ಶಾಲೆ ನಿರ್ಮಾಣ ಹಂತ ಕಟ್ಟಡದ ಬಳಿ ಮೂತ್ರವಿಸರ್ಜನೆಗೆ ತೆರಳಿದಾಗ ಕುಸಿದ ಗೋಡೆ, ಸಹಪಾಠಿಯ ಎದುರೇ ಪ್ರಾಣ ಬಿಟ್ಟ ಬಾಲಕ

ಏಕಾಏಕಿ ಗೋಡೆ ಕುಸಿದು ಆ ಇಬ್ಬರು ಬಾಲಕರ ಮೇಲೆ ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ವಿಶೃತ್ ಸ್ಥಳದಲ್ಲೇ ಸಾವಿನಪ್ಪಿದ್ದಾನೆ. ಇನ್ನು ಸ್ನೇಹಿತನನ್ನು ಕಾಪಾಡಲು ಹೋದ ಪ್ರಭು ಮೇಲೆ ಇಟ್ಟಿಗೆ ಬಿದ್ದು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.

ಶಾಲೆ ನಿರ್ಮಾಣ ಹಂತ ಕಟ್ಟಡದ ಬಳಿ ಮೂತ್ರವಿಸರ್ಜನೆಗೆ ತೆರಳಿದಾಗ ಕುಸಿದ ಗೋಡೆ, ಸಹಪಾಠಿಯ ಎದುರೇ ಪ್ರಾಣ ಬಿಟ್ಟ ಬಾಲಕ
ಶಾಲಾ ಆವರಣದಲ್ಲಿ ಕುಚಿಕು ಸಹಪಾಠಿಯ ಎದುರೇ ಪ್ರಾಣ ಬಿಟ್ಟ ಬಾಲಕ (ಮೇಲಿನ ಚಿತ್ರದಲ್ಲಿ)
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಸಾಧು ಶ್ರೀನಾಥ್​

Updated on:Jun 17, 2023 | 1:55 PM

ಅವರಿಬ್ಬರೂ ಜಿಗರಿ ದೋಸ್ತರು… ಎಳೆಯ ವಯಸ್ಸಾದರು ಒಂದೇ ಜೀವ-ಒಂದೇ ಭಾವ ಎನ್ನುವಂತಿತ್ತು ಅವರ ಸ್ನೇಹ.. ಇಂತಹ ಸ್ನೇಹದ ಮೇಲೆ ಯಾರ ಕಣ್ಣು ಬಿತ್ತೋ ಏನೋ.. ಎಲ್ಲರಿಗಿಂತ ಬೇಗ ಶಾಲೆಗೆ ಹೋಗಿದ್ದ ಅವರಿಬ್ಬರಲ್ಲಿ ಒಬ್ಬ ಎಂದೂ ಬಾರದ ಲೋಕಕ್ಕೆ ತೆರಳಿದ್ದಾನೆ (Death).. ಮತ್ತೊಬ್ಬ ಆಸ್ಪತ್ರೆ ಸೇರಿದ್ದಾನೆ (Injury). ತಮ್ಮದಲ್ಲ ತಪ್ಪಿಗೆ ಅಮಾಯಕ ಜೀವವೊಂದು ಬಲಿಯಾದ ಕಥೆಯಿದು. ಊರ ಕಣ್ಣು ..ಮಾರಿ ಕಣ್ಣು ಯಾವ ಮಸಣಿ ಕಣ್ಣು ಬಿದ್ದಿತ್ತೋ ಆ ಎಳೆಯ ಸ್ನೇಹ ಜೀವಿಗಳ ಮೇಲೆ… ಈ ಸಾಲುಗಳು ಈಗ ನಡೆದಿರುವ ಘಟನೆಗೆ ಸೂಕ್ತವಾಗಿದೆ. ಯಾಕೆಂದರೆ ತನ್ನದಲ್ಲ ತಪ್ಪಿಗೆ, ಮತ್ತ್ಯಾರದೋ ನಿರ್ಲಕ್ಷ್ಯದಿಂದಾಗಿ, ಬಾಳಿ ಬದುಕ ಬೇಕಾಗಿದ್ದ ಮಗವೊಂದು ಶಾಲೆಯ (School) ಆವರಣದಲ್ಲಿಯೇ, ತನ್ನ ಪ್ರಾಣ ಸ್ನೇಹಿತನ ಎದುರೇ ಜೀವ ಬಿಟ್ಟ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ‌ ಶಾಲೆಯ ಆವರಣದಲ್ಲಿ (Kiresur Village, Hubballi) ನಿರ್ಮಾಣ ಹಂತದ ಗೋಡೆ ಕುಸಿದು ವಿದ್ಯಾರ್ಥಿ 9 ವರ್ಷದ ವಿಶೃತ್ ಬೆಳಗಲಿ ಸಾವನ್ನಪ್ಪಿದ್ದಾನೆ.

ಸ್ನೇಹಿತನ್ನು ಕಾಪಾಡಲು ಹೋದ ಪ್ರಭು ನಾಗಾವಿ ಎಂಬ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ವಿವೇಕ ಯೋಜನೆಯಡಿ ಹೆಚ್ಚುವರಿ ಕೊಠಡಿ ಮಂಜೂರಾಗಿದ್ದು, ಹಲವಾರು ತಿಂಗಳಿಂದ ಈ ಕಟ್ಟಡ ಕಾಮಗಾರಿ ನಡೆಯುತ್ತಿದೆ. ‌ನಿನ್ನೆ ಮತ್ತೊಂದು ಹಂತದ ಗೋಡೆ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ಗೋಡೆ ಇನ್ನೂ ಹಸಿಯಾಗಿತ್ತು.

ಇಂದು ವಿಶೃತ್ ಮತ್ತು ಪ್ರಜ್ವಲ್ ಬೆಳಗ್ಗೆ ಇಬ್ಬರು ಬೇಗ ಶಾಲೆಗೆ ಹೋಗಿದ್ದಾರೆ. ಇನ್ನೂ ಶಾಲೆಯ ಸಮಯವಾಗಿರದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಯಾವುದೇ ಶಿಕ್ಷಕರು ಇರಲಿಲ್ಲ. ಹೀಗಾಗಿ ನಿರ್ಮಾಣದ ಹಂತದ ಕಟ್ಟಡ ಬಳಿಗೆ ಮೂತ್ರವಿಸರ್ಜನೆಗೆ ತೆರಳಿದ್ದು, ಈ ವೇಳೆ ಏಕಾಏಕಿ ಗೋಡೆ ಕುಸಿದು ಈ ಬಾಲಕರ ಮೇಲೆ ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ವಿಶೃತ್ ಸ್ಥಳದಲ್ಲೇ ಸಾವಿನಪ್ಪಿದ್ದಾನೆ. ಇನ್ನು ಸ್ನೇಹಿತನನ್ನು ಕಾಪಾಡಲು ಹೋದ ಪ್ರಭು ಮೇಲೆ ಇಟ್ಟಿಗೆ ಬಿದ್ದು ಕಾಲುಗಳಿಗೆ ಗಂಭೀರ ಗಾಯಗಳಾಗಿವೆ.

ಇದನ್ನೂ ಓದಿ: ಎರಡು ವರ್ಷದಿಂದ ಪ್ರೀತಿಸಿ, ವಿಶೇಷಚೇತನ ಮಹಿಳೆಯನ್ನು ಮದುವೆಯಾದ ರೈತ

ಇನ್ನು ವಿದ್ಯಾರ್ಥಿಯ ಈ ಸಾವಿಗೆ ಗುತ್ತಿಗೆದಾರನ ನಿರ್ಲಕ್ಷ್ಯವೇ ಕಾರಣ ಎಂದು ಹೇಳಲಾಗುತ್ತಿದೆ. ಕಟ್ಟಡ ಕಳಪೆ ಕಾಮಗಾರಿ ಒಂದು ಕಡೆಯಾದರೆ, ಮತ್ತೊಂದು ಕಡೆ ಕಟ್ಟಡಕ್ಕೆ ಭದ್ರತಾ ಸಿಬ್ಬಂದಿ ನೇಮಿಸುವಂತೆ ಶಾಲಾ ಆಡಳಿತ ಮಂಡಳಿ ಹೇಳಿದ್ದರೂ, ಯಾವುದೇ ಕಾವಲುಗಾರರನ್ನು ನೇಮಿಸದೇ ಇರುವುದು ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

ಸದ್ಯ ಪ್ರಭುಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಮೃತ ವಿಶೃತ್ ಶಾಲೆಯಲ್ಲಿ ಬಹಳಷ್ಟು ಬುದ್ಧಿವಂತ ವಿದ್ಯಾರ್ಥಿ. ಇಂತಹ ವಿದ್ಯಾರ್ಥಿಗೆ ದೇವರು ಈ ರೀತಿ ಮೋಸ ಮಾಡುತ್ತಾನೆ ಅಂತ ಅಂದುಕೊಂಡಿರಲ್ಲ ಎಂದು ಶಿಕ್ಷಕರು ಕಣ್ಣೀರು ಹಾಕಿದ್ದಾರೆ. ಇನ್ನು ಘಟನೆಯ ಬಗ್ಗೆ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಲಾಗುತ್ತದೆ. ಜೊತೆಗೆ ಗುತ್ತಿಗೆದಾರನ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನುವುದು ಅಧಿಕಾರಿಗಳ ಮಾತು.

ಒಟ್ಟಿನಲ್ಲಿ ಯಾರದ್ದೋ ನಿರ್ಲಕ್ಷ್ಯಕ್ಕೆ ಅರಳುವ ಮುನ್ನವೇ ಹಸಿ ಕಂದಮ್ಮನ ಜೀವನ ಕಮರಿಹೋಗಿದೆ. ನೆಚ್ಚಿನ ಶಾಲೆಯಲ್ಲಿ ಪ್ರಾಣ ಸ್ನೇಹಿತನ ಎದುರೇ ಜೀವ ಬಿಟ್ಟ ವಿಶೃತ್ ಗೆ ಮತ್ತು ಕುಟುಂಬಕ್ಕೆ ನ್ಯಾಯ ಸೀಗಬೇಕಿದೆ.

ಹುಬ್ಬಳ್ಳಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Published On - 1:51 pm, Sat, 17 June 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್