ಕರ್ನಾಟಕದ 13 ರೈಲು ನಿಲ್ದಾಣಗಳ ನವೀಕರಣಕ್ಕೆ ಮೋದಿ ಚಾಲನೆ: ಧಾರವಾಡದಲ್ಲಿ ಪ್ರಲ್ಹಾದ್​​​ ಜೋಶಿ ಮಾತು

ಪ್ರಧಾನಿ ನರೇಂದ್ರ ಮೋದಿಯವರು ಇಂದು (ಆ.06) ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರಾಜ್ಯದ 13 ರೈಲು ನಿಲ್ದಾಣಗಳು ಸೇರಿಂದತೆ ದೇಶದ 508 ನಿಲ್ದಾಣಗಳ ನವೀಕರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. 303 ಕೋಟಿ ವೆಚ್ಚದಲ್ಲಿ ರಾಜ್ಯದ 13 ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ ಏರಲಿವೆ.

ಕರ್ನಾಟಕದ 13 ರೈಲು ನಿಲ್ದಾಣಗಳ ನವೀಕರಣಕ್ಕೆ ಮೋದಿ ಚಾಲನೆ: ಧಾರವಾಡದಲ್ಲಿ ಪ್ರಲ್ಹಾದ್​​​ ಜೋಶಿ ಮಾತು
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
Follow us
| Updated By: ವಿವೇಕ ಬಿರಾದಾರ

Updated on:Aug 06, 2023 | 12:42 PM

ಧಾರವಾಡ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಇಂದು (ಆ.06) ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ (Amrit Bharat Station) ರಾಜ್ಯದ 13 ರೈಲು ನಿಲ್ದಾಣಗಳು (Railway Stations) ಸೇರಿಂದತೆ ದೇಶದ 508 ನಿಲ್ದಾಣಗಳ ನವೀಕರಣಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. 303 ಕೋಟಿ ವೆಚ್ಚದಲ್ಲಿ ರಾಜ್ಯದ 13 ರೈಲ್ವೆ ನಿಲ್ದಾಣಗಳು ಮೇಲ್ದರ್ಜೆಗೆ ಏರಲಿವೆ. ಅಳ್ನಾವರ, ಬಳ್ಳಾರಿ, ಘಟಪ್ರಭಾ, ಗೋಕಾಕ್​ ರೋಡ್, ಬೀದರ್, ಮಂಗಳೂರು ಜಂಕ್ಷನ್, ಹರಿಹರ, ಗದಗ, ಅರಸೀಕೆರೆ, ವಾಡಿ, ಕಲಬುರಗಿ ಜಂಕ್ಷನ್, ಶಹಬಾದ್, ಕೊಪ್ಪಳ ನಿಲ್ದಾಣಗಳು ಮೇಲ್ದರ್ಜೆಗೆ ಏರಲಿವೆ.

ಈ ಸಂಬಂಧ ಧಾರವಾಡ ಜಿಲ್ಲೆಯ ಅಳ್ನಾವರದಲ್ಲಿ ನಡೆದ ಕಾರ್ಯಕ್ರಮವನ್ನು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಹುಬ್ಬಳ್ಳಿ-ಧಾರವಾಡ ಕೇಂದ್ರ ಶಾಸಕ ಮಹೇಶ ಟೆಂಗಿನಕಾಯಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಅಳ್ನಾವರ ರೈಲ್ವೆ ನಿಲ್ದಾಣದ ಅಭಿವೃದ್ಧಿ ಬಹುದಿನಗಳ ಬೇಡಿಕೆಯಾಗಿತ್ತು. ಹೊಸತನದ ಕಲ್ಪನೆಯ ಯೋಜನೆ ಹಿಂದಿನ ಸರ್ಕಾರಗಳಲ್ಲಿ ಆಗಲಿಲ್ಲ. 2014ರಲ್ಲಿ ಬಿಜೆಪಿ ಬಂದ ಮೇಲೆ ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದರು.

ಮೋದಿಯವರು ಬಂದ ಮೇಲೆ ರೈಲ್ವೆ ನಿರ್ವಹಣೆಯ ವೇಗ ಬಂದಿದೆ. ಗುಣಮಟ್ಟ ಕಾಪಾಡಲು ಬಹಳಷ್ಟು ಕೆಲಸ ಮಾಡುತ್ತಿದ್ದೇವೆ. 2008-09ರ ಬಜೆಟ್‌ ವೇಳೆ ಮುನಿಯಪ್ಪ ರೈಲ್ವೆ ರಾಜ್ಯ ಸಚಿವರಾಗಿದ್ದರು. ಆಗ ಒಂದು ಬಾರಿಗೆ ರಾಜ್ಯಕ್ಕೆ ಕೇವಲ 900 ಕೋಟಿ ರೂ. ಕೊಟ್ಟಿದ್ದರು. 900 ಕೋಟಿ ಕೊಟ್ಟಿದ್ದೇವೆಂದು ಅಭಿಮಾನದಿಂದ ಮುನಿಯಪ್ಪ ಹೇಳಿದ್ದರು. 900 ಕೋಟಿ ಕೊಟ್ಟಿದ್ದೇ ದೊಡ್ಡದು ಎನ್ನುವ ರೀತಿಯಲ್ಲಿ ಮಾತನಾಡಿದ್ದರು. ಆದರೆ ನಮ್ಮ ಸರ್ಕಾರ ಕಳೆದ ವರ್ಷದ ಬಜೆಟ್‌ನಲ್ಲಿ 7,100 ಕೋಟಿ ರಾಜ್ಯಕ್ಕೆ ಕೊಟ್ಟಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಆಗಸ್ಟ್ 1 ರಿಂದ 7 ರವರೆಗೆ ಎದೆ ಹಾಲುಣಿಸುವ ಸಪ್ತಾಹ, ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಯಲ್ಲಿಯೂ ಇದೆ ಎದೆ ಹಾಲಿನ ಬ್ಯಾಂಕ್

ಅನೇಕ ರೈಲ್ವೆ ಕ್ರಾಸಿಂ‌ಗ್‌ಗಳ ಮೇಲ್ಸೇತುವೆ ಕಾಮಗಾರಿಗಳು ನಡೆಯುತ್ತಿವೆ. ಧಾರವಾಡದಿಂದ ವಂದೇ ಭಾರತ್ ರೈಲು ಶುರುವಾಗಿದೆ. 60 ವರ್ಷದಲ್ಲಿ ಕಾಂಗ್ರೆಸ್ ಮಾಡದಿರುವುದನ್ನು 9 ವರ್ಷದಲ್ಲಿ ನಾವು ಮಾಡಿದ್ದೇವೆ. ಮೊದಲು ರೈಲ್ವೆಗಳ ನಿರ್ವಹಣೆ ಸರಿಯಾಗಿ ಆಗುತ್ತಿರಲಿಲ್ಲ. ಮೋದಿಯವರು ಬಂದ ಮೇಲೆ ನಿರ್ವಹಣೆಗೆ ವೇಗ ಬಂದಿದೆ. ವಿವಿಧ ರೀತಿಯಲ್ಲಿ ಅಭಿವೃದ್ಧಿ ಆಗುತ್ತಿದೆ. ಇದರ ಗುಣಮಟ್ಟ ಕಾಪಾಡಲು ಬಹಳಷ್ಟು ಕೆಲಸ ಮಾಡುತ್ತಿದ್ದೇವೆ. 47 ಸಾವಿರ ಕೋಟಿ ರೂ. ಮೌಲ್ಯದ ಕೆಲಸ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

24 ಕೋಟಿ ರೂಪಾಯಿ ವೆಚ್ಚದಲ್ಲಿ ಬೀದರ್ ರೈಲು ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಲಾಗುತ್ತದೆ. 2024 ಜೂನ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ. ಗದಗ ರೈಲು ನಿಲ್ದಾಣವನ್ನು 23.5 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತದೆ. ಹಾಸನ‌ ಜಿಲ್ಲೆಯ ಅರಸೀಕೆರೆ ರೈಲು ನಿಲ್ದಾಣವನ್ನು 34 ಕೋಟಿ ರೂ. ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತದೆ. ಇನ್ನು ಕಲಬುರಗಿ, ವಾಡಿ, ಶಹಬಾದ್, ಗಾಣಗಾಪುರ ಮತ್ತು ಕೊಪ್ಪಳ ಹಾಗೂ ಹುಲಗಿ ರೈಲು ನಿಲ್ದಾಣಗಳು ಮರು ಅಭಿವೃದ್ಧಿ ಮಾಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:34 pm, Sun, 6 August 23