಗಿದ್ದು, ಇದೇ 2026ರ ಆ.27ರಂದು ಸುಗುಣಮ್ಮ ತಮ್ಮ ಮಗಳು (ಭಾರತಿ) ಹಾಗೂ ಮೊಮ್ಮಗಳಿಗೆ (ಶರ್ಮಿಳಾ) ಈ ಫಾರ್ಮ್ ಹೌಸ್ ಅನ್ನು ದಾನವಾಗಿ ಪತ್ರದ ಮೂಲಕ ನೀಡಿದ್ದಾರೆ. ಆದ್ರೆ, ಇದಕ್ಕೂ ಮೊದಲು ಸುಗುಣಮ್ಮ ಅವರು ಈ ಫಾರ್ಮ್ ಹೌಸ್ ಅನ್ನು ಸಿಲಿಕಾನ್ ಬಿಲ್ಡರ್ಸ್ ಕಂಪನಿಗೆ 2007 ರಿಂದ ಫೆ. 2027ರವರೆಗೆ ಲೀಸ್ ನೀಡಿದ್ದಾರೆ. ಹೀಗಾಗಿ ಸಿಲಿಕಾನ್ ಬಿಲ್ಡರ್ಸ್, 2007ರಿಂದ ಗೆಸ್ಟ್ ಹೌಸ್ ನೋಡಿಕೊಳ್ಳುತ್ತಿದೆ.
ಇದರ ಮಧ್ಯೆ ಶರ್ಮಿಳಾ ಅವರು ಈ ಗೆಸ್ಟ್ ಹೌಸ್ನಲ್ಲಿ ತಮ್ಮ ಪುತ್ರಿ ಮದುವೆ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಇದಕ್ಕೆ ಸಿಲಿಕಾನ್ ಬಿಲ್ಡರ್ಸ್ ವಿರೋಧ ವ್ಯಕ್ತಪಡಿಸಿದೆ. ಇನ್ನೊಂದು ವರ್ಷ ಈ ಸ್ವತ್ತು ನಮ್ಮ ಸ್ವಾಧೀನದಲ್ಲಿದ್ದು, ಯಾವುದೇ ಕಾರ್ಯಕ್ರಮ ಮಾಡಲು ಬಿಡಲ್ಲ ಎಂದಿದೆ. ಆದರೂ ಸಹ ಶರ್ಮಿಳಾ, ಹಠಕ್ಕೆ ಬಿದ್ದು ಗೆಸ್ಟ್ ಹೌಸ್ನಲ್ಲಿ ಮಗಳ ಮದ್ವೆ ಮಾಡಲು ನಿರ್ಧರಿಸಿ , ಬೇಕಾದ ತಯಾರಿಗಳನ್ನು ಸಹ ಮಾಡಿಸಲು ಮುಂದಾಗಿದ್ದಾರೆ. ಹೀಗಾಗಿ ಅಂತಿಮವಾಗಿ ಸಿಲಿಕಾನ್ ಬಿಲ್ಡರ್ಸ್, ಶರ್ಮಿಳಾ ನಡೆಯನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದು, 2007 ರಿಂದ ಫೆ. 2027ರವರೆಗೆ ತಮಗೆ ಜಾಗ ಲೀಸ್ ಗೆ ನೀಡಿ ಎಂದು ಲೀಸ್ ದಾಖಲಾತಿಗಳನ್ನು ಕೋರ್ಟ್ಗೆ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಕೋರ್ಟ್ ಸಹ ಶರ್ಮಿಳಾ ಹಾಗೂ ಅವರ ಪ್ರತಿನಿಧಿಗಳಿಗೆ ಈ ಗೆಸ್ಟ್ ಹೌಸ್ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದೆ.
ಶರ್ಮಿಳಾ ಅವರು ತಮ್ಮ ಪುತ್ರಿ ಅಂಜಲಿಯ ವಿವಾಹವನ್ನು ಅಮೆರಿಕದಲ್ಲಿ ನೆಲೆಸಿರುವ ವೈದ್ಯ ಡಾ. ಸೋಮಲಾ ರಘುರಾಮ್ ರೆಡ್ಡಿ ಅವರೊಂದಿಗೆ ನವೆಂಬರ್ 25, 2026 ರಂದು ನಿಗದಿಪಡಿಸಿದ್ದರು. ವಿಶೇಷವೆಂದರೆ, ಈ ವಿವಾಹದ ಆಮಂತ್ರಣ ಪತ್ರಿಕೆಗಳಲ್ಲಿ ಮದುವೆ ಸ್ಥಳವಾಗಿ ಬೆಂಗಳೂರಿನ ‘ಯಲಹಂಕ ಅರಮನೆ’ಯ ವಿಳಾಸವನ್ನು ಮುದ್ರಿಸಲಾಗಿತ್ತು. ತಾವು ಮತ್ತು ತಮ್ಮ ಮಗಳು ಅಂಜಲಿ ಬೆಳೆದ ಮನೆ ಇದಾಗಿದ್ದು, ತಮಗೂ ಇಲ್ಲಿ ಹಕ್ಕಿದೆ ಎಂಬುದು ಶರ್ಮಿಳಾ ಅವರ ವಾದವಾಗಿತ್ತು. ಆದ್ರೆ, ಇದೀಗ ಕೋರ್ಟ್ ಶರ್ಮಿಳಾಗೆ ಶಾಕ್ ಕೊಟ್ಟಿದೆ.
ಆದರೂ ನವೆಂಬರ್ 22 ರಂದು ಬೆಂಗಳೂರಿಗೆ ಬಂದಿಳಿದ ಶರ್ಮಿಳಾ ಮತ್ತು ಅವರ ತಾಯಿ ವಿಜಯಮ್ಮ ಅವರು ಗೆಸ್ಟ್ ಹೌಸ್ ಹೋಗಲು ಮುಂದಾಗಿದ್ದಾರೆ. ಆದ್ರೆ, ಪೊಲೀಸರು ತಡೆದು, ಕೋರ್ಟ್ ತಮಗೆ ಮಧ್ಯಂತರ ನಿರ್ಬಂಧಿಸಿದೆ. ಹೀಗಾಗಿ ಈ ಗೆಸ್ಟ್ ಹೌಸ್ಗೆ ಪ್ರವೇಶಿಸುವಂತಿಲ್ಲ ಎಂದು ತಿಳಿ ಹೇಳಿದ್ದಾರೆ. ಹೀಗಾಗಿ ಶರ್ಮಿಳಾ ಲೀಲಾ ಪ್ಯಾಲೆಸ್ ಹೋಟೆಲ್ಗೆ ತೆರಳಿ ವಾಸ್ತವ್ಯ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುಮಾರು 23 ಎಕರೆ ವಿಸ್ತೀರ್ಣದಲ್ಲಿ 10 ಎಕರೆಗೂ ಹೆಚ್ಚು ವಿಸ್ತೀರ್ಣದ ಎರಡು ಪ್ರಮುಖ ಬಂಗಲೆಗಳಿವೆ. ಸುಮಾರು 40ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿರುವ ಈ ಅರಮನೆಯಲ್ಲಿ ಖಾಸಗಿ ಹೆಲಿಪ್ಯಾಡ್, ವಿಶಾಲವಾದ ಉದ್ಯಾನವನ, ಸುಂದರ ಕಾರಂಜಿಗಳು, ಕಾರ್ಪೊರೇಟ್ ಕಚೇರಿ, ಸಿಬ್ಬಂದಿ ವಸತಿಗೃಹಗಳು ಮತ್ತು ಅತ್ಯಾಧುನಿಕ ವ್ಯವಸ್ಥೆಯಿದೆ.
Published On - 4:10 pm, Mon, 23 November 26