ಪ್ರಿಯತಮೆಗೆ ಬಾಡಿಗೆ ಮನೆ ಮಾಡಿಟ್ಟಿದ್ದ: ಆಗಾಗ ಬಂದು ಹೋಗುತ್ತಿದ್ದವ ನಿನ್ನೆ ಕೊಂದು ಹೋದ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಚಾಕುವಿನಿಂದ ಇರಿದು ಪ್ರಿಯತಮೆಯನ್ನು ಪ್ರಿಯಕರ ಕೊಲೆಗೈದಿರುವಂತಹ ಘಟನೆ ನಡೆದಿದೆ. 4 ತಿಂಗಳ ಹಿಂದೆ ಹೊಸಕೋಟೆಯಲ್ಲಿ ವೇಣು ಬಾಡಿಗೆ ಮನೆಮಾಡಿ ಇರಿಸಿದ್ದ. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿದ್ದಳು. ನಿನ್ನೆ ಮನೆಗೆ ಬಂದಿದ್ದ ವೇಣು ಕೊಲೆ ಮಾಡಿ ಮುಂಜಾನೆ ಪರಾರಿ ಆಗಿದ್ದಾನೆ.
ದೇವನಹಳ್ಳಿ, ಜೂನ್ 24: ಚಾಕುವಿನಿಂದ ಇರಿದು (stabbed) ಪ್ರಿಯತಮೆಯನ್ನು (lover) ಪ್ರಿಯಕರ ಕೊಲೆಗೈದಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ದುಷ್ಕೃತ್ಯ ನಡೆದಿದೆ. ಆಂಧ್ರಪ್ರದೇಶದ ಮೂಲದ ಹೇಮಾವತಿ(35) ಮೃತ ಮಹಿಳೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ವೇಣುನಿಂದ ಕೃತ್ಯವೆಸಗಲಾಗಿದೆ. ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
4 ತಿಂಗಳ ಹಿಂದೆ ಹೊಸಕೋಟೆಯಲ್ಲಿ ವೇಣು ಬಾಡಿಗೆ ಮನೆಮಾಡಿ ಇರಿಸಿದ್ದ. ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿದ್ದಳು. ಆಗಾಗ ವೇಣು ಹೇಮಾವತಿ ಮನೆಗೆ ಬಂದು ಇದ್ದು ಹೋಗುತ್ತಿದ್ದ. ನಿನ್ನೆ ಮನೆಗೆ ಬಂದಿದ್ದ ವೇಣು ಕೊಲೆ ಮಾಡಿ ಮುಂಜಾನೆ ಪರಾರಿ ಆಗಿದ್ದಾನೆ.
ಇದನ್ನೂ ಓದಿ: ಬಾಡಿಗೆ ಆಸೆಗೆ ಬಿದ್ದು ಕೋಟ್ಯಾಂತರ ರೂ ವೆಚ್ಚದ ಮನೆ, ಫ್ಲಾಟ್ ಕಳೆದುಕೊಂಡ ಮಾಲೀಕರು: ವಂಚಿಸಿ ಪರಾರಿಯಾದ ಬ್ರೋಕರ್
ಕೊಲೆ ಮಾಡಿ ಚಿಂತಾಮಣಿಗೆ ಹೋಗಿ ಮನೆಯಲ್ಲಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥ ವೇಣುನನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕೊಟ್ಟ ಸಾಲ ವಾಪಸ್ ಕೊಡದಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ
ಬೀದರ್: ಕೊಟ್ಟ ಸಾಲ ವಾಪಸ್ ಕೊಡದಿದ್ದಕ್ಕೆ ಸ್ನೇಹಿತನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೀದರ್ ತಾಲೂಕಿನ ಯಾಕತನಪುರ ಗ್ರಾಮದ ಬಳಿ ದುಷ್ಕೃತ್ಯ ನಡೆದಿದೆ. ಮೊಹಮ್ಮದ್ ಸಿರಾಜ್ ತಲೆಗೆ ಸುತ್ತಿಗೆಯಿಂದ ಹೊಡೆದು ಬಾಲ್ಯಸ್ನೇಹಿತ ಯಾಸೀನ್ ಕೊಲೆ ಮಾಡಿದ್ದಾನೆ. ಆರೋಪಿ ಯಾಸೀನ್ನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ಮಾಡಲಾಗುತ್ತಿದೆ. ಮನ್ನಾಖೇಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ಗಳ ಮಧ್ಯೆ ಟೈಮಿಂಗ್ಸ್ ಫೈಟ್: ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ
ಮಂಗಳೂರು: ಖಾಸಗಿ ಬಸ್ಗಳ ಮಧ್ಯೆ ಟೈಮಿಂಗ್ಸ್ ಫೈಟ್ ಹಿನ್ನೆಲೆ ಓವರ್ ಟೇಕ್ ಮಾಡುವ ಭರದಲ್ಲಿ ಅಪಘಾತ ಸಂಭವಿಸಿರುವಂತಹ ಘಟನೆ ಮಂಗಳೂರು ನಗರದ ಜ್ಯೋತಿ ಎಂಬಲ್ಲಿ ನಡೆದಿದೆ. ಮಂಗಳೂರಿನಿಂದ ಉಡುಪಿ ಕಡೆಗೆ ಎರಡು ಖಾಸಗಿ ಬಸ್ಗಳು ಸಂಚರಿಸುತ್ತಿದ್ದವು.
ಇದನ್ನೂ ಓದಿ: ತುಮಕೂರು: ಹಲ್ಲೆಗೆ ಯತ್ನ, ಕಳ್ಳತನದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
ಪ್ರಯಾಣಿಕರನ್ನು ಪಿಕಪ್ ಮಾಡಲು ಬಸ್ಗಳ ಮಧ್ಯೆ ಪೈಪೋಟಿಗೆ ಇಳಿದಿದ್ದು, ಓವರ್ ಟೇಕ್ ಮಾಡುವಾಗ ಎರಡು ಬಸ್ಗಳ ನಡುವೆ ಅಪಘಾತ ನಡೆದಿದೆ. ಅಪಘಾತ ಬಳಿಕ ನಡುರಸ್ತೆಯಲ್ಲೇ ಬಸ್ ನಿಲ್ಲಿಸಿ ಬಸ್ ಸಿಬ್ಬಂದಿಗಳ ಮಾತಿನ ಚಕಮಕಿ ಉಂಟಾಗಿದೆ.
ಖಾಸಗಿ ಬಸ್ ಸಿಬ್ಬಂದಿಗಳ ಟೈಮಿಂಗ್ಸ್ ಫೈಟ್ಗೆ ಸಾರ್ವಜನಿಕರು ಕಿಡಿ ಕಾರಿದ್ದು ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.