AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತ್ಯೇಕ ಘಟನೆ: 3 ಅಪ್ರಾಪ್ತ ಬಾಲಕರಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಬಾಲಕಿಗೆ ಕಿರುಕುಳ, ಹಲ್ಲೆ

ಹುಬ್ಬಳ್ಳಿಯಲ್ಲಿ ಮತ್ತೆ ಅಪ್ರಾಪ್ತರ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬಂದಿವೆ. ಅಪ್ರಾಪ್ತ ಬಾಲಕಿಯಿಂದ ಅತ್ಯಾಚಾರ, ಮತ್ತೊಬ್ಬ ಬಾಲಕಿಯ ಮೇಲೆ ಹಲ್ಲೆ ನಡೆಸಿರುವ ಘಟನೆಗಳು ನಗರವನ್ನು ಬೆಚ್ಚಿಬೀಳಿಸಿವೆ. ಕಳೆದ ವರ್ಷದ ಘೋರ ಘಟನೆಯ ನೆನಪು ಮರುಕಳಿಸಿದ್ದು, ಪೊಲೀಸರು ಪೋಷಕರಿಗೆ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಪ್ರತ್ಯೇಕ ಘಟನೆ: 3 ಅಪ್ರಾಪ್ತ ಬಾಲಕರಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಬಾಲಕಿಗೆ ಕಿರುಕುಳ, ಹಲ್ಲೆ
ಪ್ರಾತಿನಿಧಿಕ ಚಿತ್ರ
ಸಂಜಯ್ಯಾ ಚಿಕ್ಕಮಠ
| Edited By: |

Updated on:Jan 03, 2026 | 9:05 PM

Share

ಹುಬ್ಬಳ್ಳಿ, ಜನವರಿ 03: ನಗರದಲ್ಲಿ ಕಳೆದ ವರ್ಷ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ (Assaulted) ಮತ್ತು ಕೊಲೆ ಘಟನೆ ನಂತರ ನಡೆದ ಎನಕೌಂಟರ್ ದೇಶದಲ್ಲಿ ದೊಡ್ಡ ಸುದ್ದಿಯಾಗಿತ್ತು. ಇದೀಗ ಇದೇ ಹುಬ್ಬಳ್ಳಿಯಲ್ಲಿ (hubballi) ಮತ್ತೆ ಅಪ್ರಾಪ್ತ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ಅತ್ಯಾಚಾರ ಮಾಡಿದ್ದಾರೆ. ಅಷ್ಟೇ ಅಲ್ಲಾ ವಿಡಿಯೋ ಕೂಡ ಮಾಡಿಟ್ಟಿಕೊಂಡು ತಮ್ಮ ವಿಕೃತಿ ಮೆರದಿದ್ದಾರೆ. ಇನ್ನೊಂದೆಡೆ ಶಾಲಾ ಬಾಲಕಿಗೆ ಅಪ್ರಾಪ್ತರು ಕಿರುಕುಳ ನೀಡಿ ಹಲ್ಲೆ ಮಾಡಿದ ಘಟನೆ ಕೂಡ ನಡೆದಿದೆ. ಎರಡು ಪ್ರತ್ಯೇಕ ಪ್ರಕರಣಗಳ ಆರೋಪಿಗಳೆಲ್ಲಾ ಅಪ್ರಾಪ್ತರೇ ಆಗಿದ್ದು, ಹುಬ್ಬಳ್ಳಿ ಜನರನ್ನು ಬೆಚ್ಚಿಬೀಳಿಸಿದೆ.

ನಡೆದದ್ದೇನು?

ಹೌದು ಕಳೆದ ವರ್ಷವಷ್ಟೇ ಹುಬ್ಬಳ್ಳಿಯಲ್ಲಿ ಐದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಬಿಹಾರ್ ಮೂಲದ ವ್ಯಕ್ತಿ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ನಂತರ ಆರೋಪಿಯನ್ನು ಎನಕೌಂಟರ್ ಮಾಡಲಾಗಿತ್ತು. ಈ ಪ್ರಕರಣದಿಂದ ಹುಬ್ಬಳ್ಳಿ ಮಾತ್ರವಲ್ಲ, ಇಡೀ ರಾಜ್ಯದ ಜನರು ಬೆಚ್ಚಿಬಿದ್ದಿದ್ದರು. ಆದರೆ ಇದೀಗ ಮತ್ತೆ ಹುಬ್ಬಳ್ಳಿಯ ಜನರು ಬೆಚ್ಚಿಬಿದ್ದಿದ್ದಾರೆ. ಯಾಕಂದ್ರೆ ಏಳನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಮೇಲೆ ಮೂವರು ಅಪ್ರಾಪ್ತ ಬಾಲಕರು ಅತ್ಯಾಚಾರ ಮಾಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ

ಹುಬ್ಬಳ್ಳಿ ನಗರದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೊಂದು ಘಟನೆ ನಡೆದಿದೆ. ಒಂದೇ ಏರಿಯಾದಲ್ಲಿ ವಾಸವಾಗಿರುವ ಬಾಲಕಿ ಮತ್ತು ಮೂವರು ಅಪ್ರಾಪ್ತ ಬಾಲಕರು ಪರಿಚಿತರೇ. ಓರ್ವ ಬಾಲಕನ ಮನೆಯಲ್ಲಿ ಯಾರು ಇಲ್ಲದೇ ಇದ್ದಾಗ, ಬಾಲಕಿಯನ್ನು ಕರೆದುಕೊಂಡು ಹೋಗಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ. ನಂತರ ಅದನ್ನ ವಿಡಿಯೋ ಮಾಡಿಟ್ಟುಕೊಂಡಿದ್ದ. ಆತ ತನ್ನ ಇನ್ನೊಬ್ಬ ಸ್ನೇಹಿತನಿಗೆ ಹೇಳಿದ್ದ. ಆತ ಮಾರನೇ ದಿನ ಬಾಲಕಿಯನ್ನು ಕರೆದುಕೊಂಡು ಹೋಗಿ ಬೆದರಿಕೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಜೊತೆಗೆ ತನ್ನ ಮತ್ತೊಬ್ಬ ಸ್ನೇಹಿತನಿಗೆ ಹೇಳಿದ್ದಾನೆ. ಆತ ಕೂಡ ಬಾಲಕಿಗೆ ಬೆದರಿಕೆ ಹಾಕಿ ಮತ್ತೊಂದು ದಿನ ಬಾಲಕಿಯನ್ನು ಕರೆದುಕೊಂಡು ಹೋಗಿ ಅಚ್ಯಾಚಾರ ಮಾಡಿದ್ದಾನೆ.

ಮೂವರು ದುರುಳರು ವಿಡಿಯೋ ಇಟ್ಟುಕೊಂಡು ಬಾಲಕಿಗೆ ಹೆದರಿಸಿದ್ದಾರೆ. ಹೀಗಾಗಿ ಬಾಲಕಿ, ತನ್ನ ಮೇಲೆ ಅತ್ಯಾಚಾರ ನಡೆದ್ರು ಮನೆಯವರಿಗೆ ಈ ಬಗ್ಗೆ ಹೇಳಿರಲಿಲ್ಲ. ಆದರೆ ನಿನ್ನೆ ಬಾಲಕಿಗೆ ಹೊಟ್ಟೆ ನೋವು ಸೇರಿದಂತೆ ಕೆಲ ಭಾಗಗಳಲ್ಲಿ ನೋವು ಕಾಣಿಸಿಕೊಂಡಾಗ, ತಾಯಿ ವಿಚಾರಿಸಿದಾಗ ಬಾಲಕಿ ತನ್ನ ಮೇಲೆ ನಡೆದಿರೋ ಅತ್ಯಾಚಾರ ಬಗ್ಗೆ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಇಂದು ಬಾಲಕಿ ಮತ್ತು ಬಾಲಕಿಯ ತಾಯಿ ಶಹರ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಇನ್ನು ಮೂವರು ಆರೋಪಿಗಳು ಕೂಡ ಹದಿನಾಲ್ಕರಿಂದ ಹದಿನೈದು ವರ್ಷದವರಾಗಿದ್ದು, ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದಾರಂತೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಶಹರ ಠಾಣೆಯ ಪೊಲೀಸರು ಮೂವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಬಾಲಕಿ ಗುಣಮುಖಳಾಗಿದ್ದಾಳೆ.

ಅಪ್ರಾಪ್ತ ಬಾಲಕಿ ಚುಡಾಯಿಸಿದ ವಿದ್ಯಾರ್ಥಿಗಳು 

ಒಂದಡೇ ಮೂವರು ಅಪ್ರಾಪ್ತ ಬಾಲಕರು, ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಪ್ರಕರಣ ಇಂದು ಶಹರ ಠಾಣೆಯಲ್ಲಿ ದಾಖಲಾಗಿದ್ದರೆ, ಇಂದು ಹುಬ್ಬಳ್ಳಿ ನಗರದ ಅಶೋಕ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ನಗರದ ಖಾಸಗಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ನಿನ್ನೆ ಶಾಲಾ ವಾರ್ಷಿಕೋತ್ಸವ ಮುಗಿಸಿಕೊಂಡು ಮನೆಗೆ ಹೋಗುವಾಗ, ಅದೇ ಶಾಲೆಯ ಒಂಬತ್ತನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಚುಡಾಯಿಸಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ ಬಾಲಕಿಗೆ ಕಪಾಳಕ್ಕೆ ಹೊಡೆದಿದ್ದರಂತೆ. ಹೀಗಾಗಿ ಬಾಲಕಿ ತನ್ನ ಹೆತ್ತವರನ್ನು ಕರೆಸಿದ್ದಾಳೆ.

ಬಾಲಕಿ ಹೆತ್ತವರು ಹಲ್ಲೆ ಮಾಡಿದ ಬಾಲಕರಿಗೆ ಬುದ್ದಿ ಹೇಳಿದ್ದರಂತೆ. ಇದರಿಂದ ಕುಪಿತಗೊಂಡ ಇಬ್ಬರು ಬಾಲಕರು, ತಮ್ಮ ಏರಿಯಾದಲ್ಲಿರುವ ಇಬ್ಬರು ಪುಡಿ ರೌಡಿಗಳನ್ನು ಕರೆದುಕೊಂಡು ಬಂದು ಬಾಲಕಿ ಮತ್ತು ಬಾಲಕಿಯ ತಂದೆ ಮೇಲೆ ಹಲ್ಲೆ ಮಾಡಿಸಿದ್ದಾರಂತೆ. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ನಾಲ್ವರ ವಿರುದ್ದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ವರನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ಪೊಲೀಸ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಿಷ್ಟು

ಈ ಎರಡು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರೋ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ ಆಯುಕ್ತ ಎನ್ ಶಶಿಕುಮಾರ್, ಪಾಲಕರು ಮಕ್ಕಳ‌ ಬಗ್ಗೆ ಜಾಗೃತಿ ವಹಿಸಬೇಕು. ತಾವು ಮನೆಯಲ್ಲಿ ಇಲ್ಲದೇ ಇದ್ದಾಗ ಮಕ್ಕಳು ಏನು ಮಾಡ್ತಾರೆ ಅನ್ನೋ ಬಗ್ಗೆ ಹೆಚ್ಚು ಗಮನಹರಿಸಬೇಕು ಅಂತ ಹೇಳಿದ್ದಾರೆ.

ಇದನ್ನೂ ಓದಿ: ಯಲ್ಲಾಪುರ: ವಿವಾಹಿತ ಮಹಿಳೆ ಜತೆ ಯುವಕನ ಲವ್, ಮದುವೆಯಾಗಲು ಒಪ್ಪದ್ದಕ್ಕೆ ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿ

ಅಪ್ರಾಪ್ತರೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದು ನಂತರ ವಿಡಿಯೋ ಮಾಡಿಟ್ಟುಕೊಂಡಿದ್ದ ಪ್ರಕರಣ, ಮತ್ತೊಂದೆಡೆ ಅಪ್ರಾಪ್ತ ಬಾಲಕಿಗೆ ಅಪ್ರಾಪ್ತ ಬಾಲಕರೇ ಕಿರುಕುಳ ನೀಡಿ ಹಲ್ಲೆ ಮಾಡಿದ್ದ ಘಟನೆಯಿಂದ ಹುಬ್ಬಳ್ಳಿ ಜನರು ಶಾಕ್ ಆಗಿದ್ದಾರೆ. ಈ ನಿಟ್ಟಿನಲ್ಲಿ ಹೆತ್ತವರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ಗಮನಹರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:03 pm, Sat, 3 January 26