AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿಯಲ್ಲಿ ಪ್ಲಾಸ್ಟಿಕ್​​ನಿಂದ ನಿರ್ಮಾಣವಾಯ್ತು ರಸ್ತೆ: ಹೊಸ ಐಡಿಯಾದಿಂದ ಪಾಲಿಕೆಗೆ ಉಳಿತಾಯ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ರಸ್ತೆ ನಿರ್ಮಾಣ ಮಾಡುವ ಮೂಲಕ ಹೊಸ ಪ್ರಯತ್ನಕ್ಕೆ ಕೈಹಾಕಿದೆ. ಇದರಿಂದ ಗುಣಮಟ್ಟದ ರಸ್ತೆ ನಿರ್ಮಾಣದೊಂದಿಗೆ ಪಾಲಿಕೆಯ ಬೊಕ್ಕಸಕ್ಕೆ ಹಣವೂ ಉಳಿತಾಯವಾಗುತ್ತಿದೆ. ಈ ವಿಧಾನ ಕಡಿಮೆ ವೆಚ್ಚದ್ದಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ. ಇದು ರಾಜ್ಯದ ಇತರ ಪಾಲಿಕೆಗಳಿಗೆ ಮಾದರಿಯಾಗಿದೆ.

ಹುಬ್ಬಳ್ಳಿಯಲ್ಲಿ ಪ್ಲಾಸ್ಟಿಕ್​​ನಿಂದ ನಿರ್ಮಾಣವಾಯ್ತು ರಸ್ತೆ: ಹೊಸ ಐಡಿಯಾದಿಂದ ಪಾಲಿಕೆಗೆ ಉಳಿತಾಯ
ಹುಬ್ಬಳ್ಳಿ-ಧಾರವಾಡ ಪಾಲಿಕೆ, ಪ್ಲಾಸ್ಟಿಕ್​ನಿಂದ ನಿರ್ಮಾಣವಾದ​​ ರಸ್ತೆ
ಸಂಜಯ್ಯಾ ಚಿಕ್ಕಮಠ
| Updated By: ಗಂಗಾಧರ​ ಬ. ಸಾಬೋಜಿ|

Updated on:May 15, 2025 | 11:32 AM

Share

ಹುಬ್ಬಳ್ಳಿ, ಮೇ 15: ಕಸದಿಂದ ರಸ ಎಂಬ ಮಾತಿದೆ. ಈ ಮಾತನ್ನು ಮಾಡಿ ತೋರಿಸಿದ್ದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Municipal Corporation). ಹೌದು ಮನೆಗಳಿಂದ ಸಂಗ್ರಹಿಸಿದ ಪ್ಲಾಸ್ಟಿಕ್​ ಅನ್ನು ಹೀಗೂ ಬಳಸಬಹುದು ಅನ್ನೋದನ್ನು ಪಾಲಿಕೆ ರಾಜ್ಯದಲ್ಲಿ ಮೊದಲ ಬಾರಿಗೆ ಮಾಡಿ ತೋರಿಸಿದೆ. ತ್ಯಾಜ್ಯ ಸಂಗ್ರಹಣೆಯಲ್ಲಿ ಬಂದ ಪ್ಲಾಸ್ಟಿಕ್ (Plastic) ಅನ್ನು ಇದೀಗ ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವ ಮೂಲಕ, ಗುಣಮಟ್ಟದ ರಸ್ತೆ ನಿರ್ಮಾಣದ ಜೊತೆಗೆ ಪಾಲಿಕೆ ಬೊಕ್ಕಸಕ್ಕೆ ಹಣವನ್ನು ಕೂಡ ಉಳಿಸುತ್ತಿದೆ. ಪ್ಲಾಸ್ಟಿಕ್ ಇದೀಗ ಬರಿ ತ್ಯಾಜ್ಯವಲ್ಲಾ, ರಸ್ತೆಗೆ ಸಂಪನ್ಮೂಲವು ಆಗಿದೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಹೊಸ ಐಡಿಯಾ: ಉಳಿಯಿತು ಹಣ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಇದೀಗ ರಾಜ್ಯದಲ್ಲಿಯೇ ಮಾದರಿಯಾದ ಕೆಲಸಕ್ಕೆ ಕೈಹಾಕಿದೆ. ಅದುವೇ ನಿರುಪಯುಕ್ತ ಪ್ಲಾಸ್ಟಿಕ್ ಬಳಸಿ ರಸ್ತೆ ನಿರ್ಮಾಣ ಮಾಡುವುದು. ಇದೀಗ ತ್ಯಾಜ್ಯ ವಿಲೇವಾರಿ ಸರ್ಕಾರಕ್ಕೆ ದೊಡ್ಡ ಸಮಸ್ಯೆಯಾಗದೆ. ಅದರಲ್ಲೂ ಕೊಳೆಯದ ಪ್ಲಾಸ್ಟಿಕ್ ಹೆಚ್ಚು ಸಂಗ್ರಹವಾಗುತ್ತಿದ್ದು, ಅದನ್ನು ವಿಲೇವಾರಿ ಮಾಡುವುದಕ್ಕೆ ಸರ್ಕಾರ ಕೋಟಿ ಕೋಟಿ ರೂ ಹಣವನ್ನು ಖರ್ಚು ಮಾಡುತ್ತಿದೆ. ಆದರೆ ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಇದೊಂದು ಐಡಿಯಾ, ಇದೀಗ ಸಂಗ್ರಹವಾಗುವ ತ್ಯಾಜ್ಯಕ್ಕೆ ಹಣ ಖರ್ಚು ಮಾಡೋದಕ್ಕಿಂತ, ಅದರಿಂದಲೇ ಪಾಲಿಕೆಯ ಬೊಕ್ಕಸಕ್ಕೆ ಹಣ ಉಳಿಸುವ ಹೊಸದೊಂದು ಕೆಲಸಕ್ಕೆ ಮುಂದಾಗಿದೆ.

ಇದನ್ನೂ ಓದಿ: ಹೈಟೆಕ್ ಆಗಲಿದೆ ಜೋಗ ಜಲಪಾತ: ಆರ್ಟ್ ಗ್ಯಾಲರಿ, ಆಧುನಿಕ ವ್ಯೂ ಡೆಕ್ ಸೇರಿ 184 ಕೋಟಿ ವೆಚ್ಚದಲ್ಲಿ ಇನ್ನಷ್ಟು ಸೌಕರ್ಯ

ಹೌದು.. ಕೋಟಿ ಕೋಟಿ ರೂ ಖರ್ಚು ಮಾಡಿ, ಡಾಂಬರು ಹಾಕಿದರು ಕೂಡಾ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವುದಕ್ಕೆ ಆಗದ ಈ ಕಾಲದಲ್ಲಿ, ಕಡಿಮೆ ಖರ್ಚಿನಲ್ಲಿ ಪ್ಲಾಸ್ಟಿಕ್ ಅನ್ನು ಬಳಸಿ, ಡಾಂಬರು ರಸ್ತೆ ನಿರ್ಮಾಣ ಮಾಡಬಹುದು. ಆ ಮೂಲಕ ಸಂಗ್ರಹವಾಗುವ ಪ್ಲಾಸ್ಟಿಕ್​ಗೂ ಮುಕ್ತಿ ಸಿಗುತ್ತದೆ. ಜೊತೆಗೆ ಗುಣಮಟ್ಟದ ರಸ್ತೆ ಕೂಡ ನಿರ್ಮಾಣ ಮಾಡಬಹುದು ಅನ್ನೋದನ್ನು ಪಾಲಿಕೆ ಮಾಡಿ ತೋರಿಸಿದೆ.

ಹೆಚ್ಚು ವರ್ಷ ಬಾಳಿಕೆ: ಕಡಿಮೆ ಖರ್ಚು

ಹುಬ್ಬಳ್ಳಿ ನಗರದ ಲಿಂಗರಾಜ ನಗರದಲ್ಲಿ ಇದೀಗ ಪ್ರಾಯೋಗಿಕವಾಗಿ ಒಂದುವರೆ ಕಿ.ಮೀ ರಸ್ತೆಗೆ ಪ್ಲಾಸ್ಟಿಕ್ ಬಳಕೆ ಮಾಡಲಾಗಿದೆ. ತ್ಯಾಜ್ಯ ಬಳಕೆ ಮಾಡಿ ನಿರ್ಮಾಣ ಮಾಡಿರುವ ಪ್ಲಾಸ್ಟಿಕ್ ರಸ್ತೆ, ಉಳಿದೆಲ್ಲಾ ರಸ್ತೆಗಳಿಗಿಂತ ಗುಣಮಟ್ಟದಿಂದ ಕೂಡಿದ್ದು, ಹೆಚ್ಚು ವರ್ಷ ಬಾಳಿಕೆ ಬರುತ್ತೆ. ಜೊತೆಗೆ ಖರ್ಚು ಕೂಡ ಕಡಿಮೆ. ಕೇಂದ್ರ ಸರ್ಕಾರದ ಕ್ಲೀನ್ ಏರ್ ಯೋಜನೆಯಲ್ಲಿ ಇಂತಹದೊಂದು ಕಾರ್ಯವನ್ನು ಪಾಲಿಕೆ ಕೈಗೊಂಡಿದ್ದು, ಪಾಲಿಕೆಯ ಆಯುಕ್ತ ಡಾ.ರುದ್ರೇಶ್ ಘಾಳಿ, ಹೆಚ್ಚು ಶ್ರಮವಹಿಸಿ ಇಂತಹದೊಂದು ವಿಶಿಷ್ಟ ಕೆಲಸವನ್ನು ಹುಬ್ಬಳ್ಳಿಯಲ್ಲಿ ಆರಂಭಿಸಿದ್ದಾರೆ.

ಅವಳಿ ನಗರದಲ್ಲಿ ಪ್ರತಿನಿತ್ಯ ಟನ್ ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತದೆ. ಇದನ್ನು ಪಾಲಿಕೆಯ ಘಟಕಗಳಲ್ಲಿ ಸಣ್ಣ ಸಣ್ಣ ಚೂರುಗಳನ್ನು ಮಾಡಲಾಗುತ್ತದೆ. ನಂತರ ಇದೇ ಪ್ಲಾಸ್ಟಿಕ್ ಚೂರುಗಳನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುತ್ತದೆ. ಒಂದು ರಸ್ತೆ ನಿರ್ಮಾಣಕ್ಕೆ ನೂರು ಕಿಲೋ ಡಾಂಬರ್ ಅವಶ್ಯಕತೆ ಇದ್ದರೆ, ಅಲ್ಲಿ 92 ಕಿಲೋ ಡಾಂಬರ್ ಅನ್ನು ಮಾತ್ರ ಬಳಸಿ, ಉಳಿದ ಶೇಕಡಾ ಎಂಟರಷ್ಟು ಪ್ಲಾಸ್ಟಿಕ್ ಬಳಕೆ ಮಾಡಿಕೊಳ್ಳಲಾಗುತ್ತದೆ.

Photos (4)

ಪ್ಲಾಸ್ಟಿಕ್ ಬಳಕೆಯಿಂದ ಡಾಂಬರ್ ಹಾಕುವ ಪ್ರಮಾಣ ಕಡಿಮೆಯಾದಂತಾಗುತ್ತದೆ. ಪ್ಲಾಸ್ಟಿಕ್ ಸಾಮಾನ್ಯವಾಗಿ ನೀರನ್ನು ಹಿಡಿಯದೇ ಇರುವುದರಿಂದ, ರಸ್ತೆಯಲ್ಲಿ ತಗ್ಗು ಗುಂಡಿಗಳು ಬೀಳುವುದು ತಪ್ಪುತ್ತದೆ. ಜೊತೆಗೆ ಡಾಂಬರ್​ನಲ್ಲಿ ಮಿಕ್ಸ್ ಆಗಿ ಜಲ್ಲಿಕಲ್ಲನ್ನು ಗಟ್ಟಿಯಾಗಿ ಹಿಡಿದುಕೊಳ್ಳುವದರಿಂದ ರಸ್ತೆ ಗಟ್ಟಿಮುಟ್ಟಾಗುತ್ತದೆಯಂತೆ. ಇನ್ನು ಪ್ರತಿ ಕಿ.ಮೀ ರಸ್ತೆಗೆ, ಒಂದುವರೆ ಲಕ್ಷ ರೂ ಹಣವನ್ನು ಉಳಿತಾಯ ಮಾಡಬಹುದಂತೆ. ನಿರುಪಯುಕ್ತ ಅಂತ ಹೇಳುವ ಪ್ಲಾಸ್ಟಿಕ್​ನಿಂದ ಗುಣಮಟ್ಟದ ರಸ್ತೆ ಜೊತೆಗೆ, ಖರ್ಚನ್ನು ಕೂಡ ಕಡಿಮೆ ಮಾಡಬಹುದು ಅನ್ನೋದನ್ನು ಪಾಲಿಕೆಯ ಅಧಿಕಾರಿಗಳು ಮಾಡಿ ತೋರಿಸಿದ್ದಾರೆ.

ಇದನ್ನೂ ಓದಿ: ಬಾಬಾಬುಡನ್​​ ದರ್ಗಾದಲ್ಲಿ ಮತ್ತೊಂದು ವಿವಾದ: ಗೋರಿಗಳ ಮಧ್ಯೆದ ಔದುಂಬರ ವೃಕ್ಷ ಪೂಜೆಗೆ ಬಜರಂಗದಳ ಪಟ್ಟು

ಇದೀಗ ಪಾಲಿಕೆಯಿಂದ ನಿರ್ಮಾಣ ಮಾಡುವ ಪ್ರತಿಯೊಂದು ರಸ್ತೆ ಕೂಡ ಇನ್ನು ಮುಂದೆ ಪ್ಲಾಸ್ಟಿಕನ್ನು ಬಳಸಿ, ರಸ್ತೆ ಮಾಡಲು ಪಾಲಿಕೆ ಮುಂದಾಗಿದೆ. ಇದರಿಂದ ಗುಣಮಟ್ಟದ ರಸ್ತೆ ನಿರ್ಮಾಣ ಜೊತೆಗೆ ಹಣವು ಕೂಡ ಪಾಲಿಕೆಗೆ ಉಳಿತಾಯವಾಗುತ್ತಿದೆ. ಜೊತೆಗೆ ಪರಿಸರಕ್ಕೂ ಕೂಡ ದೊಡ್ಡ ಕೊಡುಗೆ ಕೊಟ್ಟಂತಾಗುತ್ತಿದೆ. ಇದೇ ಕೆಲಸವನ್ನು ಎಲ್ಲಾ ನಗರಸಭೆ, ಪಾಲಿಕೆಗಳು ಪಾಲಿಸದರೆ, ಸಂಗ್ರಹವಾಗುವ ಪ್ಲಾಸ್ಟಿಕ್ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕೆಲಸವಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:30 am, Thu, 15 May 25