ಆಕ್ರೋಶ ಬೆನ್ನಲ್ಲೇ ವಿವಾದಿತ ಪಠ್ಯ ವಾಪಸ್ ಪಡೆದ ಕರ್ನಾಟಕ ವಿವಿ: ಪರೀಕ್ಷೆ ಮುಂದೂಡಿಕೆ

ಕರ್ನಾಟಕ ವಿಶ್ವವಿದ್ಯಾಲಯದ ಬೆಳಗು-1 ಪಠ್ಯಪುಸ್ತಕದ ಒಂದು ಅಧ್ಯಾಯ ರಾಷ್ಟ್ರೀಯತೆಯ ವಿಷಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯವು ಆ ಅಧ್ಯಾಯವನ್ನು ವಾಪಸ್ ಪಡೆದಿದೆ ಮತ್ತು ಅದರ ಆಧಾರದ ಮೇಲೆ ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿ ವಿವಿ ಕುಲಸಚಿವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಆಕ್ರೋಶ ಬೆನ್ನಲ್ಲೇ ವಿವಾದಿತ ಪಠ್ಯ ವಾಪಸ್ ಪಡೆದ ಕರ್ನಾಟಕ ವಿವಿ: ಪರೀಕ್ಷೆ ಮುಂದೂಡಿಕೆ
ಆಕ್ರೋಶ ವ್ಯಕ್ತ ಬೆನ್ನಲ್ಲೇ ವಿವಾದಿತ ಪಠ್ಯ ವಾಪಸ್ ಪಡೆದ ಕರ್ನಾಟಕ ವಿವಿ: ಪರೀಕ್ಷೆ ಮುಂದೂಡಿಕೆ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on:Jan 24, 2025 | 9:46 PM

ಧಾರವಾಡ, ಜನವರಿ 24: ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ (Karnataka University) ಬಿಎ ಪದವಿ ಪುಸ್ತಕದಲ್ಲಿನ ಪಠ್ಯದ ವಿಚಾರ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದ ಹಿನ್ನಲೆ ವಿವಾದಿತ ನಾಲ್ಕನೇ ಅಧ್ಯಾಯ ಕೈಬಿಟ್ಟು ಪಠ್ಯಪುಸ್ತಕ ಮುಂದುವರಿಕೆ ವಿವಿ ಮುಂದಾಗಿದ್ದು, ಕವಿವಿ ಮೌಲ್ಯಮಾಪನ ಕುಲಸಚಿವರಿಂದ ಆದೇಶ ಹೊರಡಿಸಲಾಗಿದೆ.

ಆದೇಶದಲ್ಲೇನಿದೆ?

ಕರ್ನಾಟಕ ವಿಶ್ವವಿದ್ಯಾಲಯದ 2024-25 ಸಾಲಿನ ಕನ್ನಡ ಸ್ನಾತಕ ಪದವಿ ಬಿಎ ಪ್ರಥಮ ಸೆಮಿಸ್ಟರ್ ಪಠ್ಯಪುಸ್ತಕ ಬೆಳಗು – 1ರಲ್ಲಿ ಪ್ರಕಟವಾಗಿದ್ದ ನಾಲ್ಕನೇ ಅಧ್ಯಾಯದ “ರಾಷ್ಟ್ರೀಯತೆಯ ಆಚರಣೆಯ ಸುತ್ತ” ಕುರಿತು ರಾಮಲಿಂಗಪ್ಪ 6 ಬೇಗೂರ ಅವರು ಬರೆದ ಲೇಖನದಲ್ಲಿ, ಕೆಲವು ಆಕ್ಷೇಪನಾರ್ಹ ಅಂಶಗಳನ್ನು ಒಳಗೊಂಡಿವೆ ಎಂಬ ವಿಷಯ ಮಾಧ್ಯಮ ಹಾಗೂ ಗಣ್ಯರಿಂದ ವ್ಯಕ್ತವಾಗಿದೆ.

ಇದನ್ನೂ ಓದಿ: ವಿವಾದಕ್ಕೀಡಾದ ಧಾರವಾಡ ವಿವಿ ಕನ್ನಡ ಪಠ್ಯ ಪುಸ್ತಕ: ಎಡಪಂಥೀಯ ಚಿಂತನೆ ಹೇರಿದ ಆರೋಪ

ಈ ನಿಟ್ಟಿನಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಆಡಳಿತ ಇಂದು ಈ ಲೇಖನವನ್ನು ನಿಯಮಾನುಸಾರ ವಿವಿಧ ಪ್ರಾಧಿಕಾರಗಳ ಸಭೆ ಜರುಗಿಸಿ ಸದರ ಲೇಖನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದು ಕ್ರಮಜರುಗಿಸಲಾಗಿದೆ.

ಘಟಕ-1ರ ನಾಲ್ಕನೆಯ ಅಧ್ಯಾಯದ ಈ ಲೇಖನವನ್ನು ತಕ್ಷಣದಿಂದ ಜಾರಿಗೆ ಬರುವ ಕೈಬಿಟ್ಟು (ಹೊರತುಪಡಿಸಿ) ಬೆಳಗು-1 ಪಠ್ಯಪುಸ್ತಕವನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ತತ್ಸಮಂಭಂಧಿತ ಪೂರಕ ಕಾರ್ಯಗಳನ್ನು ಜಾರಿ ಮಾಡುವುದಾಗಿ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಠ್ಯ ವಿವಾದ: ಜ.29ರಂದು ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

ಇನ್ನು ಪಠ್ಯ ವಿವಾದ ಹಿನ್ನೆಲೆ ಜ.29ರಂದು ನಡೆಯಬೇಕಿದ್ದ ಎನ್‌ಇಪಿ ಸೆಮಿಸ್ಟರ್-1 ಪರೀಕ್ಷೆಯನ್ನು ಮುಂದೂಡಿಕೆ ಮಾಡಲಾಗಿದೆ. ವಿವಾದಿತ ಪಠ್ಯ ಬೆಳಗು-1 ಕೃತಿ ಆಧಾರಿತ ಪ್ರಶ್ನೆ ಪತ್ರಿಕೆವಾಗಿತ್ತು. ಆದರೆ ಬೆಳಗು-1 ಕೃತಿಯ ನಾಲ್ಕನೇ ಪಾಠ ವಿವಾದದ ಬೆನ್ನಲ್ಲಿಯೇ ಪಾಠ ವಾಪಸ್ ಪಡೆದಿದ್ದ ಕವಿವಿ, ಈಗ ಪರೀಕ್ಷೆ ಸಹ ಮುಂದೂಡಿದೆ.

ಬಿಎ, ಬಿಪಿಎ ಮ್ಯೂಸಿಕ್‌, ಬಿಎಫ್​ಎ, ಬಿಎಸ್​ಡಬ್ಲ್ಯೂ, ಬಿವಿಎ, BSc(ಹೋಮ್ ಸೈನ್ಸ್), ಬಿಟಿಟಿಎಂ ಈ ಎಲ್ಲಾ ಕೋರ್ಸ್‌ಗಳಿಗೆ ಬೆಳಗು-1 ಕೃತಿ ಸೇರಿತ್ತು. ಆದರೆ ಇದೀಗ ತಾಂತ್ರಿಕ ಕಾರಣದ ನೆಪ ಹೇಳಿ ಪರೀಕ್ಷೆ ಮುಂದೂಡಿಕೆ ಮಾಡಿ ಕವಿವಿ ಮೌಲ್ಯಮಾಪನ ಕುಲಸಚಿವರಿಂದ ಆದೇಶ ಹೊರಡಿಸಿದ್ದು, ಮುಂದಿನ ದಿನಾಂಕ ನಂತರ ತಿಳಿಸುವುದಾಗಿ ಹೇಳಿದ್ದಾರೆ.

ಕುಲಪತಿ ಪ್ರೊ. ಜಯಶ್ರೀ ಹೇಳಿದ್ದಿಷ್ಟು

ಈ ಬಗ್ಗೆ ಧಾರವಾಡದಲ್ಲಿ ಕುಲಪತಿ ಪ್ರೊ. ಜಯಶ್ರೀ ಹೇಳಿಕೆ ನೀಡಿದ್ದು, ಈ ಬಗ್ಗೆ ಈಗಾಗಲೇ ಸಮಿತಿ ರಚಿಸಲಾಗಿದೆ. ಸಮಿತಿಯವರು ವರದಿಯನ್ನು ಕೂಡ ಕೊಟ್ಟಿದ್ದಾರೆ. ಈಗಾಗಲೇ ನಾವು ಆ ಪಾಠವನ್ನು ಕೈಬಿಟ್ಟಿದ್ದೇವೆ. ಆ ಪಾಠ ಕೈಬಿಟ್ಟು ಪರೀಕ್ಷೆ ಮುಂದುವರೆಸಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಧಾರವಾಡ ಅಧಿಕೃತ ಮಹಾನಗರ ಪಾಲಿಕೆ: ಸರ್ಕಾರ ಘೋಷಣೆ

ಪುಸ್ತಕ ಸಮಿತಿ ಮೇಲೆ ಕ್ರಮ ಕೈಗೊಳ್ಳುವ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನಾವು ಸಿಂಡಿಕೇಟ್ ಸದಸ್ಯರ ಸಭೆ ಮಾಡುತ್ತೇವೆ. ಅದರಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:44 pm, Fri, 24 January 25

ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಕಾನ್ಪುರದಲ್ಲಿ ಸ್ಕೂಟರ್ ಸವಾರಿ ಮಾಡುತ್ತಿದ್ದ ಮಹಿಳೆಗೆ ಕಚ್ಚಿದ ಸಾಕು ನಾಯಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಅಕ್ರಮ ಹಣ ವರ್ಗಾವಣೆ ಬಗ್ಗೆ ಎಲ್ಲರೆದುರೇ ಅತ್ತು ಗೋಳಾಡಿದ ಕಾಂಗ್ರೆಸ್ ಶಾಸಕಿ
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಜೀ ಕನ್ನಡದ ಹೊಸ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಕಾರ್​ ಶೋರೂಂನಲ್ಲಿ ಅಗ್ನಿ ಅವಘಡ, ಸುಟ್ಟು ಭಸ್ಮವಾದ ಹೊಸ ವಾಹನಗಳು
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ